ETV Bharat / state

ಸರ್ಕಾರದಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅನುದಾನ ಕಡಿತ: ಡಾ.ರಝಾಕ್ ಉಸ್ತಾದ್

author img

By

Published : Dec 6, 2020, 6:36 PM IST

ಸರ್ಕಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅನುದಾನ ಕಡಿತಗೊಳಿಸಿದೆ. ಹೀಗಾಗಿ, ವಿದ್ಯಾರ್ಥಿ ವೇತನ ಬಿಡುಗಡೆಯಾಗದೆ ರಾಜ್ಯದಲ್ಲಿ 12.50 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅತಂತ್ರಕ್ಕೆ ಸಿಲುಕಿದ್ದಾರೆ ಎಂದು ಮುಸ್ಲಿಂ ಚಿಂತಕರ ಚಾವಡಿ ದೂರಿದೆ.

ಡಾ.ರಝಾಕ ಉಸ್ತಾದ್
Dr.Razaka Ustad

ರಾಯಚೂರು: ಸರ್ಕಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅನುದಾನ ಕಡಿತಗೊಳಿಸಿದೆ. ಪರಿಣಾಮ, ವಿದ್ಯಾರ್ಥಿ ವೇತನ ಬಿಡುಗಡೆಯಾಗದೆ ರಾಜ್ಯದಲ್ಲಿ 12.50 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅತಂತ್ರಕ್ಕೆ ಸಿಲುಕಿದ್ದಾರೆ ಎಂದು ಮುಸ್ಲಿಂ ಚಿಂತಕರ ಚಾವಡಿ ಮುಖ್ಯಸ್ಥ ಡಾ.ರಝಾಕ ಉಸ್ತಾದ್ ಹೇಳಿದರು.

ಮುಸ್ಲಿಂ ಚಿಂತಕರ ಚಾವಡಿ ಮುಖ್ಯಸ್ಥ ಡಾ.ರಝಾಕ ಉಸ್ತಾದ್

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳನ್ನು ಸರ್ಕಾರ ರದ್ದು ಮಾಡಿದೆ. ಸರ್ಕಾರದ ಈ ಧೋರಣೆಗೆ ನಾವು ವಿರೋಧ ಕೂಡ ವ್ಯಕ್ತಪಡಿಸಿರಲಿಲ್ಲ. ಎಲ್ಲೂ ಕೂಡ ಈ ಬಗ್ಗೆ ಚರ್ಚೆ ಮಾಡಿರಲಿಲ್ಲ. ಆದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿರುವ ಸುಮಾರು 12.50 ಲಕ್ಷ ಮಕ್ಕಳು ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಹಾಕುತ್ತಾರೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಮ್ಮ ತಮ್ಮ ಪಾಲು​ ಕೊಡುತ್ತದೆ. ಆದರೆ ರಾಜ್ಯ ಸರ್ಕಾರ 2019-20 ಸಾಲಿನ 2020 ಕೋಟಿ ಆಗುತ್ತದೆ. ಕೇಂದ್ರ ತನ್ನ ಹಣವನ್ನು ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಇಲ್ಲಿಯವರೆಗೂ ಹಣ ಬಿಡುಗಡೆ ಮಾಡಿಲ್ಲ. ಇದರಿಂದ 6.5 ಲಕ್ಷ ಮಕ್ಕಳು ವಿದ್ಯಾರ್ಥಿ ವೇತನ ಇಲ್ಲದೆ ಪರದಾಡುತ್ತಿದ್ದಾರೆ ಎಂದರು.

ಓದಿ: ರಾಯಚೂರು : ಹೃದಯಾಘಾತದಿಂದ ಮದುಮಗ ‌ಸಾವು!

ಮಾಜಿ ಸಿಎಂ ಸಿದ್ದರಾಮಯ್ಯನವರು ವಿದ್ಯಾಸಿರಿ ಯೋಜನೆಯನ್ನು ಆರಂಭ ಮಾಡಿದ್ದು, ಅದು ಹಾಗೆಯೇ ಮುಂದುವರೆಯುತ್ತಿದೆ. ಆದರೆ 2019-20 ನೇ ಸಾಲಿನಲ್ಲಿ ಅಲ್ಪಸಂಖ್ಯಾತ ಇಲಾಖೆಗೆ ಕೊಡುವ ಅನುದಾನವನ್ನು ಸರ್ಕಾರ ತಡೆ ಹಿಡಿದಿದೆ. ಇದು ಒಂದು ಸಮುದಾಯವನ್ನು ಗುರಿಮಾಡುವಂತಹ ಧೋರಣೆಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.

ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ 2017-18ರಲ್ಲಿ 1748 ಕೋಟಿ ರೂ ಇದ್ದು, ಅನುದಾನ ನಿನ್ನೆಯವರೆಗೂ 9001 ಕೋಟಿ ರೂ ಇತ್ತು. ಆದರೆ ಅದರಲ್ಲಿ 300 ಕೋಟಿಯನ್ನು ನಿರ್ದೇಶನಾಲಯ ಕಡಿತಗೊಳಿಸಿದ್ದು 600 ಕೋಟಿ ರೂಗೆ ಬಂದಿದೆ. ಸರ್ಕಾರ ಮತ್ತು ವಿರೋಧ ಪಕ್ಷಗಳು ಇದನ್ನು ನಮಗೆ ಕೊಡಿಸುವ ಪ್ರಯತ್ನ ಮಾಡಬೇಕು. ಇದಕ್ಕೆ ನಾವು ಬೆಂಬೆಲ ನೀಡುತ್ತೇವೆ ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.