ETV Bharat / state

ಮಲೆನಾಡ ವೈದ್ಯ ಮೋಹನ್‌ ಅವರಿಗೆ ಅರಸಿಬಂತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ

author img

By

Published : Nov 1, 2022, 9:48 AM IST

Updated : Nov 1, 2022, 1:22 PM IST

ಕಳೆದ 37 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿದ್ದು, ಇವರ 22 ಪುಸ್ತಕಗಳು ಪ್ರಕಟಗೊಂಡಿವೆ. ಅಷ್ಟೇ ಅಲ್ಲ, ಇಂಗ್ಲಿಷ್‌ನಲ್ಲಿ 1,200 ಮತ್ತು ಕನ್ನಡದಲ್ಲಿ 3 ಸಾವಿರ ಲೇಖನಗಳು ಪ್ರಕಟಗೊಂಡಿವೆ.

kannada-rajyotsava-award-to-eye-doctor-mohan
ವೈದ್ಯ ಮೋಹನ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಶಿವಮೊಗ್ಗ: ಸಾಗರದ ಜನಪ್ರಿಯ ಕಣ್ಣಿನ ತಜ್ಞ ಡಾ ಮೋಹನ್ ಅವರಿಗೆ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಾಗರದ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಇವರು ಕಳೆದ ಹತ್ತಾರು ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಲೆನಾಡ ವೈದ್ಯ ಮೋಹನ್‌ ಅವರಿಗೆ ಅರಸಿಬಂತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಡಾ ಮೋಹನ್ ಅವರು ಕಣ್ಣಿನ ಹಾಗೂ ಇತರೆ ವಿಷಯಗಳ ಕುರಿತು ಹತ್ತಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಕಳೆದ 37 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿದ್ದು, 22 ಪುಸ್ತಕಗಳನ್ನು ಕನ್ನಡದಲ್ಲೂ, ಒಂದು ಪುಸ್ತಕವನ್ನು ಇಂಗ್ಲಿಷ್​ನಲ್ಲಿಯೂ ಪ್ರಕಟಿಸಿದ್ದಾರೆ. ಇವರ 1,200 ಲೇಖನಗಳು ಇಂಗ್ಲಿಷ್​ನಲ್ಲಿ ಪ್ರಕಟವಾಗಿವೆ. ಕನ್ನಡದಲ್ಲಿ 3 ಸಾವಿರ ಲೇಖನಗಳು ಪ್ರಕಟವಾಗಿವೆ.

'ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಈ ಪ್ರಶಸ್ತಿಯು ವೈದ್ಯಕೀಯ ಸೇವೆ ಹಾಗೂ ವೈದ್ಯಕೀಯ ಸಾಹಿತ್ಯಕ್ಕೆ ಲಭಿಸಿದೆ. ಸೇವೆಯನ್ನು ಇನ್ನಷ್ಟು ಮುಂದುವರೆಸಿಕೊಂಡು ಹೋಗುತ್ತೇನೆ' ಎಂದು ಅವರು ಹೇಳಿದರು.

ಇದನ್ನೂ ಓದಿ: 2 ರೂಪಾಯಿ ಪಡೆದು ಚಿಕಿತ್ಸೆ ನೀಡುವ ಬಡವರ ಭಗವಂತನಿಗೆ ರಾಜ್ಯೋತ್ಸವ ಪ್ರಶಸ್ತಿ

Last Updated : Nov 1, 2022, 1:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.