ETV Bharat / state

ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣ: ಪ್ರಮುಖ ಆರೋಪಿ ಸೇರಿ ನಾಲ್ವರ ಬಂಧನ, ಎಸ್​ಡಿಪಿಐ ಕಚೇರಿ ಮೇಲೆ ದಾಳಿ

author img

By

Published : Aug 26, 2022, 7:31 AM IST

Updated : Aug 26, 2022, 1:23 PM IST

ಶಿವಮೊಗ್ಗ ಚಾಕು ಇರಿತ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಜಬಿವುಲ್ಲಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Shivamogga
ಎಸ್​​ಡಿಪಿಐ ಕಚೇರಿ

ಶಿವಮೊಗ್ಗ: ಪ್ರೇಮ್ ಸಿಂಗ್​​ ಚಾಕು ಇರಿತ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಜಬಿವುಲ್ಲಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಎಸ್​​ಡಿಪಿಐ ಲಿಂಕ್ ಹಿನ್ನೆಲೆ ಶಿವಮೊಗ್ಗದ ನ್ಯೂ ಮಂಡ್ಲಿ ಸರ್ಕಲ್​​ನಲ್ಲಿರುವ ಎಸ್​​ಡಿಪಿಐ ಕಚೇರಿ, ಜಬಿವುಲ್ಲಾ ಸಹೋದರ ಹಾಗೂ ನಾಲ್ವರು ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಎಸ್​​ಡಿಪಿಐ ಕಚೇರಿಯಲ್ಲಿ ಮೊಬೈಲ್​​​​ಗಳು ಹಾಗೂ ಕೆಲ ದಾಖಲೆಗಳು ಪತ್ತೆಯಾಗಿವೆ ಎಂದು ಶಿವಮೊಗ್ಗ ಎಸ್​​ಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಇತ್ತೀಚೆಗೆ ಶಿವಮೊಗ್ಗದಲ್ಲಿ ವೀರ್ ಸಾವರ್ಕರ್ ಫೋಟೋ ಹಾಕುವ ವಿಚಾರದಲ್ಲಿ ಎಸ್​ಡಿಪಿಐ ಬೆಂಬಲದಲ್ಲಿ ಮುಸ್ಲಿಮರು ಹಿಂಸಾಚಾರ ನಡೆಸಿದ್ದರು. ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದಿದ್ದ ಪ್ರಕರಣ ನಡೆದಿತ್ತು.

ಎಸ್​ಪಿ ಪ್ರತಿಕ್ರಿಯೆ

ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ.. ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಕೋರ್ಟ್ ಸರ್ಚ್ ವಾರೆಂಟ್ ತಗೊಂಡು ನಾಲ್ಕು ಜನ ಆರೋಪಿಗಳ ಮನೆ ಹಾಗೂ ಅವರ ಸಂಬಂಧಿಕರ ಮನೆ ಹಾಗೂ ಎಸ್​ಡಿಪಿಐ ಕಚೇರಿ ಮೇಲೆ ಆರು ಜನ ಇನ್ಸ್​​ಪೆಕ್ಟರ್​​ಗಳ ತಂಡ ಆರು ಕಡೆಗಳಲ್ಲಿ ಪರೀಶೀಲನೆ ನಡೆಸಿದೆ. ಈ ವೇಳೆ ನಾವು ಏನು ಹುಡುಕುತಿದ್ದೇವೋ ಅವು ನಮಗೆ ಸಿಕ್ಕಿವೆ ಹಾಗಾಗಿ ನಮ್ಮ ತನಿಖೆ ಮುಂದುವರಿದಿದೆ ಎಂದರು.

Last Updated : Aug 26, 2022, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.