ETV Bharat / state

ಕೆಲವರು ಮನಸಿಗೆ ಬಂದಂತೆ ಮಾತನಾಡುತ್ತಾರೆ: ಡಿ.ಕೆ.ಸುರೇಶ್​ಗೆ ಡಿಸಿಎಂ ತಿರುಗೇಟು

author img

By

Published : Jun 19, 2020, 5:14 PM IST

Updated : Jun 19, 2020, 8:09 PM IST

ಯಾವುದೇ ಸಂಬಂಧ ಒಮ್ಮೆಲೇ ಕಡಿಯೋಕೆ ಆಗಲ್ಲ. ಯಾವಾಗ ಯಾವ ನಿರ್ಣಯ ಮಾಡಿ ದೇಶ ಕಟ್ಟಬೇಕೋ ಅದನ್ನ ಪ್ರಧಾನಿಗಳು ಮಾಡುತ್ತಿದ್ದಾರೆ. ಕಾಂಗ್ರೆಸ್​​​ 60 ವರ್ಷ ದೇಶ ಕಟ್ಟಿದ್ದನ್ನು ಕೇವಲ 6 ವರ್ಷದಲ್ಲಿ ಮಾಡಿ ತೋರಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದರು.

Dcm statement on MP suresh
ಕೆಡಿಪಿ ಸಭೆ

ರಾಮನಗರ: ಚೀನಾ ಉತ್ಪನ್ನಗಳನ್ನು ಬ್ಯಾನ್ ಮಾಡುವುದಕ್ಕೆ ಪ್ರಧಾನಿ ಮೋದಿ ಅವರಿಗೆ ತಾಕತ್ತು ಇಲ್ವಾ ಎಂಬ ಹೇಳಿಕೆ ನೀಡಿರುವ ಸಂಸದ ಡಿ.ಕೆ‌.ಸುರೇಶ್​​​ಗೆ ತಿರುಗೇಟು ನೀಡಿರುವ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್​, ಕೆಲವರು ಮನಸಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದರು.

ದೇಶಕ್ಕೆ ನಾಯಕತ್ವ, ಸದೃಢತೆ, ಶಕ್ತಿ, ಸ್ವಾಭಿಮಾನವಿದೆ. ಭಾರತಕ್ಕೆ ಎಂತಹ ಸವಾಲನ್ನೂ ಎದುರಿಸಲು ಧೈರ್ಯ ಇದೆ ಎಂದು ತೋರಿಸಿಕೊಟ್ಟವರು ಪ್ರಧಾನಿ ಮೋದಿ. ಹೀಗಾಗಿ ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಎಂದರು.

ಕೆಡಿಪಿ ಸಭೆ

ಜಿಲ್ಲಾ ಪಂಚಾಯತ್​​ ಭವನದಲ್ಲಿ ಕೆಡಿಪಿ ಸಭೆಗೆ ಆಗಮಿಸಿದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶ ಸಂಕಷ್ಟ ಎದುರಿಸುತ್ತಿದೆ. ಅವರಿಗೆ, ಅವರ ಪಕ್ಷಕ್ಕೆ ಯಾವ ಯೋಗ್ಯತೆ ಇಲ್ಲದೆ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಏನೇ ಹೇಳಬೇಕಾದರೂ ಯೋಚಿಸಲು ಭಗವಂತ ಬುದ್ಧಿ ಕೊಡಲಿ ಎಂದರು.

ದೇಶದ ಸಂಕಷ್ಟದ ಪರಿಸ್ಥಿತಿಯಲ್ಲೂ ರಾಜಕೀಯ ಮಾಡುತ್ತಿದ್ದಾರೆ. ನೂರಾರು ಜನ ತ್ಯಾಗ ಬಲಿದಾನ ಮಾಡಿದ್ದಾರೆ. ಈ ರೀತಿ ಬಾಯಿಗೆ ಬಂದಂಗೆ ಮಾತಾಡಿ ಸಮಾಜಕ್ಕೆ ಏನು ಕೊಡುಗೆ ನೀಡುತ್ತಿದ್ದಾರೆ. ಇವರನ್ನು ದೇಶದ ನಾಗರಿಕರೆಂದು ಹೇಳಿಕೊಳ್ಳಲು ನಾಚಿಕೆ ಆಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ವ್ಯಾಪಕ‌ ಹೆಚ್ಚಳಕ್ಕೆ ಪ್ರತಿಕ್ರಿಯಿಸಿ, ಇದು ಸೋಂಕಿನ ಕಾಯಿಲೆ. ಹಂತ ‌ಹಂತವಾಗಿ ತಡೆಗಟ್ಟುವ ಕೆಲಸ‌ ನಡೆಯುತ್ತಿದೆ ಎಂದರು.

Last Updated : Jun 19, 2020, 8:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.