ETV Bharat / state

ಕಾಂಗ್ರೆಸ್‌ ಮುಕ್ತ ಅಂದವರೇ ದೇಶದಿಂದ ಮುಕ್ತವಾಗ್ತಿದ್ದಾರೆ.. ಬಿಜೆಪಿ ವಿರುದ್ಧ ಬೋಸರಾಜ್ ಕಿಡಿ

author img

By

Published : Jan 17, 2020, 7:30 PM IST

ಕಾಂಗ್ರೆಸ್ ನಾಟಕ ಕಂಪನಿಯೆಂದು ಟೀಕಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bosaraj
ಎನ್.ಎಸ್.ಬೋಸರಾಜ್

ರಾಯಚೂರು: ಕಾಂಗ್ರೆಸ್ ನಾಟಕ ಕಂಪನಿಯೆಂದು ಟೀಕಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜ್..

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಪರ ಜನ ಜಾಗೃತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು.

ಪೌರತ್ವ ಕಾಯ್ದೆ ಬೆಂಬಲಿಸಿ ತಮ್ಮ ನಿಲುವು ಹೇಳುವುದಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ನಮ್ಮ ತಕರಾರು ಇಲ್ಲ.ಆದರೆ, ಭಾಷಣ ಮಾಡುವ ವೇಳೆ ಕಾಂಗ್ರೆಸ್ ಪಕ್ಷವನ್ನು ಡ್ರಾಮಾ ಕಂಪನಿ ಎಂದು ಟೀಕಿಸುವುದು ಸರಿಯಲ್ಲ. ಇದೀಗ ಕೆಲ ರಾಜ್ಯಗಳಲ್ಲಿ ಜನರು ಬಿಜೆಪಿಯನ್ನು ವಿರೋಧಿಸಿರುವುದರಿಂದ ಬಿಜೆಪಿಗೆ ಕಾಂಗ್ರೆಸ್​ನ ಬಗ್ಗೆ ನಡುಕು ಶುರುವಾಗಿದೆ ಎಂದು ಪ್ರಹ್ಲಾದ್ ಜೋಶಿಗೆ ಟಾಂಗ್‌ ಕೊಟ್ಟರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಕ್ಕೆ ನಮ್ಮ ವಿರೋಧವಿದೆ. ಕಾಯ್ದೆಗೆ ತಿದ್ದುಪಡಿ ತರುವಾಗ ತಜ್ಞರ ಅಭಿಪ್ರಾಯ ಸಂಗ್ರಹ ಮಾಡಿಲ್ಲ ಅಂತಾ ಮಾಜಿ ಎಂಎಲ್‌ಸಿಯೂ ಆಗಿರುವ ಬೋಸರಾಜ್‌ ಕಿಡಿಕಾರಿದರು.

Intro:ಸ್ಲಗ್: ಎನ್.ಎಸ್.ಬೋಸರಾಜ್ ಸುದ್ದಿಗೋಷ್ಠಿ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 17-01-2020
ಸ್ಥಳ: ರಾಯಚೂರು
ಆಂಕರ್: ಕಾಂಗ್ರೆಸ್ ನಾಟಕ ಕಂಪನಿಯೆಂದು ಟೀಕಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Body:ರಾಯಚೂರಿನ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ವಿಧೇಯಕ ತಿದ್ದುಪಡಿ ಬೆಂಬಲಿಸಿ, ಜನರಲ್ಲಿ ಜಾಗೃತಿ ಮೂಡಿಸಲು ರಾಯಚೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಂಗ್ರೆಸ್ ವಿರುದ್ದ ಟೀಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು. ಪೌರತ್ವ ಕಾಯಿದೆ ಬೆಂಬಲಿಸಿ ತಮ್ಮ ನಿಲುವುನ್ನ ಹೇಳುವುದಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿ ನಮ್ಮ ತಕರಾರು ಇಲ್ಲ. ಆದ್ರೆ ಭಾಷಣ ಮಾಡುವ ವೇಳೆ ಕಾಂಗ್ರೆಸ್ ಪಕ್ಷವನ್ನ ಡ್ರಾಂ ಕಂಪನಿಯನ್ನ ಎಂದು ಟೀಕಿಸುವುದು ಸರಿಯಲ್ಲ. ಇದೀಗ ಕೆಲ ರಾಜ್ಯಗಳಲ್ಲಿ ಜನರು ಬಿಜೆಪಿಯನ್ನ ವಿರೋಧಿಸಿರುವುದರಿಂದ ಬಿಜೆಪಿಗೆ ಕಾಂಗ್ರೆಸ್ ನ ಬಗ್ಗೆ ನಡುಕು ಶುರುವಾಗಿದೆ ಎಂದು ಪ್ರಹ್ಲಾದ್ ಜೋಶಿಗೆ ಟೀಕಿಸಿದ್ರು. ಇನ್ನೂ ಪೌರತ್ವ ಕಾಯಿದೆ ತಿದ್ದುಪಡಿ ಜಾರಿಗೆ ತರುವುದಕ್ಕೆ ನಮ್ಮ ವಿರೋಧವಿದೆ. ಕಾಯಿದೆ ತಿದ್ದುಪಡಿ ತರುವಾಗ ತಜ್ಞರ ಅಭಿಪ್ರಾಯ ಸಂಗ್ರಹ ಮಾಡಿದೆ ಕಾಯಿದೆಯನ್ನ ಜಾರಿಗೊಳಿಸಲಾಗಿದೆ.Conclusion:
ಬೈಟ್.1: ಎನ್.ಎಸ್.ಬೋಸರಾಜ್, ಕಾರ್ಯದರ್ಶಿ, ಎಐಸಿಸಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.