ETV Bharat / state

ರಾಮನಗರ: ದರ್ಗಾದಲ್ಲಿ ವಿತರಿಸಿದ ಸಿಹಿ ಪ್ರಸಾದ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

author img

By ETV Bharat Karnataka Team

Published : Nov 20, 2023, 10:47 AM IST

ರಾಮನಗರದಲ್ಲಿನ ದರ್ಗಾವೊಂದರಲ್ಲಿ ಸಿಹಿ ಪ್ರಸಾದ ಸೇವಿಸಿದ ಹಲವು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ramanagara
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು

ರಾಮನಗರ: ನಗರದ ದರ್ಗಾದಲ್ಲಿ ನೀಡಿದ ಸಿಹಿ ಪ್ರಸಾದ ತಿಂದು 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಭಾನುವಾರ ನಡೆದಿದೆ. ಎಂ.ಜಿ.ರಸ್ತೆಯಲ್ಲಿರುವ ಪಿಎಸ್‌ವಿ ದರ್ಗಾದಲ್ಲಿ ನಡೆಯುತ್ತಿದ್ದ ಗಂಧ ಮಹೋತ್ಸವದಲ್ಲಿ ಪ್ರಸಾದ ವಿತರಿಸಲಾಗಿದೆ. ಪ್ರಸಾದ ಸೇವಿಸಿ ಸ್ವಲ್ಪ ಸಮಯದ ನಂತರ ಜನರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹಾಗು ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: ಜಮೀನು ಪಡೆದು ಉದ್ಯೋಗ ನೀಡದ ಸಂಸ್ಥೆ: ಡೆತ್​ನೋಟ್ ಬರೆದಿಟ್ಟು ಯುವ ರೈತ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.