ETV Bharat / state

ಭಾರಿ ಮಳೆಗೆ ಎರಡನೇ ಬಾರಿ ಮುಳುಗಡೆಯಾದ ಭದ್ರಾವತಿಯ ಹೊಸ ಸೇತುವೆ: ಪರಿಹಾರಕ್ಕೆ ಕ್ರಮ

author img

By

Published : Aug 9, 2022, 1:36 PM IST

Updated : Aug 9, 2022, 2:51 PM IST

ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಭದ್ರಾವತಿಯ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸ ಸೇತುವೆ ಮತ್ತೆ ಮುಳುಗಡೆಯಾಗಿದೆ.

bhadravatis-new-bridge-is-drowned-second-time-due-to-heavy-rains
ಭಾರೀ ಮಳೆಗೆ ಎರಡನೇ ಭಾರಿ ಮುಳುಗಡೆಯಾದ ಭದ್ರಾವತಿಯ ಹೊಸ ಸೇತುವೆ : ಪರಿಹಾರಕ್ಕೆ ಕ್ರಮ

ಶಿವಮೊಗ್ಗ: ಭದ್ರಾ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಭದ್ರಾವತಿಯ ಹೊಸ ಸೇತುವೆ ಮತ್ತೆ ಮುಳುಗಡೆಯಾಗಿದೆ. ಭದ್ರಾ ನದಿಗೆ ಹೆಚ್ಚಿನ ನೀರು ಬಿಟ್ಟಿರುವುದರಿಂದ ಇಲ್ಲಿನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸ ಸೇತುವೆ ಮುಳುಗಡೆಯಾಗಿದೆ. ಸದ್ಯ ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ.

ಹಾಲಿ ಭದ್ರಾ ಅಣೆಕಟ್ಟೆಯಿಂದ ಸುಮಾರು 55 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಇದರಿಂದಾಗಿ ಅಕ್ಕಪಕ್ಕದ ಪ್ರದೇಶಗಳು ಜಲಾವೃತವಾಗಿದೆ. ಅಲ್ಲದೇ ಕವಲಗುಂದಿ, ಏನಾಕ್ಷಿ ಬಡಾವಣೆ, ಬಿಹೆಚ್​​​ ರಸ್ತೆ ಪಕ್ಕದ ಅಂಬೇಡ್ಕರ್ ನಗರದಲ್ಲಿ ಹಾಗೂ ಗುಂಡಪ್ಪ ಬಡಾವಣೆಗೆ ನೀರು ನುಗ್ಗಿದೆ. ಇದರಿಂದ ನಿನ್ನೆ ರಾತ್ರಿಯೇ ಕವಲಗುಂದಿ ಹಾಗೂ ಏನಾಕ್ಷಿ ಬಡಾವಣೆಯ ಜನರನ್ನು ಕಾಳಜಿ ಕೇಂದ್ರಗಳಿಗೆ ರವಾನೆ ಮಾಡಲಾಗಿದೆ.

ಭಾರೀ ಮಳೆಗೆ ಎರಡನೇ ಬಾರಿ ಮುಳುಗಡೆಯಾದ ಭದ್ರಾವತಿಯ ಹೊಸ ಸೇತುವೆ : ಪರಿಹಾರಕ್ಕೆ ಕ್ರಮ

ಕವಲೆಗುಂದಿ ನಿವಾಸಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್​​​ಗೆ ಸ್ಥಳಾಂತರ ಮಾಡಲಾಗಿದ್ದು, ಏನಾಕ್ಷಿ ಬಡಾವಣೆಯ ನಿವಾಸಗಳನ್ನು ತಿರುವಳ್ಳವರ್ ಸಮುದಾಯ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಕವಲೆಗುಂದಿಯವರಿಗೆ ಜೆ.ಡಿ ಕಟ್ಟೆ ಬಳಿ ನಿವೇಶನಗಳನ್ನು ಗುರುತಿಸಲಾಗಿದೆ. ಅವರಿಗೆ ಅಲ್ಲಿ ಇದ್ದ ನಿವೇಶನದ ಸಮಸ್ಯೆ ಪರಿಹರಿಸಲಾಗುವುದು ಹಾಗೂ ಅಂಬೇಡ್ಕರ್ ಬಡಾವಣೆ ಹಾಗೂ ಏನಾಕ್ಷಿ ಬಡಾವಣೆಗಳಿಗೆ ನೀರು ನುಗ್ಗದಂತೆ ಭದ್ರಾ ನದಿಗೆ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ನಗರಸಭೆ ಆಯುಕ್ತ ಮನು ಕುಮಾರ್ ಅವರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ನಿರಂತರ ಮಳೆ:ಭರ್ತಿಯಾದ ಸಿದ್ದಗಂಗೆ ತೀರ್ಥೋದ್ಭವ ಸ್ಥಳ

Last Updated :Aug 9, 2022, 2:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.