ETV Bharat / state

ಶಿವಮೊಗ್ಗದಲ್ಲಿ ಹವಾಮಾನ ವೈಪರೀತ್ಯದಿಂದ ಶುಂಠಿಗೆ ಕೊಳೆ ರೋಗ

author img

By

Published : Sep 24, 2020, 10:46 PM IST

ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶುಂಠಿ ಬೆಳೆಗೆ ಗಡ್ಡೆಕೊಳೆ ರೋಗ ಕಂಡು ಬಂದಿದ್ದು, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.

ginger crop
ginger crop

ಶಿವಮೊಗ್ಗ : ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶುಂಠಿ ಬೆಳೆಗೆ ಗಡ್ಡೆಕೊಳೆ ರೋಗ ಕಂಡು ಬಂದಿದ್ದು, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.

ಶುಂಠಿ ಗಡ್ಡೆಗೆ ಕೊಳೆರೋಗವು ಪೈಥಿಯಂ ಆಫಿನಿರ್ಡಮೆಟಂ ಎಂಬ ಶಿಲೀಂಧ್ರದಿಂದ ಬರುತ್ತದೆ. ಬೆಳೆಯು ಈ ರೋಗಕ್ಕೆ ತುತ್ತಾದ್ದಲ್ಲಿ ಗಿಡ ಸಂಪೂರ್ಣವಾಗಿ ಒಣಗಿ ಸಾಯಿವುದರಿಂದ ಅಧಿಕ ನಷ್ಟ ಉಂಟು ಮಾಡುತ್ತದೆ. ಇದು ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ಹೊರತಾಗಿ ಬ್ಯಾಕ್ಟೀರಿಯಾದಿಂದ ಬರುವ ಗಡ್ಡೆ ಕೊಳೆರೋಗ ಅಥವಾ ಹಸಿರು ಕೊಳೆ ರೋಗವು ಕೆಲವು ಕಡೆ ಬಂದಿರುತ್ತದೆ.

ಬಿಸಿಲು ಮತ್ತು ಮಳೆಯ ವಾತಾವರಣ ಈ ಹಸಿರು ಕೊಳೆ ರೋಗವು ಉಲ್ಬಣವಾಗಲು ಮುಖ್ಯ ಕಾರಣವಾಗಿರುತ್ತದೆ. ರೋಗದ ಸಮಗ್ರ ನಿರ್ವಹಣೆ ಅತಿ ಅವಶ್ಯವಾಗಿರುತ್ತದೆ,. ಆದ್ದರಿಂದ ಶುಂಠಿ ಬೆಳೆ ಬೆಳೆಯುತ್ತಿರುವಂತಹ ರೈತರುಗಳು ರೋಗದ ನಿಯಂತ್ರಣಕ್ಕೆ ಈ ಕೆಳಕಂಡಂತೆ ನಿರ್ವಹಣಾ ಕ್ರಮಗಳನ್ನು ಅನುಸರಿಸಿಸಲು ತೊಟಗಾರಿಕೆ ಇಲಾಖೆ ಕೆಲವೊಂದು ಸೂಚನೆಗಳನ್ನು ನೀಡಿದೆ.

ಶುಂಠಿ ಮಡಿಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳುವುದು.ಶುಂಠಿ ಮಡಿಗಳಲ್ಲಿ ಮಣ್ಣು ಕೊಚ್ಚಿ ಹೊಗಿದ್ದಲ್ಲಿ ಮಡಿಗಳಿಗೆ ಮಣ್ಣನ್ನು ಏರಿಸುವುದು. ರೋಗದ ಲಕ್ಷಣಗಳು ಕಂಡು ಬಂದಲ್ಲಿ ಔಷಧಿ ಸಿಂಪಡಣೆ ಮಾಡುವುದು ಕುರಿತಂತೆ ಇನ್ನು ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಗಾನ ಕೆ.ಆರ್. ತೋಟಗಾರಿಕೆ ಇಲಾಖೆ ವಿಷಯ ತಜ್ಞರನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.