ETV Bharat / state

ಮತ್ತೆ ಫೀಲ್ಡಿಗಿಳಿದ ಶಾಸಕ ಡಾ.ಶಿವರಾಜ್ ಪಾಟೀಲ್... ಉಸಿರಾಟ ತೊಂದರೆಯಿದ್ದ ರೋಗಿಗೆ ಚಿಕಿತ್ಸೆ

author img

By

Published : Oct 28, 2019, 12:11 PM IST

ರಾಯಚೂರು ನಗರದ ಹೊರಭಾಗದಲ್ಲಿರುವ ರಿಮ್ಸ್​​ ಆಸ್ಪತ್ರೆಯಲ್ಲಿ ಓರ್ವ ವ್ಯಕ್ತಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ರೋಗಿಗೆ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಚಿಕಿತ್ಸೆ ನೀಡಿದ್ದಾರೆ.

ರೋಗಿಗೆ ಚಿಕಿತ್ಸೆ ನೀಡುತ್ತಿರುವ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್

ರಾಯಚೂರು: ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ರೋಗಿಗೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಚಿಕಿತ್ಸೆ ನೀಡಿದ್ದಾರೆ.

ರೋಗಿಗೆ ಚಿಕಿತ್ಸೆ ನೀಡುತ್ತಿರುವ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್

ನಗರದ ಹೊರವಲಯದಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ಮಡಿವಾಳಪ್ಪ ಎನ್ನುವವರಿಗೆ ಕಫ ಕಟ್ಟಿ ಉಸಿರಾಟದಲ್ಲಿ ತೊಂದರೆಯಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಈ‌ ವಿಚಾರ ತಿಳಿದ ಕೂಡಲೆ ಸ್ಪಂದಿಸಿದ ಶಾಸಕ ಡಾ.ಶಿವರಾಜ್ ಪಾಟೀಲ್, ರಿಮ್ಸ್ ಆಸ್ಪತ್ರೆಗೆ ತೆರಳಿ ರೋಗಿಗೆ ಚಿಕಿತ್ಸೆ ನೀಡಿ, ಬಳಿಕ ಮುಂದಿನ ಚಿಕಿತ್ಸೆಗೆ ಶೂಶ್ರೂಷಕರಿಗೆ ಸೂಚಿಸಿದರು.

ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ.ಶಿವರಾಜ್ ಪಾಟೀಲ್, ಹೃದಯ ತಜ್ಞರಾಗಿ ಹೆಸರುವಾಸಿಯಾಗಿದ್ದರು. ಶಾಸಕರಾಗಿ ಆಯ್ಕೆಯಾದಮೇಲೆ ವೃತ್ತಿಯನ್ನು ಬಿಟ್ಟಿದ್ದರು. ಇದೀಗ ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ತೊಂದರೆ ಅನುಭವಿಸುತ್ತಿದ್ದ ರೋಗಿಗೆ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರದಿದ್ದಾರೆ.

Intro:ಸ್ಲಗ್: ಫೀಲ್ಡ್‌ಗಿಳಿದ ಎಂಎಲ್‌ಎ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ‌ಸ್ವಾಮಿ
ದಿನಾಂಕ: ೨೮-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ರೋಗಿಗೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಚಿಕಿತ್ಸೆ ನೀಡಿದ್ದಾರೆ. Body:ನಗರ ಹೊರವಲಯದ ರಿಮ್ಸ್ ಆಸ್ಪತ್ರೆ ಮಡಿವಾಳಪ್ಪ ಎನ್ನುವವರು ಕಫ ಗಟ್ಟಿ ಉಸಿರಾಟದಲ್ಲಿ ತೊಂದರೆಯಾಗಿ ತೀವ್ರ ಅನಾರೋಗ್ಯ ತೊಂದರೆಯಿದೆ ಉತ್ತಮ ಬಳಲುತ್ತಿದ್ರು. ಈ‌ ವಿಚಾರ ಗಮನಕ್ಕೆ ಬಂದ‌ ಕೂಡಲೇ ಸ್ಪಂದಿಸಿದ ಶಾಸಕ ಡಾ.ಶಿವರಾಜ್ ಪಾಟೀಲ್, ರಿಮ್ಸ್ ಆಸ್ಪತ್ರೆಗೆ ತೆರಳಿ ರೋಗಿ ಚಿಕಿತ್ಸೆ ನೀಡಿ, ಬಳಿಕ ಮುಂದಿನ ಚಿಕಿತ್ಸೆಗೆ ಶೂಷ್ರಕರಿಗೆ ಸೂಚಿಸಿದ್ರು. ಇನ್ನೂ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ.ಶಿವರಾಜ್ ಪಾಟೀಲ್ ಹೃದಯ ತಜ್ಞ ಚಿಕಿತ್ಸೆ ಹೆಸರುವಾಹಿಯಾಗಿದ್ರು. ಶಾಸಕರಾಗಿ ಆಯ್ಕೆದ್ಮೇಲೆ ವೃತ್ತಿಯನ್ನಿ ಬಿಟ್ಟಿದ್ರು. Conclusion:ಇದೀಗ ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ತೊಂದರೆ ಅನುಭವಿಸುತ್ತಿರುವ ರೋಗಿ ಚಿಕಿತ್ಸೆ ನೀಡುವ ವೈದ್ಯಕೀಯ ಚಿಕಿತ್ಸೆ ಮಾನವಿಯಂತೆ ಮೆರದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.