ETV Bharat / state

ರಾಯಚೂರು : ದುರಸ್ತಿ ವೇಳೆ ವಿದ್ಯುತ್‌ ಪ್ರವಹಿಸಿ ಕಂಬದ ಮೇಲೆ ಲೈನ್‌ಮ್ಯಾನ್ ಸಾವು

author img

By

Published : Jun 4, 2023, 5:12 PM IST

ಕ್ಯಾದಿಗೇರಾ ಹಾಗೂ ಜಾಗಟಗಲ್ ನಡುವೆ ವಿದ್ಯುತ್ ಕಂಬದ ಮೇಲೆ ದುರಸ್ತಿ ಕಾರ್ಯನಿರ್ವಹಿಸುತ್ತಿದ್ದಾಗ ಲೈನ್‌ಮ್ಯಾನ್ ಸಾವನ್ನಪ್ಪಿದ್ದಾರೆ.

ಲೈನ್‌ಮ್ಯಾನ್ ಸಾವು
ಲೈನ್‌ಮ್ಯಾನ್ ಸಾವು

ರಾಯಚೂರು : ವಿದ್ಯುತ್ ಕಂಬದ ಮೇಲೆ ಕುಳಿತು ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್‌ಮ್ಯಾನ್ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತ ಲೈನ್​ಮ್ಯಾನ್​ನನ್ನು ಸಿರವಾರ ತಾಲೂಕಿನ ಕವಿತಾಳ ಪಟ್ಟಣ ನಿವಾಸಿಯ ವೀರುಪಾಕ್ಷಿ (27) ಎಂದು ಗುರುತಿಸಲಾಗಿದೆ. ಇಂದು ಎಂದಿನಂತೆ ಕರ್ತವ್ಯದ ನಿಮಿತ್ತವಾಗಿ ಕ್ಯಾದಿಗೇರಾ ಹಾಗೂ ಜಾಗಟಗಲ್ ನಡುವೆ ವಿದ್ಯುತ್ ಕಂಬದ ಮೇಲೆ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದಾಗ ಘಟನೆ ಸಂಭವಿಸಿದೆ.

ಜಿಲ್ಲೆಯ ಅರಕೇರಿ ತಾಲೂಕಿನ ಅರಕೇರಿ ಜೆಸ್ಕಾಂ‌ ಶಾಖೆಯ ಲೈನ್‌ಮ್ಯಾನ್​ ಆಗಿ ವೀರುಪಾಕ್ಷಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿದ್ದಾರೆ. ಆದರೆ ಮೃತ ವೀರುಪಾಕ್ಷಿ ಅವರ ಕುಟುಂಬಸ್ಥರು ಇನ್ನು ಸ್ಥಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮೃತದೇಹವನ್ನು ತೆರವುಗೊಳಿಸಿರಲಿಲ್ಲ.

ಕುಟುಂಬಸ್ಥರ ಸ್ಥಳಕ್ಕೆ ಬಂದ ನಂತರ ಮೃತದೇಹವನ್ನು ತೆರವುಗೊಳಿಸಿಲಾಗಿದ್ದು, ಕುಟುಂಬಸ್ಥರು ನೀಡಿರುವ ದೂರಿನ ಆಧಾರದ ಮೇಲೆ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ದೇವದುರ್ಗ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮದ್ಯ & ಮಾದಕ ವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದವನಿಂದಲೇ ಮಾದಕ ದಂಧೆ: ಆರೋಪಿ ಅರೆಸ್ಟ್​

ಕಡಬ : ದಿನಾಂಕ 01.06.2023 ರಂದು ಬೆಳಗ್ಗೆ ಸುಮಾರು 11.50ರ ವೇಳೆಗೆ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ವಿದ್ಯುತ್‌ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆ ಕಂಬ ಏರಿ ವಿದ್ಯುತ್ ದುರಸ್ತಿ ಮಾಡುವಾಗ ಹಠಾತ್ ವಿದ್ಯುತ್‌ ಪ್ರವಹಿಸಿ ಪವರ್ ಮ್ಯಾನ್ ದ್ಯಾಮಣ್ಣ ಅವರು ಮೃತಪಟ್ಟಿದ್ದರು.

ಈ ಸಮಯದಲ್ಲಿ ದ್ಯಾಮಣ್ಣ ಅವರ ಜೊತೆಗೆ ಹಿರಿಯ ಅಧಿಕಾರಿಗಳಾಗಲಿ ಅಥವಾ ಸಹಾಯಕ್ಕೆ ಯಾರನ್ನೂ ಜೊತೆಗೆ ಕಳುಹಿಸರಿಲಿಲ್ಲ. ಹಾಗೂ ಹೆಲ್ಮೆಟ್​ ಹ್ಯಾಂಡ್‌ ಗ್ಲೌಸ್, ಶೂ, ಸೇರಿದಂತೆ ಯಾವುದೇ ಸುರಕ್ಷತಾ ಸಾಮಗ್ರಿಗಳನ್ನು ನೀಡದೆ ವಿದ್ಯುತ್‌ ದುರಸ್ತಿ ಕೆಲಸಕ್ಕೆ ನಿರ್ಲಕ್ಷ್ಯತನದಿಂದ ವಿದ್ಯುತ್‌ ಕಂಬ ಹತ್ತಲು ಹೇಳಿ ಕೆಲಸ ಮಾಡಿಸಿದ ಮೆಸ್ಕಾಂ ಕಡಬದ ಸಹಾಯಕ ಇಂಜಿನಿಯರ್‌ ಆದ ಸತ್ಯನಾರಾಯಣ ಸಿ ಕೆ ಮತ್ತು ಕಿರಿಯ ಇಂಜಿನಿಯರ್‌ ವಸಂತ ಎಂಬವರೇ ಮತ್ತು ತಮ್ಮ ಮಗನ ಸಾವಿಗೆ ಕಾರಣ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದರು.

ಇದನ್ನೂ ಓದಿ : ಬೆಸ್ಕಾಂ ಕಿರಿಯ ಸಹಾಯಕನ ಹುದ್ದೆಗೆ ನಕಲಿ ನೇಮಕಾತಿ ಪತ್ರ, ಎಫ್ಐಆರ್ ದಾಖಲು

ಈ ಸಂಬಂಧ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದ್ಯಾಮಣ್ಣ ಅವರ ತಂದೆ ರೇವಣೆಪ್ಪ ದೊಡಮನಿ ಕಡಬ ಪೊಲೀಸರಿಗೆ ದೂರನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸತ್ಯನಾರಾಯಣ್‌ ಸಿ ಕೆ ಸಹಾಯಕ ಇಂಜಿನಿಯರ್‌ ಮತ್ತು ವಸಂತ ಕಿರಿಯ ಇಂಜಿನಿಯರ್‌ ಮೆಸ್ಕಾಂ ಕಡಬ ಶಾಖೆ ಈ ಇಬ್ಬರು ಅಧಿಕಾರಿಗಳ ವಿರುದ್ಧ 51/2023. ಕಲಂ: 304(A) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ಸಬ್​ ಇನ್ಸ್​ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು : ಆತ್ಮಹತ್ಯೆ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.