ETV Bharat / state

ಶಿವಮೊಗ್ಗ ನಗರದಲ್ಲಿ ಫೆಬ್ರವರಿ 26ರ ತನಕ ಕರ್ಫ್ಯೂ ಮುಂದುವರಿಕೆ

author img

By

Published : Feb 23, 2022, 2:17 PM IST

Updated : Feb 23, 2022, 2:42 PM IST

ನಗರದಲ್ಲಿನ ಚಟುವಟಿಕೆಗಳ‌ ಮೇಲೆ ನಿಗಾ ಇಡಲು ನಕ್ಸಲ್‌ ನಿಗ್ರಹದಳದ ದ್ರೋಣ್ ತಂಡವೂ ಕೂಡ ಇಂದು ಆಗಮಿಸಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

curfew continues in shivamogga city
ಶಿವಮೊಗ್ಗ ನಗರದಲ್ಲಿ ಫೆಬ್ರವರಿ 26ರ ತನಕ ಕರ್ಪ್ಯೂ ಮುಂದುವರಿಕೆ

ಶಿವಮೊಗ್ಗ : ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೇರಲಾಗಿರುವ ಕರ್ಫ್ಯೂ ಫೆಬ್ರವರಿ 26ರ ತನಕ ಮುಂದುವರೆಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ನಿನ್ನೆ ಸಂಜೆ ಮಾಧ್ಯಮಗೋಷ್ಠಿ ನಡೆಸಿದ್ದ ಜಿಲ್ಲಾಧಿಕಾರಿಗಳು, ಫೆಬ್ರವರಿ 25ರ ಶುಕ್ರವಾರ ಬೆಳಗ್ಗೆ 6 ಗಂಟೆ ತನಕ ಕರ್ಫ್ಯೂ ಇರಲಿದೆ ಎಂದು ತಿಳಿಸಿದ್ದರು. ಆದರೆ, ಇಂದು ಮತ್ತೆ ಜಿಲ್ಲಾಧಿಕಾರಿಗಳು ಶನಿವಾರ ಬೆಳಗ್ಗೆ 6 ಗಂಟೆ ತನಕ ಕರ್ಪ್ಯೂ ಮುಂದುವರೆಸಿ ಆದೇಶ ಹೊರಡಿಸಿದ್ದಾರೆ.

ಫೆಬ್ರವರಿ‌ 20ರಂದು ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಯ ಬಳಿಕ ನಗರದಲ್ಲಿ ನಡೆದ ಕೆಲ ಅಹಿತಕರ ಘಟನೆ ಬಳಿಕ ಕರ್ಫ್ಯೂ ಜಾರಿಯಾಗಿದೆ. ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಆರ್​ಎಎಫ್ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

curfew continues in shivamogga city
ಆದೇಶ ಪ್ರತಿ

ಇದನ್ನೂ ಓದಿ: ಪಾತ್ರೆತೊಳೆ ಎಂದಿದ್ದಕ್ಕೆ ತಾಯಿಗೆ ಬಾಣಲೆಯಿಂದ ಹೊಡೆದು ಕೊಲೆ ಮಾಡಿದ ಅಪ್ರಾಪ್ತ ಬಾಲಕಿ

ನಗರದಲ್ಲಿನ ಚಟುವಟಿಕೆಗಳ‌ ಮೇಲೆ ನಿಗಾ ಇಡಲು ನಕ್ಸಲ್‌ ನಿಗ್ರಹದಳದ ದ್ರೋಣ್ ತಂಡವೂ ಕೂಡ ಇಂದು ಆಗಮಿಸಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Last Updated :Feb 23, 2022, 2:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.