ETV Bharat / state

ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್

author img

By

Published : Aug 15, 2023, 6:00 PM IST

Updated : Aug 15, 2023, 10:45 PM IST

Minister Dr.Sharanprakash Patil: ಸರ್ಕಾರ ಪತನಗೊಳ್ಳುವ ಬಗ್ಗೆ ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಟೀಕಿಸಿದರು.

ಸಚಿವ ಡಾ. ಶರಣಪ್ರಕಾಶ್ ಪಾಟೀಲ್
ಸಚಿವ ಡಾ. ಶರಣಪ್ರಕಾಶ್ ಪಾಟೀಲ್

ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿಕೆ

ರಾಯಚೂರು : ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ. ರಾಯಚೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಸೋಲುತ್ತದೆ. ಪ್ರಧಾನಿ ಮೋದಿ ಕುರ್ಚಿ ಅಲ್ಲಾಡುತ್ತೆ ಎಂಬ ಸಿಎಂ ಸಿದ್ದರಾಮಯ್ಯರ ಹೇಳಿಕೆ ಕುರಿತು ಪ್ರತಿಕ್ರಿಯಿಸುವ ಮೂಲಕ ಬಿಜೆಪಿ ನಾಯಕರಿಗೆ ಸಚಿವರು ತಿರುಗೇಟು ನೀಡಿದರು.

"ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ನನಗೆ ‌ಗೊತ್ತಿಲ್ಲ. ರಾಜ್ಯದ ಜನರು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಬಿಜೆಪಿಯವರು ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ದರು. ಈಗ ಕಾಂಗ್ರೆಸ್‌ ಸರ್ಕಾರ ಬೀಳುತ್ತದೆ ಎಂದು ಹಗಲುಗನಸು ಕಾಣುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.

ಪರಿಷತ್​ ಸದಸ್ಯ ಜಗದೀಶ್ ಶೆಟ್ಟರ್ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರ ಮಾತನಾಡಿ, "ಪಾಪ ಜಗದೀಶ್ ಶೆಟ್ಟರ್ ಜೀವನಪೂರ್ತಿ ಒಂದೇ ಪಕ್ಷದಲ್ಲಿದ್ದು, ಈಗ‌ ನಮ್ಮ ಕಡೆ ಬಂದಿದ್ದಾರೆ. ಆದರೆ ಬಸವರಾಜ್ ಬೊಮ್ಮಾಯಿ ಎಷ್ಟು ಪಕ್ಷ ಬದಲಿಸಿದ್ದಾರೆ, ನಾನು ನಿಮಗೆ ಹೇಳಬೇಕಾ? ಶೆಟ್ಟರ್ ಬಗ್ಗೆ ಹೇಳುವ ಮುನ್ನ ಬೊಮ್ಮಾಯಿ ಆತ್ಮಾವಲೋಕನ‌ ಮಾಡಿಕೊಳ್ಳಲಿ" ಎಂದು ಸಚಿವರು ಟಾಂಗ್​ ಕೊಟ್ಟರು.

ಭಗವಾಧ್ವಜ ಹಾರಿಸುವ ಯತ್ನ: "ಬೆಳಗಾವಿಯಲ್ಲಿ ಭಗವಾಧ್ವಜ ಹಾರಿಸಲು ಯತ್ನಿಸಿರುವಬಗ್ಗೆ ಮಾಹಿತಿಯಿಲ್ಲ. ಧ್ವಜ ಹಾರಿಸಿದರೆ ತಪ್ಪು. ರಾಷ್ಟ್ರಧ್ವಜವನ್ನು ಎಲ್ಲರೂ ಗೌರವಿಸಬೇಕು. ರಾಷ್ಟ್ರಧ್ವಜ ನಮ್ಮ ರಾಷ್ಟ್ರದ ಸ್ವಾಭಿಮಾನದ ಸಂಕೇತ" ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

ಇದನ್ನೂ ಓದಿ : ಬಿಜೆಪಿಯಿಂದ ಕರ್ನಾಟಕ ಸರ್ಕಾರ ಅಭದ್ರಗೊಳಿಸುವುದು ಅಸಾಧ್ಯದ ಮಾತು: ದಿಗ್ವಿಜಯ ಸಿಂಗ್

ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಸರ್ಕಾರ ಮೇಲೆ ಮಾಡಿರುವ ಆರೋಪಕ್ಕೆ, "ಅವರು ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ನಮ್ಮ ಸರ್ಕಾರ ಪಾರದರ್ಶಕತೆಯಿಂದ ಕೆಲಸ ಮಾಡುತ್ತಿದೆ. ವಾಗ್ದಾನ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದೆ. ಹಿಂದಿನ ಸರ್ಕಾರದವರು ಪಿಎಸ್‌ಐ ನೇಮಕಾತಿಯಲ್ಲಿ ಬಹಳ ದೊಡ್ಡ ಹಗರಣ ಮಾಡಿದ್ದು ಯುವಕರು ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಳ್ಳುವ ವಾತಾವರಣ ಸೃಷ್ಠಿಯಾಗಿತ್ತು" ಎಂದರು. ಈ ಸಂದರ್ಭದಲ್ಲಿ ಶಾಸಕ ಬಸವನಗೌಡ ದದ್ದಲ್ ಇದ್ದರು.

'ಯತ್ನಾಳ್ ಮನಸ್ಥಿತಿ ಸರಿ ಇಲ್ಲ': ಬಿಜೆಪಿ ಸರ್ಕಾರವೇ ಬೀಳುವುದಾಗಿ 5 ವರ್ಷದ ಹಿಂದೆ ಹೇಳಿದ್ದರು. ಆದರೆ ಸರ್ಕಾರವನ್ನು ಬೀಳಿಸಲು ಸಾಧ್ಯವಾಗಿಲ್ಲ. ಸಿಎಂ ಕುರ್ಚಿಗೆ ಒಂದೂವರೆ ಸಾವಿರ ಕೋಟಿ ನೀಡಬೇಕು ಎಂದಿದ್ದರು. ಅವರು ಏನಾದರು ಹೇಳಲೇಬೇಕೆಂದು ಏನೋ ಹೇಳಿಕೆ ಕೊಟ್ಟಿದ್ದಾರೆ. ಅವರ ಮಾತುಗಳನ್ನು ಕೇಳಬೇಡಿ. ಅವರ ಮನಸ್ಥಿತಿ ಸರಿಯಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ​ವಿರುದ್ಧ ಮೀನುಗಾರಿಕೆ ಇಲಾಖೆ ಸಚಿವ ಮಂಕಾಳು ವೈದ್ಯ ಕಾರವಾರದಲ್ಲಿ ಹೇಳಿದರು.

ಇದನ್ನೂ ಓದಿ : 77th Independence Day: ಕೋಮು ಶಕ್ತಿಗಳ ವಿರುದ್ಧ ಇಂದಿನ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕು: ಡಿಸಿಎಂ ಡಿಕೆಶಿ

Last Updated : Aug 15, 2023, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.