ETV Bharat / state

ಕಾಂಗ್ರೆಸ್​ನವರು ರಾಜ್ಯದ ಜನತೆಗೆ ಕೊರೊನಾ ಅಂಟಿಸುತ್ತಿದ್ದಾರೆ: ಸಚಿವ ಈಶ್ವರಪ್ಪ

author img

By

Published : Jan 10, 2022, 4:13 PM IST

ಕೋವಿಡ್ ಟೆಸ್ಟ್ ಗೆ ಬಂದ ಅಧಿಕಾರಿಗಳನ್ನು ಬೈಯುತ್ತಿರಿ,‌ ಇದು ಒಂದು ರೀತಿ‌ ದಾದಾಗಿರಿ, ಗೂಂಡಾಗಿರಿ ಆಗಿದೆ. ಗೂಂಡಾಗಿರಿಯನ್ನು ಡಿ.ಕೆ.ಶಿವಕುಮಾರ್ ಮಾಡ್ತಾ ಇದ್ದರು ಅಂತ ಮುಂಚೆ ಕೇಳ್ತಾ ಇದ್ದೆ, ಈಗ ನೋಡಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.

ಸಚಿವ ಈಶ್ವರಪ್ಪ
ಸಚಿವ ಈಶ್ವರಪ್ಪ

ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಪಕ್ಕಕ್ಕೆ ಸರಿಸಿ ಸಿಎಂ ಆಗಲು ಹೊರಟಿದ್ದಾರೆ. ಈ ಪಾದಯಾತ್ರೆ ಮೂಲಕ ರಾಜ್ಯದ ಜನತೆಗೆ ಕೋವಿಡ್ ಹಚ್ಚುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಯಾವುದೇ ಪಕ್ಷವಿರಲಿ, ಅವರ ಆರೋಗ್ಯ ಮುಖ್ಯ. ಈ ಒಂದೇ ಉದ್ದೇಶದಿಂದ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಎಂದು ಅವರಿಗೆ ಹೇಳುತ್ತಿದ್ದೇವೆ. ಆದರೆ, ಕಾಂಗ್ರೆಸ್​ನವರಿಗೆ ರಾಜಕೀಯವೇ ಮುಖ್ಯವಾಗಿದೆ. ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್​​ ಹೋಗದೆ ಇರುವುದು ಸಂತೋಷ ತಂದಿದೆ ಎಂದರು.

ಕಾಂಗ್ರೆಸ್​ ಪಾದಯಾತ್ರೆ ಬಗ್ಗೆ ಹರಿಹಾಯ್ದ ಸಚಿವ ಈಶ್ವರಪ್ಪ

ಕೋವಿಡ್ ನಿಯಮ ಪಾಲನೆ ಮಾಡ್ತಾ ಇದ್ದೇವೆ. 1 ಲಕ್ಷ ಮಾಸ್ಕ್ ವಿತರಣೆ ಮಾಡ್ತೇವೆ, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದ್ದ ಡಿಕೆಶಿಯೇ ಮಾಸ್ಕ್ ಧರಿಸಿರಲಿಲ್ಲ. ಇನ್ನು ಇವರೇನ್ ಕೋವಿಡ್ ನಿಯಮ ಪಾಲನೆ ಮಾಡ್ತಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮೈಸೂರು: ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಸಂಘಟನೆ

ಕೋವಿಡ್ ಟೆಸ್ಟ್ ಗೆ ಬಂದ ಅಧಿಕಾರಿಗಳನ್ನು ಬೈಯುತ್ತಿರಿ,‌ ಇದು ಒಂದು ರೀತಿ‌ ದಾದಾಗಿರಿ, ಗೂಂಡಾಗಿರಿ ಆಗಿದೆ. ಗೂಂಡಾಗಿರಿಯನ್ನು ಡಿ.ಕೆ. ಶಿವಕುಮಾರ್ ಮಾಡ್ತಾ ಇದ್ದರು ಅಂತ ಮುಂಚೆ ಕೇಳ್ತಾ ಇದ್ದೆ, ಈಗ ನೋಡಿದೆ ಎಂದ ಅವರು, ಈಗಲೂ ಕಾಲ ಮಿಂಚಿಲ್ಲ. ಮೇಕೆದಾಟು ಪಾದಯಾತ್ರೆಯನ್ನು ಕೋವಿಡ್ ಮುಗಿದ ಮೇಲೆ ಲಕ್ಷಗಟ್ಟಲೇ ಜನ ಸೇರಿಸಿ‌ ಮಾಡಿ, ನಾವು ಬೇಡ ಅನ್ನೋದಿಲ್ಲ. ಈಗ ನಿಮ್ಮ ಶಕ್ತಿ ಪ್ರದರ್ಶನ ಮಾಡಲು ಹೋಗಬೇಡಿ ಎಂದು ಹೇಳಿದ್ರು.

ಜೈಲಿಗೆ ಯಾಕೆ ಹೋಗಿ ಬಂದ್ರು ಅನ್ನೋದನ್ನು ಮೊದಲು ತಿಳಿಸಲಿ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲು ತಾನು ಯಾಕೆ ಜೈಲಿಗೆ ಹೋಗಿ ಬಂದೆ ಎಂಬುದನ್ನು ಸ್ಪಷ್ಟಪಡಿಸಲಿ. ನೀವು ನಮ್ಮ ಪ್ಲಾನ್ ನಿಂದ ಜೈಲಿಗೆ ಹೋಗಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನಿಮ್ಮನ್ನು ಜೈಲಿಗೆ ಹಾಕುವ ಪ್ರಯತ್ನವನ್ನು ನಾವು ಮಾಡಿಲ್ಲ. ನೀವು ತಿಹಾರ್ ಜೈಲಿಗೆ ಯಾಕೆ ಹೋಗಿದ್ರಿ, ನಿಮ್ಮ ಅಕೌಂಟ್ಸ್ ಸರಿ‌ ಇದೆಯೇ ಎಂದು ರಾಜ್ಯದ ಜನತೆ ಮುಂದೆ ಇಡಿ ಎಂದು ಸಚಿವ ಈಶ್ವರಪ್ಪ ಆಗ್ರಹಿಸಿದರು.

ಕೋವಿಡ್ ಬೂಸ್ಟರ್ ಲಸಿಕಾಕರಣಕ್ಕೆ ಚಾಲನೆ

ಕೋವಿಡ್ ಬೂಸ್ಟರ್ ಲಸಿಕಾಕರಣಕ್ಕೆ ಚಾಲನೆ:

ಕೋವಿಡ್ -19 ರಿಂದ ರಕ್ಷಣೆ ಪಡೆಯಲು‌ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಬೂಸ್ಟರ್ ಡೋಸ್ ಕಾರ್ಯಕ್ರಮಕ್ಕೆ‌ ಚಾಲನೆ ನೀಡಿದ ನಂತರ ಮಾತನಾಡಿ, ಕೇಂದ್ರ ಸರ್ಕಾರದ ನಿರ್ದೆಶನದಂತೆ ಇಂದು 60 ವರ್ಷ ಮೇಲ್ಪಟ್ಟ ಎರಡನೇ ಲಸಿಕೆ ಪಡೆದು 9 ತಿಂಗಳು ಆದವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಅರ್ಹರು ಬಂದು ತಮ್ಮ ಆಧಾರ್ ಕಾರ್ಡ್ ತೋರಿಸಿ, ಹಿಂದೆ ಯಾವ ಲಸಿಕೆ ಪಡೆದುಕೊಂಡಿದ್ದರೋ ಅದನ್ನೇ ಪಡೆಯಬೇಕೆಂದು ಸಲಹೆ ನೀಡಿದರು. ಬೂಸ್ಟರ್ ಡೋಸ್ ಪಡೆಯಲು ಯಾವುದೇ ಪೊರ್ಟಲ್ ನಲ್ಲಿ ನೋಂದಣಿ ಮಾಡುವ ಅಗತ್ಯವಿಲ್ಲ, ನೇರವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಂದು ಪಡೆಯಬಹುದು ಎಂದು ವಿವರಿಸಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.