ವಿದ್ಯಾರ್ಥಿ ಮೇಲೆ ಬಿಸಿನೀರು ಎರಚಿದ ಪ್ರಕರಣ: ತನಿಖೆ ನಡೆಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರು

author img

By

Published : Sep 11, 2022, 5:43 PM IST

hot-water-throw-at-student-in-raichur-complaint-filed-in-maski

ಸಮವಸ್ತ್ರದಲ್ಲಿ ಮಲವಿಸರ್ಜನೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಕಾರಣಕ್ಕೆ ವಿದ್ಯಾರ್ಥಿ ಮೇಲೆ ಬಿಸಿನೀರು ಎರಚಿಸಿದ ಆರೋಪ ಪ್ರಕರಣದ ಬಗ್ಗೆ ಮಸ್ಕಿ ಠಾಣೆಯಲ್ಲಿ ದೂರು ಕೊಡಲಾಗಿದೆ.

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕಲ್ಲೂರಿನ ಘನಮಠೇಶ್ವರ ಶಾಲೆಯ ವಿದ್ಯಾರ್ಥಿಯ ಮೇಲೆ ಬಿಸಿನೀರು ಸುರಿದ ಆರೋಪ ಪ್ರಕರಣ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ದೂರು ನೀಡಿದ್ದಾರೆ. ಈ ಬಗ್ಗೆ ಮಸ್ಕಿ ಠಾಣೆಯಲ್ಲಿ ದೂರು ನೀಡಲಾಗಿದೆ.

ಕಳೆದ ಸೆಪ್ಟೆಂಬರ್ 2ರಂದು 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಿಸಿನೀರು ಸುರಿದ ಘಟನೆ ನಡೆದಿತ್ತು. ಈ ಕೃತ್ಯವನ್ನು ಶಿಕ್ಷಕರೊಬ್ಬರೇ ಎಸಗಿರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಸಮವಸ್ತ್ರದಲ್ಲಿ ಮಲವಿಸರ್ಜನೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಕಾರಣಕ್ಕೆ ಶಿಕ್ಷಕರು ಕೋಪಗೊಂಡು ವಿದ್ಯಾರ್ಥಿ ಮೇಲೆ ಬಿಸಿನೀರು ಎರಚಲಾಗಿದೆ ಎಂಬ ಮಾಹಿತಿ ಸ್ಥಳೀಯರಿಂದ ಸಿಕ್ಕಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿ ಮೇಲೆ ಬಿಸಿನೀರು ಎರಚಿದ ಪ್ರಕರಣ: ತನಿಖೆ ನಡೆಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರು

ಸದ್ಯ ಗಾಯಾಳು ವಿದ್ಯಾರ್ಥಿ ಲಿಂಗಸೂಗೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕತ್ತು, ಮುಖ, ತೊಡೆಭಾಗಕ್ಕೆ ಗಂಭೀರ ಗಾಯಗಳಾಗಿವೆ. ಇದರಿಂದ ಕಳೆದ 8 ದಿನಗಳಿಂದ ಆಸ್ಪತ್ರೆಯಲ್ಲಿ ‌ವಿದ್ಯಾರ್ಥಿ ನರಳಾಡುತ್ತಿದ್ದಾನೆ. ಇತ್ತ, ಈ ಘಟನೆ ಬಳಿಕ ಶಿಕ್ಷಕ ಹುಲಿಗೆಪ್ಪ ಎಂಬುವವರು ಶಾಲೆಗೆ ಗೈರು ಹಾಜರಾಗಿದ್ದಾರೆ. ಹೀಗಾಗಿಯೇ ಇದೇ ಶಿಕ್ಷಕನ ಮೇಲೆ ಅನುಮಾನ ಮೂಡಿದೆ.

ಇದನ್ನೂ ಓದಿ: ಸಮವಸ್ತ್ರದಲ್ಲಿ ಮಲವಿಸರ್ಜನೆ ಮಾಡಿದ್ದಕ್ಕೆ ವಿದ್ಯಾರ್ಥಿ ಮೈಮೇಲೆ ಬಿಸಿನೀರು ಎರಚಿ ಶಿಕ್ಷಕನ ವಿಕೃತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.