ETV Bharat / state

ಅಂತರ ಜಿಲ್ಲಾ ದೇವಾಲಯದ ಹುಂಡಿ‌ ಕಳ್ಳರ ಬಂಧನ:12 ದೇಗುಲಗಳಲ್ಲಿ ಹುಂಡಿ ಕಳ್ಳತನ ಮಾಡಿರುವುದು ಪತ್ತೆ

author img

By

Published : Jul 8, 2023, 3:24 PM IST

ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಠಾಣೆ ವ್ಯಾಪ್ತಿ 3, ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿ 1, ಹಾವೇರಿಯ ರಟ್ಟೆಹಳ್ಳಿ-3, ದಾವಣಗೆರೆ ಹೊನ್ನಾಳಿ-1, ಚನ್ನಗಿರಿಯಲ್ಲಿ 1, ಸಂತೆಬೆನ್ನೂರು-1 ಹೀಗೆ 12 ದೇವಾಲಯ ಹುಂಡಿ ಕಳ್ಳತನ ಮಾಡಿರುವ ಇಬ್ಬರು ಕಳ್ಳರನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.

temple hundi thieves arrested
ಅಂತರ ಜಿಲ್ಲಾ ದೇವಾಲಯದ ಹುಂಡಿ ಕಳ್ಳರ ಬಂಧನ

ಶಿವಮೊಗ್ಗ: ಅಂತರ ಜಿಲ್ಲಾ ದೇವಾಲಯಗಳಲ್ಲಿ ಕಳವು ಮಾಡಿದ್ದ ಇಬ್ಬರು ಹುಂಡಿ ಕಳ್ಳರನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ, ಹಾವೇರಿ ದಾವಣಗೆರೆ ಜಿಲ್ಲೆಯ ಒಟ್ಟು 12 ದೇವಾಲಯಗಳಲ್ಲಿ ಹುಂಡಿಗಳ ಕಳ್ಳತನ ಮಾಡಿರುವುದು ಬಯಲಿಗೆ ಬಂದಿದೆ. ದಾವಣಗೆರೆ ಜಿಲ್ಲೆ ಹೂನ್ನಾಳಿ ತಾಲೂಕು ಬುಳ್ಳಾಪುರ ಗ್ರಾಮದ ಚಿನ್ನು ಅಲಿಯಾಸ್ ಡಿ.ಜೆ (26) ಹಾಗೂ ಶಿವಮೊಗ್ಗ ತಾಲೂಕು ತರಗನಹಳ್ಳಿ ಗ್ರಾಮದ ಮಣಿಕಂಠ ಅಲಿಯಾಸ್ ಮಣಿ(26) ಬಂಧಿತ ಕಳ್ಳರು.

ಕಳೆದ ತಿಂಗಳು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಂಬರಗಟ್ಟೆ ಗ್ರಾಮದ ಆಂಜನೇಯ ದೇವಾಲಯದ ಹುಂಡಿ ಕಳ್ಳತನ ಮಾಡಲಾಗಿತ್ತು. ಹುಂಡಿ ಕಳ್ಳತನದ ಆರೋಪಿಗಳನ್ನು ಪತ್ತೆಗೆ ಪೊಲೀಸರು ಜಾಲ ಬೀಸಿದ್ದರು. ಪೊಲೀಸ​ರು ತಕ್ಷಣ ಈ ಪ್ರಕರಣದಡಿ ಇಬ್ಬರು ಆರೋಪಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ​ರು ವಿಚಾರಣೆ ನಡೆಸಿದ ಬಳಿಕ ಆರೋಪಿಗಳು ತಮ್ಮ ಹಿಂದಿನ ಎಲ್ಲ ಕೃತ್ಯಗಳನ್ನು ಬಾಯ್ಬಿಟ್ಟಿದ್ದಾರೆ.

ವಿವಿಧ ಜಿಲ್ಲೆಯ 12 ದೇವಾಲಯಗಳಲ್ಲಿ ಹುಂಡಿ ಕಳ್ಳತನ: ಬಂಧಿತರು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿ 3, ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿ 1, ಹಾವೇರಿಯ ರಟ್ಟೆಹಳ್ಳಿ - 3, ದಾವಣಗೆರೆ ಹೊನ್ನಾಳಿ-1, ಚನ್ನಗಿರಿಯಲ್ಲಿ 1, ಸಂತೆಬೆನ್ನೂರು-1 ಹೀಗೆ ಒಟ್ಟು 12 ದೇವಾಲಯದ ಹುಂಡಿ ಕಳ್ಳತನ ಮಾಡಿದ್ದಾರೆ. ಅಲ್ಲದೇ ಕಳ್ಳತನಕ್ಕೆ ತರಿಕೆರೆ ಪೊಲೀಸ್ ಠಾಣೆಯಲ್ಲಿದ್ದ 1 ಬೈಕ್ ಕಳ್ಳತನ ಸಹ ಮಾಡಿದ್ದಾರೆ. ಹುಂಡಿ ಹಾಗೂ ಬೈಕ್ ಕಳ್ಳತನ ಸೇರಿ‌ ಒಟ್ಟು 72 ಸಾವಿರ ರೂ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೇವಾಲಯದ ಹುಂಡಿ ಕಳ್ಳತನದ ಪ್ರಕರಣ ಭೇದಿಸುವ ತಂಡದಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಸರ್ಕಲ್‌ ಇನ್ಸ್​​ಪೆಕ್ಟರ್ ಆರ್.ಎಲ್.ಲಕ್ಷ್ಮಿಪತಿ, ಪಿಎಸ್ಐಗಳಾದ ಸುರೇಶ್, ರಮೇಶ್ ಸಿಬ್ಬಂದಿ ಲಿಂಗೇಗೌಡ, ಮಂಜುನಾಥ, ವಿಶ್ವನಾಥ, ಚಂದ್ರಶೇಖರ್, ಮೊಹಬೂಬ್ ಹಾಗೂ ಸುದರ್ಶನ ಭಾಗವಹಿಸಿದ್ದರು.

ಇದನ್ನೂ ಓದಿ : ಮಂಗಳೂರು : ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದಿದ್ದ ಮಹಿಳಾ ಯಾತ್ರಾರ್ಥಿ ಆತ್ಮಹತ್ಯೆ

ಗಾಂಜಾ ಮಾರಾಟ ಓರ್ವನ ಬಂಧನ, 1 ಕೆ ಜಿ ಗಾಂಜಾ ವಶ

ಶಿವಮೊಗ್ಗದ ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಒಬ್ಬ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಕೋಲಾರ ಮೂಲದ ಮನೋಜ್(21) ಬಂಧಿತ ಆರೋಪಿ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೀರ್ತಿ ನಗರದ ಬಳಿಯ ದೇವಂಗಿ ಲೇಔಟ್ ನಲ್ಲಿ ಗಾಂಜಾ ಮಾರಾಟದಲ್ಲಿ ಕೋಲಾರ ಮೂಲದ ಮನೋಜ್ ತೊಡಗಿದ್ದನು. ಬಂಧಿತನಿಂದ 30 ಸಾವಿರ ರೂ ಮೌಲ್ಯದ 1ಕೆ ಜಿ 105 ಗ್ರಾಮ ಒಣ ಗಾಂಜಾ , 200 ರೂ ನಗದು ಹಾಗೂ ಒಂದು ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನ ವಿರುದ್ದ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Bengaluru Crime: ಹತ್ಯೆ ಮಾಡಿ ಪೆಟ್ರೋಲ್ ಸುರಿದು ಶವ ಸುಟ್ಟ ಪ್ರಕರಣ.. ಮೂವರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.