ETV Bharat / state

ಕ್ಷೇತ್ರವೇ ಇಲ್ಲದ ಸಿದ್ದರಾಮಯ್ಯ ಇನ್ನೂಬ್ಬರನ್ನು ಹೇಗೆ ಗೆಲ್ಲಿಸುತ್ತಾರೆ: ಈಶ್ವರಪ್ಪ ವಾಗ್ದಾಳಿ

author img

By

Published : Mar 23, 2023, 8:44 PM IST

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ಮಮುಂದುವರಿಸಿದ್ದಾರೆ.

KS Eshwarappa
ಕೆ.ಎಸ್.ಈಶ್ವರಪ್ಪ

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದರು.

ಶಿವಮೊಗ್ಗ: ಕ್ಷೇತ್ರವೇ ಇಲ್ಲದಿರುವ ಸಿದ್ದರಾಮಯ್ಯನವರು ಬೇರೆಯವರನ್ನು ಹೇಗೆ ಗೆಲ್ಲಿಸುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದ ಅವರು, ವರುಣಾ, ಚಾಮುಂಡೇಶ್ವರಿ, ಬದಾಮಿ ಹೀಗೆ ಕ್ಷೇತ್ರವಿಲ್ಲದೇ ಇರುವುದರಿಂದ ಸಿದ್ದರಾಮಯ್ಯ ಅವರಿಗೆ ದಿಕ್ಕೇ ತೋಚದಂತೆ ಆಗಿದೆ. ಮೊದಲು ಹೈಕಮಾಂಡ್ ಹೇಳಿದಂತೆ ಸ್ಪರ್ಧೆ ಅಂತ ಅಂದ್ರು, ಈಗ ಹೆಂಡ್ತಿ‌ ಹಾಗೂ ಮಗನನ್ನು ಕೇಳಿ‌ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಇಂತಹವರು ಬೇರೆಯವರನ್ನು ಹೇಗೆ ಗೆಲ್ಲಿಸುತ್ತಾರೆ ಎಂದು ಈಶ್ವರಪ್ಪ ಕೇಳಿದರು.

ಡಿ.ಕೆ. ಶಿವಕುಮಾರ್ ನೇರವಾಗಿ ಒಕ್ಕಲಿಗ ಸಮಾಜದವರ ಬಳಿ ನನ್ನನ್ನು ಸಿಎಂ ಮಾಡಲು ನನ್ನೂಂದಿಗೆ ಬನ್ನಿ ಹೇಳ್ತಾ ಇದ್ದಾರೆ. ಇಡಿ ದೇಶವೇ ನನ್ನ‌ ಮನೆ ಎಂದು ಹೇಳುವ ಮೋದಿ ಅವರಿಂದ ನಮಗೆ ಬಹುಮತ ಬರುವ ವಿಶ್ಬಾಸವಿದೆ ಎಂದರು. ನಾವು ರಾಷ್ಟ್ರೀಯವಾದಿಗಳು, ನಮ್ಮನ್ನು‌ ನೀವು ಕೋಮುವಾದಿಗಳು ಎಂದು‌ ಕರೆಯುತ್ತಿದ್ದಿರಿ‌ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.

ಎದುರಾಳಿಯ ಬಗ್ಗೆ ಗಮನ ಇಟ್ಟವನು ರಾಜಕಾರಣಿ-ಈಶ್ವರಪ್ಪ: ಸಿದ್ದರಾಮಯ್ಯ 224 ಕ್ಷೇತ್ರದಲ್ಲಿ ಎಲ್ಲಿ‌ ನಿಂತರು ಅವರ ಪಕ್ಷದವರೇ ಸೋಲಿಸುತ್ತಾರೆ. ಸಿಎಂ ಆದವರು, ಸಿಎಂ ಆಗಬೇಕಾದರು ಇನ್ನು ಬಸ್ ಯಾತ್ರೆಯಲ್ಲಿಯೇ‌ ಇದ್ದಾರೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯನವರು ಅತಿ ಹೆಚ್ಚು ಮುಸ್ಲಿಮರು ಇರುವಂತಹ ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ನಿಮಗೆ ಯಾಕೆ ಚಿಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎದುರಾಳಿಯ ಬಗ್ಗೆ ಗಮನ ಇಟ್ಟವನು ರಾಜಕಾರಣಿ ಎಂದು ಈಶ್ವರಪ್ಪ ಹೇಳಿದರು.

ಐತಿಹಾಸಿಕ ಸಮಾವೇಶ: ಐತಿಹಾಸಿಕ ಮಹಾಸಂಗಮ ದಾವಣಗೆರೆಯಲ್ಲಿ ಮಾ.25ರಂದು ನಡೆಯಲಿದೆ. ಮಹಾಸಂಗಮಕ್ಕೆ ಮೋದಿ ಅವರು ಭಾಗಿಯಾಗಲಿದ್ದಾರೆ. 224 ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸಲಾಗಿದೆ. ನಮ್ಮ‌ ನಿರೀಕ್ಷೆಗೂ‌ ಮೀರಿ ಸ್ಪಂದನೆ ಲಭಿಸಿದೆ. ದಾವಣಗೆರೆಯ ಸಮಾವೇಶದಲ್ಲಿ ಕನಿಷ್ಠ 10 ಲಕ್ಷ ಜನ ಭಾಗಿಯಾಗಲಿದ್ದಾರೆ. ನಮ್ಮ ಜಿಲ್ಲೆಯಿಂದ 25 ಸಾವಿರ ಜನ ಸೇರಲಿದ್ದಾರೆ. ಇಷ್ಟು ದೊಡ್ಡ ಸಮಾವೇಶ ಯಾರು ಮಾಡಿಲ್ಲ. ಇದರಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಸ್ಪಷ್ಟ ಸೂಚನೆ ದೂರಕಿದಂತೆ ಆಗುತ್ತಿದೆ ಎಂದರು. ಪ್ರಧಾನಿ ಮೋದಿ ಅವರು ಬರುತ್ತಿರುವುದರಿಂದ ನಮಗೆ ದೊಡ್ಡ ಶಕ್ತಿ ಬರಲಿದೆ ಎಂದರು.

ಕಾಮೆಂಟ್​ಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ: ನಾನು ಕಾಮೆಂಟ್​ಗಳಿಗೆ ತಲೆಕೆಡಿಸಿಕೊಳ್ಳುದಿಲ್ಲ ಎಂದು ಹೇಳುವ ಮೂಲಕ ಆಯನೂರು ಮಂಜುನಾಥ್ ಅವರಿಗೆ ಕೆ.ಎಸ್. ಈಶ್ವರಪ್ಪ ಟಾಂಗ್​ ಕೊಟ್ಟರು. ಆಯನೂರು ಮಂಜುನಾಥ್ ಮಾಧ್ಯಮಗೋಷ್ಟಿ ನಡೆಸಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರು ಮಾತನಾಡುತ್ತಾರೆ ಎಂದು ಈಶ್ವರಪ್ಪ ಅವರ ಕಡೆ ಕೈ ಮಾಡಿ ತೋರಿಸಿದರು.

ನಾನು ಏನ್ ಹೇಳಬೇಕು ಅದನ್ನು ಹೇಳುತ್ತೇನೆ. ಎಂಪಿ ಅವರು ಏನು ಹೇಳಬೇಕೂ ಅದನ್ನು ಎಂಪಿ ಹೇಳುತ್ತಾರೆ. ಅಧ್ಯಕ್ಷರು ಏನ್ ಹೇಳಬೇಕೊ ಅದನ್ನು ಅಧ್ಯಕ್ಷರು ಹೇಳ್ತಾರೆ. ಆಯನೂರು ಮಂಜುನಾಥ್ ಅವರ ಕುರಿತ ಪ್ರಶ್ನೆಗೆ ಪಕ್ಷದ ಅಧ್ಯಕ್ಷರು ಹೇಳ್ತಾರೆ. ನಮ್ಮ ಕೇಂದ್ರದ ಚುನಾವಣಾ ಸಮಿತಿ ಏನ್ ತೀರ್ಮಾನ ತೆಗೆದುಕೊಂಡರು ಅದಕ್ಕೆ ನಾವು ಬದ್ಧ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

ಬಿಜೆಪಿ‌ ಜಿಲ್ಲಾ‌ಧ್ಯಕ್ಷರು ಹೇಳಿದ್ದೇನು?: ಬಿಜೆಪಿ‌ ಜಿಲ್ಲಾ‌ಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಮೋದಿ ಅವರ ಸಾಧನೆ, ವರ್ಚಸ್ಸು, ರಾಜ್ಯದಲ್ಲಿ ಬಿಎಸ್​ವೈ, ಬೊಮ್ಮಾಯಿ ಸಾಧನೆಯಿಂದ ಬಿಜೆಪಿ‌ ಚಿಹ್ನೆ ಸಿಕ್ಕರೆ ಅನುಕೂಲ ಅಂತ ಆಕಾಂಕ್ಷಿಗಳು ಬಯಸುತ್ತಾರೆ. ಯಾತ್ರೆಯಲ್ಲಿ ಭಾಗಿಯಾದವರ ಕೆಲಸದ ಬಗ್ಗೆ ಪಕ್ಷ ವಿರೋಧಿ ಚಟುವಟಿಕೆಯ ಬಗ್ಗೆ ಕೇಂದ್ರದವರು ಗಮನ ಹರಿಸುತ್ತಾರೆ. ಎಲ್ಲವನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ. ವರಿಷ್ಟರು ಗಮನ ಹರಿಸುತ್ತಾರೆ. ಗೆಲುವಿನ ಆಧಾರ, ಜಗತ್ತಿನ ಅತಿ ದೊಡ್ಡ ಪಕ್ಷದಲ್ಲಿ ಇಂತಹ ಚಟುವಟಿಕೆ ಸಹಜ. ಮಂಜಣ್ಣ ಬಹಳ ದೊಡ್ಡವರು, ಅವರಿಗೆ ನಾಲ್ಕು ಮನೆಯಲ್ಲಿ ಅವಕಾಶ ನೀಡಲಾಗಿದೆ. ಬ್ಯಾನರ್, ಮಾಧ್ಯಮಗೋಷ್ಟಿಗಳಿಗೂ ಮೌಲ್ಯ ಮಾಪನ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನ ಗೆಲ್ಲುತ್ತೇವೆ. ಪಕ್ಷದಿಂದ ಹೊರಗೆ ಹಾಕುವುದು ದೊಡ್ಡದಲ್ಲ. ನಮ್ಮ ಪಕ್ಷ ಗಂಗಾ‌ನದಿ ಇದ್ದಂತೆ ಎಲ್ಲರನ್ನು ಸರಿ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ: ಡಿಕೆಶಿ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.