ETV Bharat / state

ರಾಮನಗರ: ವಿದ್ಯುತ್​ ಸ್ಪರ್ಶಿಸಿ ಕಾಡಾನೆ ಸಾವು

author img

By

Published : Feb 26, 2021, 11:38 AM IST

ವಿದ್ಯುತ್​ ಸ್ಪರ್ಶಿಸಿ ಆನೆ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ರಾಮನಗರದ ತುಂಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

wild elephant dies due to electric shock
ಕಾಡಾನೆ ಸಾವು

ರಾಮನಗರ: ವಿದ್ಯುತ್ ಟ್ರಾನ್ಸ್‌ಫಾರ್ಮರ್​‌ಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಶಾಕ್​ನಿಂದ ಗಂಡಾನೆ ಸ್ಥಳದಲ್ಲೇ ಸಾವನ್ನಪ್ಪಿದೆ.

ಕಾಡಾನೆ ಸಾವು
ಕಳೆದ ತಡರಾತ್ರಿ ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದ ಈ ಕಾಡಾನೆ, ರಾಮನಗರದ ತುಂಬೇನಹಳ್ಳಿ ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್​‌ ಗಮನಿಸದೇ ಪಕ್ಕದಲ್ಲೇ ತೆರಳಿದ್ದು, ಶಾಕ್ ಸರ್ಕ್ಯೂಟ್​ನಿಂದ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಸ್ಥಳದಲ್ಲೆ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಡಾನೆ ಸಾವು

ಇದನ್ನೂ ಓದಿ: ಚೆನ್ನೈ ಎಕ್ಸ್​ಪ್ರೆಸ್​​​ನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.