ETV Bharat / state

ಶಾಲೆಗೆ ಹೋಗುವ  ಬಾಲಕನ ಅಪಾಯಕಾರಿ ಸರ್ಕಸ್​  ಇದು... ಡೇಂಜರಸ್​​​​​​​​ ಸಂಚಾರದ ವಿಡಿಯೋ ವೈರಲ್​​!​

author img

By

Published : Nov 29, 2019, 10:28 AM IST

Updated : Nov 29, 2019, 11:48 AM IST

ಮಾಂಟೇಸ್ಸರಿ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಮಾರುತಿ ಓಮಿನಿ ವ್ಯಾನ್​ನಲ್ಲಿ ನಿಮಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ ವಿದ್ಯಾರ್ಥಿಯೊಬ್ಬನನ್ನ ಓಮಿನಿ ವಾಹನದ ಹೊರಗಡೆ ಸ್ಟ್ಯಾಂಡ್​ ಮೇಲೆ ನಿಲ್ಲಿಸಿ ಸಂಚಾರ ಮಾಡಲಾಗುತ್ತಿತ್ತು. ಆ ವಿಡಿಯೋ ಈಗ ವೈರಲ್​ ಆಗಿ ಅಪಾಯದ ಬಗ್ಗೆ ಚರ್ಚೆಗೆ ಈಡಾಗುವಂತೆ ಮಾಡಿದೆ.

rcr
ಶಾಲೆಗೋಗುವ ಮಕ್ಕಳ ಸರ್ಕಸ್​ ನೋಡಿ

ರಾಯಚೂರು: ಖಾಸಗಿ ಶಾಲೆಗಳ ವಾಹನಗಳಲ್ಲಿ ಮಕ್ಕಳನ್ನು ಶಾಲೆ ಕರೆದುಕೊಂಡು ಹೋಗಲು ಸುರಕ್ಷಿತ ಕ್ರಮಗಳನ್ನ ಅನುಸರಿಬೇಕು. ಆದರೆ, ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮಾಂಟೇಸ್ಸರಿ ಖಾಸಗಿ ಶಾಲೆಯು ಈ ನಿಮಯವನ್ನು ಪಾಲಿಸದೇ ಚಿಕ್ಕಮಕ್ಕಳೊಂದಿಗೆ ಅಂಧಾ ದರ್ಬಾರ್ ನಡೆಸುತ್ತಿದೆ. ಇದಕ್ಕೆ ಇಂದು ಸಾಕ್ಷಿಯೂ ದೊರೆತಿದೆ.

ಶಾಲೆಗೋಗುವ ಮಕ್ಕಳ ಸರ್ಕಸ್​ ನೋಡಿ

ಮಾಂಟೇಸ್ಸರಿ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಮಾರುತಿ ಓಮಿನಿ ವ್ಯಾನ್​ನಲ್ಲಿ ನಿಮಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲಾಗಿತ್ತು. ಇದಾದ ಬಳಿಕ ಓರ್ವ ಬಾಲಕನನ್ನು ವಾಹನದ ಹೊರಭಾಗದ ಫುಟ್ ಸ್ಟ್ಯಾಂಡ್ ಮೇಲೆ ನಿಲ್ಲಿಸಿಕೊಂಡು ಮಕ್ಕಳನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಒಂದು ವೇಳೆ ಬಾಲಕ ಸ್ವಲ್ಪ ಎಚ್ಚರ ತಪ್ಪಿದ್ದರೂ ಅಪಾಯ ಮಾತ್ರ ತಪ್ಪಿದ್ದಲ್ಲ. ಇದ್ಯಾವುದನ್ನು ಲೆಕ್ಕಸದೇ ಚಾಲಕ ಮಗುವನ್ನ ಹಾಗೆ ಶಾಲೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಹ ಪ್ರಯಾಣಿಕನ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ರಾಜ್ಯಾದ್ಯಂತ ಸದ್ದು ಸಹ ಮಾಡುತ್ತಿದೆ. ಮಾನ್ವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

rcr
ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಶಾಲಾವಾಹನದ ಚಾಲಕ

ಚಾಲಕ ಅರೆಸ್ಟ್:

ಈ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಚಾಲಕ ರಾಮಯ್ಯ ತಿಪ್ಪಯ್ಯನನ್ನು ಬಂಧಿಸಿ, ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ವಾಹನದ ಚಾಲನ ವಿರುದ್ಧ ಐಪಿಸಿ 199/19, 279, 336 ಅಡಿ ಪ್ರಕರಣ ದಾಖಲಾಗಿದೆ.

Intro:¬ಸ್ಲಗ್: ಖಾಸಗಿ ಶಾಲೆಯ ಅಂಧ ದರ್ಬಾರ್
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 29-11-2019
ಸ್ಥಳ: ರಾಯಚೂರು
ಆಂಕರ್: ಖಾಸಗಿ ಶಾಲೆಗಳ ವಾಹನ ಮಕ್ಕಳನ್ನು ಶಾಲೆ ಕರೆದುಕೊಂಡು ಹೋಗಲು ಸುರಕ್ಷಿತ ಕ್ರಮಗಳನ್ನ ಅನುಸರಿಬೇಕು. Body:ಆದ್ರೆ ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಮೌಂಟೇಸ್ಸ್ ರಿ ಖಾಸಗಿ ಶಾಲೆಯ ಈ ನಿಮಯವನ್ನ ಪಾಲಿಸದೆ ಚಿಕ್ಕಮಕ್ಕಳೊಂದಿಗೆ ಅಂಧ ದರ್ಬಾರ್ ನಡೆಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮೌಂಟೇಸ್ಸರಿ ಶಾಲೆಗೆ ಕರೆದುಕೊಂಡು ಹೋಗುವ ಮಾರುತಿ ಓಮಿನಿ ವ್ಯಾನ್ ನಲ್ಲಿ ನಿಮಯಕ್ಕಿಂತ ಹೆಚ್ಚುವ ವಿದ್ಯಾರ್ಥಿಗಳು ಭರ್ತಿಯಾಗಿದೆ. ಇದಾದ ಬಳಿಕ ಓರ್ವ ಬಾಲಕನ್ನ ವಾಹನದ ಹೊರಭಾಗದ ಫುಟ್ ಸ್ಟ್ಯಾಂಡ್ ಮೇಲೆ ಮಗುವನ್ನು ನಿಲ್ಲಿಸಿಕೊಂಡು ಮಕ್ಕಳ ಕರೆದುಕೊಂಡು ಹೋಗುತ್ತಿದ್ದಾರೆ. ಒಂದು ವೇಳೆ ಬಾಲಕ ಸ್ವಲ್ಪ ಎಚ್ಚರ ತಪ್ಪಿದ್ದಾರೆ ಅಪಾಯ ತಪ್ಪಿದ್ದಲ್ಲ. ಇದ್ಯಾವುದನ್ನ ಲೆಕ್ಕಸದೇ ಮಗುವನ್ನ ಹಾಗೆ ಶಾಲೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ನೋಡಿದ್ರೆ ಎಂಥವರಿಗೂ ಒಂದು ಕ್ಷಣ ಮೈ ಜುಂ ಎನ್ನುತ್ತಿದೆ. Conclusion:ಮಕ್ಕಳ ಸುರಕ್ಷತೆ, ಸಾರಿಗೆ ನಿಯಮ ಉಲ್ಲಂಘಿಸಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿರುವ ದೃಶ್ಯ ಕಂಡು ಬರುತ್ತಿದ್ದರು, ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಇಲಾಖೆ ಅಧಿಕಾರಿಗಳು ಕಣ್ಮುಚಿಕೊಳ್ಳುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಅಲ್ಲದೇ ಪೊಷಕರು ತಮ್ಮ ಮಕ್ಕಳನ್ನ ಖಾಸಗಿ ಶಾಲೆಯಲ್ಲಿ ವಾಹನದಲ್ಲಿ ಕಳುಹಿಸುವಾಗ ಎಚ್ಚರವಹಿಸಬೇಕು.

Last Updated : Nov 29, 2019, 11:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.