ETV Bharat / state

ನಿಮ್ಮ ಪಾರ್ಟಿ ಅವರನ್ನ ನೀವು ಕಂಟ್ರೋಲ್ ಮಾಡಿಕೊಳ್ಳಿ: ಸಿದ್ದರಾಮಯ್ಯಗೆ ಹೆಚ್​ಡಿಕೆ ಟಾಂಗ್

author img

By

Published : Jan 27, 2023, 9:36 PM IST

ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಕತೆ ಮುಗಿದು ಹೋಗಿದೆ - ಕಾಂಗ್ರೆಸ್ ಈಗ ಉಳಿದಿಲ್ಲ - ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಲೇವಡಿ

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ರಾಯಚೂರು : ನಾನು ಸಿಎಂ ಇದ್ದಾಗ, ಕಾಂಗ್ರೆಸ್ ಪಕ್ಷದವರು ಅನ್ ಕಂಡಿಷನ್ ಸಪೋರ್ಟ್ ಎಲ್ಲಿ ಕೊಟ್ಟಿದ್ದರು. ಸಿಎಂ ಅವರನ್ನು ಗುಲಾಮರನ್ನಾಗಿ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದ ಶಕ್ತಿನಗರದಲ್ಲಿ ಪಂಚರತ್ನ ಯಾತ್ರೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಂದು ಸಿಎಂ ಮಾಡಿ, ಹಾಗೆ ಮಾಡಿ, ಈಗ ಕೊಟ್ಟ ಕುದುರೆಯನ್ನ ಏರಲೂ ಆಗುತ್ತಿಲ್ಲ ಅಂತಿದ್ದಾರೆ. ಅಲ್ಲದೇ ಸಿಎಂ ಮಾಡಿ ಸ್ಲೋ ಪಾಯಿಸನ್ ಕೊಟ್ಟಿದ್ದರು. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಕತೆ ಮುಗಿದು ಹೋಗಿದೆ. ಕಾಂಗ್ರೆಸ್ ಈಗ ಉಳಿದಿಲ್ಲ. ನಿಮ್ಮ ಪಾರ್ಟಿಯವರನ್ನ ನೀವು ಕಂಟ್ರೋಲ್ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ಪಂಚರತ್ನಯಾತ್ರೆ ಮೂಲಕ ಸ್ಪಷ್ಟ ಬಹುಮತ ಕೊಡಿ ಅಂತ ಕೇಳಲು ಹೋಗುತ್ತಿದ್ದಾನೆ. ಸಿಎಂ ಇದ್ದಾಗ ಹೋಟೆಲ್​​ನಲ್ಲಿ ಅಧಿಕಾರ ನಡೆಸಿದರು ಅನ್ನೋ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಕುಮಾರಸ್ವಾಮಿ, 78 ಸೀಟ್ ಇದ್ದವರು, ಅವರು ಸರ್ಕಾರಿ ಬಂಗ್ಲೆ ಬಿಟ್ಟುಕೊಡಲಿಲ್ಲ. ನಾನೇನು ರಸ್ತೆಯಲ್ಲಿ ಅಧಿಕಾರ ನಡೆಸಲ್ಲ. ಅಮಿತ್ ಶಾ, ಸುರ್ಜೇವಾಲ್, ರಾಹುಲ್ ಗಾಂಧಿ ಎಲ್ಲಿ ಉಳಿದುಕೊಳ್ಳುತ್ತಾರೆ.

ಹೋಟೆಲ್​ನಲ್ಲಿ ಉಳಿದಿದ್ದೇ ತಪ್ಪಾ, ನಾನೇನು ಅಲ್ಲಿ ಚಕ್ಕಂದಾ ಆಡಲು ಹೋಗಿದ್ನಾ. ಸೂಟ್​ಕೇಸ್ ತರಲು ಇಂಡಸ್ಟ್ರಿ ಲಿಸ್ಟ್​ಗಳನ್ನ ಕರೆಸಿದ್ನಾ?. 109 ಕೋಟಿಗೆ ಅರ್ಜಿ ಹಿಡಿದುಕೊಂಡು ಬಂದ್ರಲ್ಲಾ, ಬಡಜನ ಆಸ್ಪತ್ರೆಗೆ ಅವರಿಗೆ ಕೊಡದಿದ್ರೆ ಆಗುತಿತ್ತಾ?. 19 ಸಾವಿರ ಕೋಟಿ ಇವರ ಮನೆಗೆ ಹೋಗಿ ಕೊಟ್ಟಿದ್ದೇನೆ. 15 ಜನ ಹೋದ್ರಲ್ಲಾ, ಒಬ್ಬೊಬ್ಬರಿಗೆ 500 ಕೋಟಿ ಹಣ ಅಭಿವೃದ್ಧಿಗೆ ಕೊಟ್ಟಿದ್ದೇವೆ. ಸಿದ್ದವನದಲ್ಲಿ ಕುಳಿತುಕೊಂಡು ಸಿದ್ದು ಔಷಧವನ್ನ ಅರೆದರಲ್ಲ, ಸರ್ಕಾರ ಬೀಳಿಸ್ತಿನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ದೇವೇಗೌಡರ ಕುಟುಂಬವನ್ನ ಒಡೆಯಲು ಆಗಲ್ಲ : ಭವಾನಿ ರೇವಣ್ಣಗೆ ಹೊಳೆನರಸಿಪುರಕ್ಕೆ ಸಿ ಟಿ ರವಿ ಆಹ್ವಾನ ನೀಡಿದ ಹೇಳಿಕೆಯ ವಿಚಾರಕ್ಕೆ, ಬಿಜೆಪಿಯವರಿಗೆ ಮನೆ ಒಡೆದು ಅಭ್ಯಾಸವಿದೆ. ದೇಶ ಒಡೆದವರು ಮನೆ ಒಡೆಯಲು ಬಂದಿದ್ದಾರೆ. ದೇವೇಗೌಡರ ಕುಟುಂಬವನ್ನ ಒಡೆಯಲು ಆಗಲ್ಲ. ನಮ್ಮ ಕುಟುಂಬದವರು ಅಗತ್ಯ ಇದ್ದರೆ ಮಾತ್ರ ಚುನಾವಣೆಗೆ ಇಳಿಯುತ್ತೇವೆ. ಕಾರ್ಯಕರ್ತರ ರಕ್ಷಣೆ ಬಂದಾಗ ನಮ್ಮ ಕುಟುಂಬವರು ಸ್ಪರ್ಧೆಗೆ ಇಳಿಯುತ್ತಾರೆ ಎಂದರು.

ರಾಯಚೂರು ಜಿಲ್ಲೆಯಲ್ಲಿ ಕಾಲುವೆ ಕೆಳಭಾಗದಲ್ಲಿ ಪ್ರತೀವರ್ಷ ನೀರಿನ ಕೊರತೆಯಿದೆ. ಶಾಶ್ವತ ಪರಿಹಾರಕ್ಕೆ ಜನ ಒತ್ತಾಯಿಸಿದ್ದಾರೆ. ಹತ್ತಿ ಬೆಳೆಗೆ ಬಿತ್ತನೆ ಬೀಜದ ಸಮಸ್ಯೆಯಿಂದ ಇಳುವರಿ ಕಡಿಮೆಯಾಗಿದೆ. ಹತ್ತಿ, ಮೆಣಸಿನಕಾಯಿ ಇಳುವರಿಯೂ ಕಡಿಮೆಯಾಗಿದೆ. ಬೆಲೆಯೂ ಕಡಿಮೆಯಾಗಿದೆ. ಮೂಲ ಸೌಕರ್ಯಗಳು ದೊರೆಯುತ್ತಿಲ್ಲ. ಸೌಕರ್ಯ ನೀಡುವಲ್ಲಿ 75 ವರ್ಷದಲ್ಲಿ ನಮ್ಮ ಗುರಿಯನ್ನ ಮುಟ್ಟಲು ಆಗಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಏನು ಹೇಳುತ್ತಾರೋ ಅದಕ್ಕೆ ತದ್ವಿರುದ್ದ ಆಗುತ್ತೆ : ಬಹಿರ್ದೆಸೆ ಮುಕ್ತ ಅಂತ ಸರ್ಕಾರದ ದಾಖಲೆಯಲ್ಲಿ ಮಾತ್ರ ಇದೆ. ಈಗ ಪಂಚರತ್ನ ಅಂತ ಕಾಂಗ್ರೆಸ್ ನವರು ವ್ಯಂಗ್ಯವಾಡುತ್ತಿದ್ದಾರೆ. ಒಂದು ಚಡ್ಡಿ ತಗೊಂಡ್ರೆ ಎರಡು ಚಡ್ಡಿ ಫ್ರಿ ಅಂತಾರೆ. ಹಂಗೆ ಈಗ ಉಚಿತ ಹೇಳುತ್ತಿದ್ದಾರೆ ಸಿದ್ದರಾಮಯ್ಯ. ಪಂಚರತ್ನ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದಕ್ಕೆ ತದ್ವಿರುದ್ದ ಆಗುತ್ತೆ. ಕುಮಾರಸ್ವಾಮಿ ಅವರಪ್ಪನ ಆಣೆ ಸಿಎಂ ಆಗಲ್ಲ ಅಂದಿದ್ರು. ನಾನು ಆದೆ. ಬಿಎಸ್​ವೈ ಆದ್ರು. ಈಗ ಕಾಂಗ್ರೆಸ್ ಗೆಲ್ಲುತ್ತೆ ಅಂತಿದ್ದಾರೆ ಅದು ಸುಳ್ಳು ಆಗುತ್ತದೆ ಎಂದು ಲೇವಡಿ ಮಾಡಿದರು.

ಓದಿ : ಸಚಿವರಾಗಲು ಸಿದ್ದರಾಮಯ್ಯ ಸರ್ಟಿಫಿಕೇಟ್​ ಬೇಕಿಲ್ಲ: ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.