ETV Bharat / state

ಮಂತ್ರಿಗಿರಿ ಬದಲಾಯಿಸುವುದು ಮುಖ್ಯಮಂತ್ರಿಗಳ ನಿರ್ಧಾರ: ಅಶ್ವತ್ಥ ನಾರಾಯಣ್

author img

By

Published : Dec 12, 2019, 7:22 PM IST

ರಾಜಕೀಯದಲ್ಲಿ ಸೇಫ್‌ಜೋನ್ ಇರುವುದಿಲ್ಲ. ಮಂತ್ರಿಗಿರಿ ಬದಲಾವಣೆ ಮಾಡುವುದು ಮುಖ್ಯಮಂತ್ರಿಯವರ ನಿರ್ಧಾರ. ಅವರು ಯಾವುದೇ ನಿರ್ಣಯ ತಗೆದುಕೊಂಡರೂ ನಾವು ಬದ್ಧರಾಗಿರುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್​ ಹೇಳಿದರು.

Ashwath Narayan
ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ

ರಾಮನಗರ : ರಾಜಕೀಯದಲ್ಲಿ ಸೇಫ್‌ಜೋನ್ ಇರುವುದಿಲ್ಲ. ಮಂತ್ರಿಗಿರಿ ಬದಲಾವಣೆ ಮಾಡುವುದು ಮುಖ್ಯಮಂತ್ರಿಯವರ ನಿರ್ಧಾರ. ಅವರು ಯಾವುದೇ ನಿರ್ಣಯ ತಗೆದುಕೊಂಡರೂ ನಾವು ಬದ್ಧರಾಗಿರುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್​ ಹೇಳಿದರು.

ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಅಶ್ವತ್ಥ ನಾರಾಯಣ್‌

ಜಿಲ್ಲೆಯ ಮಾಗಡಿ ಕೋಟೆ ಮೈದಾನದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಿದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದಿಲ್ಲ. ರಾಮನಗರ ನನ್ನ ತವರು ಜಿಲ್ಲೆ. ಈ ಜಿಲ್ಲೆಯ ಮನೆಮಗನಾಗಿ ಸೇವೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.

ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಲು ಹಾಲಿ ಇರುವ ಸಚಿವರ ಸ್ಥಾನ ಬದಲಾಗುತ್ತದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಸೇಫ್‌ಜೋನ್ ಇರೋದಿಲ್ಲ, ಮುಖ್ಯಮಂತ್ರಿ ಅವರ ನಿರ್ಧಾರವೇ ಅಂತಿಮ ಎಂದು ಹೇಳಿದ್ರು.

ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್. ವಿಶ್ವನಾಥ್ ಸೋಲಿಗೆ ಉಸ್ತುವಾರಿ ಹೊತ್ತಿದ್ದ ಸಿ. ಪಿ. ಯೋಗೇಶ್ವರ್ ಕಾರಣ ಎಂಬ ಜೆಡಿಎಸ್‌ ನಾಯಕ ಜಿ.ಟಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಗೆಲುವಿಗೆ ಸಿ.ಪಿ. ಯೋಗೇಶ್ವರ್ ಸಾಕಷ್ಟು ಶ್ರಮಪಟ್ಟಿದ್ದಾರೆ. ಪ್ರಾಮಾಣಿಕವಾಗಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಸಿ.ಪಿ ಯೋಗೇಶ್ವರ್ ಅವರು ನಮ್ಮ ನಾಯಕರು, ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ದೊರೆಯುತ್ತದೆ ಎಂದರು.

Intro:Body:ರಾಮನಗರ : ರಾಜಕೀಯದಲ್ಲಿ ಯಾವುದು ಸೇಪ್ ಜೋನ್ ಇರೋದಿಲ್ಲ, ಮಂತ್ರಿಗಿರಿ ಬದಲಾವಣೆ ಮುಖ್ಯಮಂತ್ರಿ ಅವರ ಅಧಿಕಾರ, ಅವರು ಯಾವುದೇ ನಿರ್ಣಯ ತಗೆದುಕೊಂಡ್ರು ನಾವು ಬದ್ದವಾಗಿರುತ್ತೇವೆ, ರಾಮನಗರ ನನ್ನ ತವರು ಜಿಲ್ಲೆ ನಾನೂ ಕೂಡ ಈ ಜಿಲ್ಲೆಯವನೆ, ಈ ಜಿಲ್ಲೆಯ ಮನೆ ಮಗನಾಗಿ ಸೇವೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಯಾಣ್ ಮಾಜಿ ಸಿಎಂ ಕುಮಾರಸ್ವಾಮಿ ಹೆಸರೇಳದೆ ಟಾಂಗ್ ನೀಡಿದರು.
ಜಿಲ್ಲೆಯ ಮಾಗಡಿಯ ಕೋಟೆ ಮೈದಾನದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಾವು ಕಡೆಗಣನೆ ಮಾಡುವುದಿಲ್ಲ, ಈ ಹಿಂದೆ ಅಧಿಕಾರ ನಡೆಸಿದವರಿಗೆ ಜನ ಅಶೀರ್ವಾದ ಮಾಡಿದ್ರು ಇದೀಗ ನಮಗೆ ಅಧಿಕಾರ ಕೊಟ್ಟಿದ್ದಾರೆ, ನಾವು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎಂದರು. ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಲು ಹಾಲಿ ಇರುವ ಸಚಿವರ ಸ್ಥಾನ ಬದಲಾಗುತ್ತೆ ಎಂಬ ಪ್ರಶ್ನೆಗೆ ರಾಜಕೀಯದಲ್ಲಿ ಯಾವುದು ಸೇಪ್ ಜೋನ್ ಇರೋದಿಲ್ಲ, ಇದು ಮುಖ್ಯಮಂತ್ರಿ ಅವರ ಅಧಿಕಾರ, ಅವರು ಯಾವುದೇ ನಿರ್ಣಯ ತಗೆದುಕೊಂಡ್ರು ನಾವು ಬದ್ದವಾಗಿರುತ್ತೇವೆ ಎಂದು ಹೇಳಿದ್ರು. ಇನ್ನೂ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್,ವಿಶ್ವನಾಥ್ ಸೋಲಿಗೆ ಉಸ್ತುವಾರಿ ಹೊತ್ತಿದ್ದ ಸಿ.ಪಿ.ಯೋಗೀಶ್ವರ್ ಕಾರಣ ಎಂಬ ಜಿ.ಟಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ವಿಶ್ವನಾಥ್ ಗೆಲುವಿಗೆ ಯೋಗೀಶ್ವರ್ ಸಾಕಷ್ಟು ಶ್ರಮಪಟ್ಟಿದ್ದಾರೆ, ಪ್ರಾಮಾಣಿಕವಾಗಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ, ಯೋಗೀಶ್ವರ್ ಅವರು ನಮ್ಮ ನಾಯಕರು ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ದೊರೆಯುತ್ತದೆ ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.