ಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ರಾಯಚೂರಿನ ಕಡ್ಗಂದೊಡ್ಡಿ ಗ್ರಾಮಸ್ಥರು

author img

By

Published : Oct 17, 2021, 9:42 AM IST

Updated : Oct 17, 2021, 12:42 PM IST

raichur theft case

ಪೈಪ್, ಪಂಪ್‌ಸೆಟ್‌ಗಳು ಸೇರಿದಂತೆ ರೈತರ ಜಮೀನುಗಳಲ್ಲಿದ್ದ ಸಲಕರಣೆಗಳ ಕಳ್ಳತನ ನಡೆಯುತ್ತಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡ್ಗಂದೊಡ್ಡಿ ಗ್ರಾಮಸ್ಥರು ಯುವಕರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ರಾಯಚೂರು: ರೈತರ ಜಮೀನುಗಳಲ್ಲಿ ಪೈಪ್ ಕಳ್ಳತನ ಮಾಡುತ್ತಿದ್ದ ಯುವಕರಿಬ್ಬರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ರಾಯಚೂರು ತಾಲೂಕಿನ ಕಡ್ಗಂದೊಡ್ಡಿ ಗ್ರಾಮದಲ್ಲಿ ನಡೆದಿದೆ.

ರಾಯಚೂರಿನ ಮೈಲಾರ ನಗರದ ಇಬ್ಬರು ಯುವಕರು ಪೈಪ್ ಕಳ್ಳರೆಂದು ಹೇಳಲಾಗುತ್ತಿದೆ. ಕಡ್ಗಂದೊಡ್ಡಿ ಗ್ರಾಮದಲ್ಲಿ ಗುರುಸ್ವಾಮಿ ಎಂಬುವವರ ಹೊಲದಲ್ಲಿ ಹನಿ ನೀರಾವರಿ ಪದ್ಧತಿ ಮೂಲಕ ವ್ಯವಸಾಯ ಮಾಡಲು 5 ಎಕರೆ ಜಮೀನಿನಲ್ಲಿ ಪೈಪ್ ಆಳವಡಿಸಿದ್ದರು. ಇದನ್ನು ಗಮನಿಸಿದ ಕಳ್ಳರು ಬೆಳಗ್ಗೆ ಬಂದು ಬೈಕ್ ಮೇಲೆ ಚೀಲದಲ್ಲಿ ಪೈಪ್ ಕಟ್ಟಿಕೊಂಡು ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಯುವಕರನ್ನು ಹಿಡಿದು, ರಾಯಚೂರು ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದರು.

ಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ರಾಯಚೂರಿನ ಕಡ್ಗಂದೊಡ್ಡಿ ಗ್ರಾಮಸ್ಥರು

ಇದನ್ನೂ ಓದಿ: ತುಮಕೂರಿನಲ್ಲಿ ಭೀಕರ ಅಪಘಾತ: ನಾಲ್ವರು ರೈತರ ಸಾವು

ಪೈಪ್, ಪಂಪ್‌ಸೆಟ್‌ಗಳು ಸೇರಿದಂತೆ ರೈತರ ಜಮೀನುಗಳಲ್ಲಿದ್ದ ಸಲಕರಣೆಗಳ ಕಳ್ಳತನ ನಡೆಯುತ್ತಿದ್ದವು. ಇದರಿಂದ ರೈತರು ರೋಸಿ ಹೋಗಿದ್ದರು.

Last Updated :Oct 17, 2021, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.