ETV Bharat / state

ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು ಮಾಡಿದ್ದಾರೆ : ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

author img

By

Published : Feb 28, 2022, 7:02 PM IST

ನಾವು ಪಾದಯಾತ್ರೆ ಮಾಡುತ್ತಿರುವುದು ಸಿಎಂಗೆ ಗೊತ್ತಿತ್ತು. ಅಧಿಕಾರಿಗಳಿಗೂ ಗೊತ್ತು. ಅನುಮತಿ ಪಡೆದು ಪಾದಯಾತ್ರೆ ಮಾಡುತ್ತಿದ್ದೇವೆ. ಆದರೆ, ಇದೀಗ ಎಫ್​ಐಆರ್ ದಾಖಲು ಮಾಡಿದ್ದಾರೆ. ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು ಮಾಡಿದ್ದಾರೆ..

d-k-shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ರಾಮನಗರ : ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರ ವಿರುದ್ಧ ಎಫ್​ಐಆರ್ ಹಾಕಿರುವುದಕ್ಕೆ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಗರಂ ಆಗಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನಾವು ಪಾದಯಾತ್ರೆ ಮಾಡುತ್ತಿರುವುದು ಸಿಎಂಗೆ ಗೊತ್ತಿತ್ತು. ಅಧಿಕಾರಿಗಳಿಗೂ ಗೊತ್ತು. ಅನುಮತಿ ಪಡೆದು ಪಾದಯಾತ್ರೆ ಮಾಡುತ್ತಿದ್ದೇವೆ. ಆದರೆ, ಇದೀಗ ಎಫ್​ಐಆರ್ ದಾಖಲು ಮಾಡಿದ್ದಾರೆ. ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು ಮಾಡಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರಿನಲ್ಲಿ ಫ್ಲೆಕ್ಸ್ ತೆರವುಗೊಳಿಸುವ ಕೆಲಸವಾಗುತ್ತಿದೆ. ನಾವು ಜನರ ಪರ ಹೋರಾಟ ಮಾಡಿದ್ರೆ ಎಫ್​​ಐಆರ್ ಹಾಕಿದ್ದಾರೆ. ಸಿದ್ಧರಾಮಯ್ಯ, ಡಿಕೆಶಿಯನ್ನ ನೀವು ಸಾಯಿಸಬಹುದು. ಆದರೆ, ನನ್ನ ಮತ್ತು ಸಿದ್ಧರಾಮಯ್ಯರಂತಹ ನೂರು ಜನ ಹುಟ್ಟುತ್ತಾರೆ. ನಾವು ಎಫ್​ಐಆರ್ ರೀತಿಯ ಪ್ರಕರಣಗಳಿಗೆ ಹೆದರಲ್ಲ ಎಂದು ಟಾಂಗ್ ನೀಡಿದರು.

ಓದಿ: ಬೆಳಗಾವಿ ಮೇಲೆ ಬೊಮ್ಮಾಯಿ ಪ್ರೀತಿ : ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.