ETV Bharat / state

ಅಮುಲ್ ಉತ್ಪನ್ನ ಮಾರಾಟಕ್ಕೆ ಅನುಮತಿ ನೀಡಿದರೆ ನಂದಿನಿ ಬಾಗಿಲು ಹಾಕುವುದರಲ್ಲಿ ಆಶ್ಚರ್ಯವಿಲ್ಲ: ಹೆಚ್.ಆರ್. ಬಸವರಾಜಪ್ಪ

author img

By

Published : Apr 8, 2023, 7:03 PM IST

ರಾಜ್ಯದಲ್ಲಿ ಅಮುಲ್​ ಮತ್ತು ನಂದಿನಿ ಹಾಲಿನ ವಿಚಾರ ಭಾರಿ ಚರ್ಚೆಯಾಗ್ತಿದೆ. ಇದಕ್ಕೆ ರೈತ ಸಂಘದವರು ಕೂಡ ಧ್ವನಿಗೂಡಿಸಿದ್ದಾರೆ.

hr-basavarajappa-talks-about-permission-to-sell-the-amul-products
ಅಮುಲ್ ಉತ್ಪನ್ನ ಮಾರಾಟಕ್ಕೆ ಅನುಮತಿ ನೀಡಿದರೆ ನಂದಿನಿ ಬಾಗಿಲು ಹಾಕುವುದರಲ್ಲಿ ಆಶ್ವರ್ಯವಿಲ್ಲ: ಹೆಚ್.ಆರ್.ಬಸವರಾಜಪ್ಪ

ಅಮುಲ್ ಉತ್ಪನ್ನ ಮಾರಾಟಕ್ಕೆ ಅನುಮತಿ ನೀಡಿದರೆ ನಂದಿನಿ ಬಾಗಿಲು ಹಾಕುವುದರಲ್ಲಿ ಆಶ್ಚರ್ಯವಿಲ್ಲ: ಹೆಚ್.ಆರ್. ಬಸವರಾಜಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಗುಜರಾತ್​ ಮೂಲದ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಿದರೆ ನಂದಿನಿಗೆ ಬಾಗಿಲು ಹಾಕುವುದರಲ್ಲಿ ಆಶ್ಚರ್ಯವಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಮುಲ್ ಉತ್ಪನ ಮಾರಾಟ ಮಾಡಲು ಸರ್ಕಾರ ಅನುಮತಿ ಕೊಡುತ್ತಿದೆ. ರಾಜ್ಯದಲ್ಲಿ ಹೈನುಗಾರಿಕೆಯನ್ನು ನಂಬಿ, ಲಕ್ಷಾಂತರ ಕುಟುಂಬಗಳು ಹಾಲು ಮಾರಾಟದಿಂದ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ, ಬೆಳೆ ನಷ್ಟ, ಬರಗಾಲದಿಂದ ರೈತರು ನಷ್ಟದಲ್ಲಿದ್ದಾರೆ. ನಷ್ಟವಾದರು ಕೂಡ ರೈತರು ಹಾಲು ಉತ್ನನಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ರೈತರಿಂದ ಅಗ್ಗದ ಬೆಲೆಗೆ ಹಾಲು ಖರೀದಿ ಮಾಡಿ, ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ ಎಂದರು.

ರೈತರಿಗೆ ಮರಣಶಾಸನ- ಹೆಚ್​ ಆರ್​ ಬಸವರಾಜಪ್ಪ.. ಅಮುಲ್ ರಾಜ್ಯಕ್ಕೆ ಬಂದರೆ ನಂದಿನಿ ಅದರ ಜೊತೆ ಸ್ಪರ್ಧೆ ಮಾಡಲು ಆಗುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ, ರೈತರಂತು ಬೀದಿಗೆ ಬರುತ್ತಾರೆ. ಇದು ರೈತರಿಗೆ ಮರಣಶಾಸನ ಆಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳಬಾರದು. ಅಮಿತ್ ಶಾ ಈ ಹಿಂದೆ ಮಂಡ್ಯಕ್ಕೆ ಭೇಟಿ ನೀಡಿದಾಗಲೇ ಈ ಬಗ್ಗೆ ಸೂಚನೆ ಕೊಟ್ಟಿದ್ದರು. ಈಗ ಕಾರ್ಯಗತ ಮಾಡಿದ್ದಾರೆ ಎಂದು ಹೇಳಿದರು.

ಸರ್ಕಾರ ಅಮುಲ್ ಉತ್ಪನ್ನಗಳನ್ನು ರಾಜ್ಯಕ್ಕೆ ಬಾರದ ರೀತಿ ತಡೆಹಿಡಿಯಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ರೈತರೇ ಅಮುಲ್ ಉತ್ಪನ್ನವನ್ನು ನಾಶ ಮಾಡುವ ಮೂಲಕ ಚಳವಳಿ ಮಾಡುತ್ತಾರೆ ಎಂದು ಎಚ್ಚರಿಸಿದರು. ನಮ್ಮ ನಂದಿನಿಯನ್ನು, ನಮ್ಮ ರೈತರನ್ನು ನಾವು ಕಾಪಾಡಿಕೊಳ್ಳಬೇಕಿದೆ. ಸರ್ಕಾರ ಯಾವುದೇ ಕಾರಣಕ್ಕೂ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಬಸವರಾಜಪ್ಪ ಅಗ್ರಹಿಸಿದ್ದಾರೆ.

ಕಾಂಗ್ರೆಸ್- ಜೆಡಿಎಸ್​​​ ಆಕ್ಷೇಪ: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಗುಜರಾತ್ ಮೂಲದ ಹೈನು ಉತ್ಪನ್ನ ಸಂಸ್ಥೆ 'ಅಮುಲ್' ಕರ್ನಾಟಕ ಪ್ರವೇಶ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ ಬಿಜೆಪಿ ಅಮುಲ್ ಆಗಮನವನ್ನು ಸ್ವಾಗತಿಸದಿದ್ದರೂ, ವಿರೋಧಿಸುವ ಕಾರ್ಯ ಮಾಡುತ್ತಿಲ್ಲ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಅಮುಲ್ ಆಗಮನ ರಾಜ್ಯದ ಜನಪ್ರಿಯ ಉತ್ಪನ್ನವಾದ ನಂದಿನಿಗೆ ಅಡ್ಡಿ ಮಾಡಲು ಎಂದೇ ಬಣ್ಣಿಸಲಾಗುತ್ತಿದೆ.

ಅಮುಲ್ ಮೂಲಕ ನಂದಿನಿಯ ಜನಪ್ರಿಯತೆ ಹತ್ತಿಕ್ಕುವ ಕಾರ್ಯ ಮಾಡಲಾಗುತ್ತಿದೆ ಎಂದು ರಾಜಕೀಯ ಪಕ್ಷಗಳು ಆರೋಪಿಸುತ್ತಿವೆ. ಈ ಮಧ್ಯೆ ಬಿಜೆಪಿ ತಟಸ್ಥ ನಿಲುವು ತಾಳಿದೆ. ಇದು ಬಿಜೆಪಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳಿಗೆ ನಿಜವಾದ ಸ್ಪರ್ಧಿಯಾಗಬಲ್ಲ, ದೇಶದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಹೈನು ಉತ್ಪನ್ನ ಸಂಸ್ಥೆ ಅಮುಲ್ ರಾಜ್ಯ ಪ್ರವೇಶ ಮಾಡುತ್ತಿರುವುದು ದೊಡ್ಡ ಸುದ್ದಿಯಾಗುತ್ತಿದೆ.

ಇದನ್ನೂ ಓದಿ: ಅಮೂಲ್ ಅಂದರೆ ಬಿಜೆಪಿ, ನಂದಿನಿ ಎಂದರೆ ಕಾಂಗ್ರೆಸಾ?: ಸಚಿವ ಕೆ ಸುಧಾಕರ್ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.