ETV Bharat / state

ರಾಮನಗರ ಪೊಲೀಸರ ಭರ್ಜರಿ ಬೇಟೆ: ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ ಖದೀಮರು ಅಂದರ್​

author img

By

Published : Nov 5, 2019, 6:40 PM IST

ರಾಮನಗರ ಜಿಲ್ಲೆಯ ವಿವಿಧೆಡೆ ಮಹಿಳೆಯರ ಸರ ಎಗರಿಸುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಡರಹಳ್ಳಿ ಪೊಲೀಸರಿಂದ ಸರಗಳ್ಳರ ಬಂಧನ

ರಾಮನಗರ: ಜಿಲ್ಲೆಯ ವಿವಿಧೆಡೆ ಸರಗಳ್ಳತನ ಮಾಡುತ್ತಿದ್ದ ಖತರ್ನಾಕ್​ ಖದೀಮರಿಬ್ಬರನ್ನು ಬ್ಯಾಡರಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರು ಬ್ಯಾಡರಹಳ್ಳಿ, ಹಾರೋಹಳ್ಳಿ, ಕಗ್ಗಲೀಪುರ, ಬಿಡದಿ ಭಾಗಗಳಲ್ಲಿ ಮಹಿಳೆಯರು ಹಾಗೂ ವೃದ್ಧರನ್ನ ಟಾರ್ಗೆಟ್ ಮಾಡಿ ಸರ ಕಿತ್ತುಕೊಂಡು ಪರಾರಿ ಆಗುತ್ತಿದ್ದರು.

ಯತೀಶ್ ಹಾಗೂ ಅರ್ಜುನ ಬಂಧಿತ ಆರೋಪಿಗಳು. ಯತೀಶ್ ಮೂಲತಃ ಚಿಕ್ಕಮಗಳೂರಿನ ನಿವಾಸಿ, ಅರ್ಜುನ ಬೆಂಗಳೂರಿನವ. ಇವರು ಹಗಲಲ್ಲೇ ಪಲ್ಸರ್ ಬೈಕ್​ನಲ್ಲಿ ಎಲ್ಲೆಡೆ ಸುತ್ತಾಡಿ, ಎಲ್ಲೆಲ್ಲಿ ಒಂಟಿ ಮಹಿಳೆಯರು ಓಡಾಡುತ್ತಿದ್ದಾರೆಂಬುದನ್ನು ತಿಳಿದುಕೊಳ್ಳುತ್ತಿದ್ದರು. ಬಳಿಕ ಮಹಿಳೆಯರು ಹಾಗೂ ವೃದ್ಧರ ಬಳಿ ಸರ ಕಿತ್ತುಕೊಂಡು ಪರಾರಿ ಆಗುತ್ತಿದ್ದರು. ಇದೀಗ ಬ್ಯಾಡರಹಳ್ಳಿ ಪೊಲೀಸರ ಅತಿಥಿಯಾಗಿದ್ದಾರೆ.

ರಾಮನಗರ ಎಸ್ಪಿ ಡಾ. ಅನೂಪ್ ಎ. ಶೆಟ್ಟಿ ಸುದ್ದಿಗೋಷ್ಟಿ

ಇಬ್ಬರೂ ಬೆಂಗಳೂರಿನಲ್ಲಿ ಪರಿಚಿತರಾಗಿ ರಾಜಧಾನಿಯ ಸುತ್ತಮುತ್ತ ಅನೇಕ ಸರಗಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಮೊದಲಿಗೆ ಬೈಕ್ ಕಳ್ಳತನ ಮಾಡಿಕೊಂಡು ಓಡಾಡುತ್ತಿದ್ದ ಇವರು, ಬಳಿಕ ಕಳ್ಳತನ ಮಾಡಿದ ಬೈಕ್‌ನಲ್ಲೇ ಸರಗಳ್ಳತನ ಮಾಡುವ ಪ್ಲಾನ್ ಮಾಡುತ್ತಿದ್ದರು. ಅದೇ ರೀತಿ ಮಹಿಳೆಯರು ಹಾಗೂ ವೃದ್ಧರನ್ನೇ ಟಾರ್ಗೆಟ್ ಮಾಡಿಕೊಂಡು ಬೈಕ್‌ನಲ್ಲಿ ಬಂದು ಸರಗಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ರು. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ಎಸ್ಪಿ ಡಾ. ಅನೂಪ್ ಎ. ಶೆಟ್ಟಿ ಮಾಹಿತಿ ನೀಡಿದರು.

ಬಂಧಿತ ಆರೋಪಿಗಳು 14 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. 9 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಸರ ಹಾಗೂ ನಾಲ್ಕು ಬೈಕ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಎಸ್​ಪಿ ಅನೂಪ್ ಎ. ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Intro:Body:ರಾಮನಗರ : ನೋಡೋಕೆ ಡಿಸೆಂಟ್ ಆಗಿದ್ದರು ಕೂಡ ಮಾಡ್ತಿದ್ದ ಕೆಲಸ ಮಾತ್ರ ನಿಜಕ್ಕೂ ಬೆಚ್ಚಿಬೀಳುವಂತದ್ದು. ಒಂಟಿ ಮಹಿಳೆಯರು ಕಂಡ್ರೆ ಸಾಕು ಅವರ ಕತ್ತಲ್ಲಿದ್ದ ಸರ ಇವರಿಬ್ಬರ ಕೈಯಲ್ಲಿರುತ್ತಿತ್ತು. ಇವರಿಬ್ಬರು ಅಂತಹ ಖತರ್ನಾಕ್ ಜೋಡಿ ಚೆಂದದ ಬೈಕ್ ಕಂಡ್ರೆ ಸಾಕು ಆ ಕ್ಷಣದಲ್ಲಿ ಅದೇ ಬೈಕ್‌ನಲ್ಲಿ ಇವರಿಬ್ಬರು ಲಾಂಗ್ ರೈಡ್ ಹೋಗ್ತಿದ್ರು. ಅಂತಹ ಮಹಾನ್ ಖದೀಮರು ಇಂದು ಪೊಲೀಸರ ಅತಿಥಿಯಾಗಿದ್ದಾರೆ.
ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬ್ಯಾಡರಹಳ್ಳಿ, ಹಾರೋಹಳ್ಳಿ, ಕಗ್ಗಲೀಪುರ, ಬಿಡದಿ ಭಾಗಗಳಲ್ಲಿ ಮಹಿಳೆಯರು ಹಾಗೂ ವೃದ್ಧರನ್ನ ಟಾರ್ಗೆಟ್ ಮಾಡಿ ಸರ ಕಿತ್ತುಕೊಂಡು ಎಸ್ಕೆಪ್ ಆಗುತ್ತಿದ್ದ ಇಬ್ಬರು ಖತರ್ನಾಕ್ ಖದೀಮರ  ಹೆಸರು ಯತೀಶ್ ಹಾಗೂ ಅರ್ಜುನ. ಆರೋಪಿ ಯತೀಶ್ ಮೂಲತ ಚಿಕ್ಕಮಗಳೂರಿನ ನಿವಾಸಿ ಮತ್ತೊಬ್ಬ ಆರೋಪಿ ಅರ್ಜುನ ಬೆಂಗಳೂರಿನ ನಿವಾಸಿ.ಇವರು ನೋಡೋಕೆ ಫುಲ್ ಡಿಸೆಂಟ್ ಆಗಿ ಕಾಣಿಸಿದ್ರೂ ಯಾವುದೇ ಕೆಲಸ ಕಾರ್ಯ ಮಾಡದೇ ಸಲೀಸಾಗಿ ಹಣ ಮಾಡಬೇಕೆಂದು ಪ್ಲಾನ್ ಇಟ್ಟುಕೊಂಡಿದ್ರು. ಅದಕ್ಕಾಗಿ ಹಗಲಲ್ಲೇ ಪಲ್ಸರ್ ಬೈಕ್ ಏರಿ ಎಲ್ಲೆಲ್ಲಿ ಒಂಟಿ ಮಹಿಳೆಯರು ಓಡಾಡುತ್ತಿದ್ದಾರೆಂಬ ಮಾಹಿತಿ ತಿಳಿದುಕೊಳ್ಳುತ್ತಿದ್ದರು. ಬಳಿಕ ಮಹಿಳೆಯರು ಹಾಗೂ ವೃದ್ದರ ಬಳಿ ಸರ ಕಿತ್ತು ಎಸ್ಕೆಪ್ ಆಗುತ್ತಿದ್ದರು. ಆದರೆ ಆ ಇಬ್ಬರು ಆರೋಪಿಗಳ್ಳನ್ನ ಈಗ ಬ್ಯಾಡರಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಪರಸ್ಪರ ಇಬ್ಬರು ಬೆಂಗಳೂರಿನಲ್ಲಿ ಪರಿಚಯವಾಗಿ ರಾಜಧಾನಿಯ ಸುತ್ತಮುತ್ತ ಅನೇಕ ಸರಗಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಮೊದಲಿಗೆ ಬೈಕ್ ಕಳ್ಳತನ ಮಾಡಿಕೊಂಡು ಓಡಾಡುತ್ತಿದ್ದ ಇವರು, ಬಳಿಕ ಕಳ್ಳತನ ಮಾಡಿದ ಬೈಕ್‌ನಲ್ಲೇ ಸರಗಳ್ಳತನ ಮಾಡುವ ಪ್ಲಾನ್ ಮಾಡುತ್ತಾರೆ. ಅದೇ ರೀತಿ ಮಹಿಳೆಯರು ಹಾಗೂ ವೃದ್ದರನ್ನೇ ಟಾರ್ಗೆಟ್ ಮಾಡಿಕೊಂಡು ಬೈಕ್‌ನಲ್ಲಿ ಬಂದು ಸರಗಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ರು. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಬ್ಯಾಡರಹಳ್ಳಿ ಪೊಲೀಸರು ಖತರ್ನಾಕ್ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ರಾಮನಗರ ಎಸ್ಪಿ ಡಾ. ಅನೂಪ್ ಎ ಶೆಟ್ಟಿ ತಿಳಿಸಿದರು
ಬಂಧಿತ ಆರೋಪಿಗಳಿಂದ ೧೪ ಸರಗಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ೯ ಲಕ್ಷ ರೂ ಬೆಲೆ ಬಾಳುವ ಚಿನ್ನದ ಸರ ಹಾಗೂ ನಾಲ್ಕು ಬೈಕ್‌ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬ್ಯಾಡರಹಳ್ಳಿ ಸುತ್ತಮುತ್ತಲಿನ ನಿವಾಸಿಗಳ ನಿದ್ದೆಗೆಡಿಸಿದ್ದ ಖತರ್ನಾಕ್ ಸರಗಳ್ಳರು ಅರೆಸ್ಟ್ ಆಗಿರುವುದರಿಂದ ಆ ಭಾಗದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅನೂಪ್ ಎ.ಶೆಟ್ಟಿ ಪ್ರಶಂಸಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.