'ನೀವೆಲ್ಲರೂ ಮನೆ ಮುಚ್ಚೋರು ನಡ್ರೀ, ನಡ್ರೀ ನನಗ್ ಬ್ಯಾಡಾ.. ಲಸಿಕೆ ಬೇಡ': ಹಠ ಹಿಡಿದ ಅಜ್ಜಿ

author img

By

Published : Sep 19, 2021, 4:37 PM IST

Updated : Sep 19, 2021, 4:54 PM IST

old-woman-refuse-to-vaccination-in-raichur

ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನಾನಾ ಇಲಾಖೆಗಳು ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವ ಗುರಿ ಇರಿಸಿಕೊಂಡಿವೆ. ಆದರೆ, ಕೆಲವೆಡೆ ಗ್ರಾಮೀಣ ಭಾಗದ ಜನರು ಸೂಕ್ತ ಮಾಹಿತಿ ಕೊರತೆಯ ಕಾರಣಕ್ಕೆ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಉದಾಹರಣೆಗಳು ಸಿಗುತ್ತಿವೆ.

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆಯುತ್ತಿದೆ. ಆದ್ರೆ, ಜನರಿಗೆ ಲಸಿಕೆ ಪಡೆಯುವಂತೆ ಮನವೊಲಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಲಸಿಕೆ ಬೇಡ ಎಂದು ಹಠ ಹಿಡಿದ ಅಜ್ಜಿ (ಆರೋಗ್ಯ ಸಿಬ್ಬಂದಿ ಮತ್ತು ಅಜ್ಜಿಯ ಮಾತುಕತೆ)

ಜಿಲ್ಲೆಯ ದೇವದುರ್ಗ ಬುಂಕಲದೊಡ್ಡಿ ಗ್ರಾಮದ ಅಜ್ಜಿಯೊಬ್ಬರಿಗೆ ಲಸಿಕೆ ಹಾಕಿಕೊಳ್ಳುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ತಕರಾರು ತೆಗೆದಿರುವ ಅಜ್ಜಿ, 'ನನಗೆ ಡಾಕ್ಟರ್ ಲೆಟರ್‌ನಲ್ಲಿ ಬರೆದುಕೊಡಬೇಕು ಅಂಥ ಪಟ್ಟು ಹಿಡಿದು ಲಸಿಕೆ ಹಾಕಿಸಿಕೊಳ್ಳುವುದಿಲ್ಲ' ಎಂದರು.

ಕೊನೆಗೆ ಆರೋಗ್ಯ ಸಿಬ್ಬಂದಿ ಅಜ್ಜಿಯ ಮನವೊಲಿಸುವಲ್ಲಿ ಯಶಸ್ವಿಯಾದರು. ರೊಟ್ಟಿ ಮಾಡಿ ಉಂಡು ಆಮೇಲೆ ಆಧಾರ್ ಕಾರ್ಡ್‌ ತೆಗೆದುಕೊಂಡು ಬರಲು ಅವರು ಒಪ್ಪಿಗೆ ಸೂಚಿಸಿದರು.

ಇದನ್ನೂ ಓದಿ: ಪ್ರತಿಪಕ್ಷಗಳಿಗೆ ಶಕ್ತಿ ತಂತ್ರಗಾರಿಕೆ ಇರುತ್ತದೆ, ಹಗುರವಾಗಿ ತೆಗೆದುಕೊಳ್ಳಬೇಡಿ: ಕಾರ್ಯಕರ್ತರಿಗೆ ಬಿಎಸ್​ವೈ ಸಂದೇಶ

Last Updated :Sep 19, 2021, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.