ETV Bharat / state

ಕಾಂಗ್ರೆಸ್ ಭದ್ರ ಕೋಟೆ ಛಿದ್ರ ಮಾಡಿದ ಬಿಜೆಪಿ, ಬಿಸಿಲೂರಿನಲ್ಲಿ ಕಮಲ ಪಕ್ಷದ ಹವಾ!

author img

By

Published : May 26, 2019, 7:43 PM IST

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವವಿದ್ರೂ ಬಿಜೆಪಿ ಈ ಬಾರಿ ವಿಜಯ ಪಾತಕೆ ಹಾರಿಸಿದೆ. 2014 ರಲ್ಲಿ ಮೋದಿ ಅಲೆ ಲೆಕ್ಕಿಸದ ಕ್ಷೇತ್ರ 2019 ರಲ್ಲಿ ಕೇಸರಿ ಪಕ್ಷದ ಕೈ ಹಿಡಿದಿದ್ದು ಹೇಗೆ?

ಕಾಂಗ್ರೆಸ್ ಭದ್ರ ಕೋಟೆಗೆ ಕಾಲಿಟ್ಟ ಬಿಜೆಪಿ

ರಾಯಚೂರು : ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಿಸಿಲೂರಿನಲ್ಲಿ ಹಿಂದೆಲ್ಲಾ ಸತತವಾಗಿ ಕೈ ತನ್ನ ಅಧಿಪತ್ಯ ಸಾಧಿಸುತ್ತಾ ಬಂದಿತ್ತು. ಆದ್ರೆ ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ಮೋದಿಯ ಅಬ್ಬರಕ್ಕೆ ಬಲಿಯಾದ ಕಾಂಗ್ರೆಸ್ ಪರಾಭವಗೊಂಡಿದೆ. ಜಿಲ್ಲೆಯಲ್ಲಿ ಕಮಲ ಅಭ್ಯರ್ಥಿ ಬಹುಮತಗಳ ಅಂತರದಿಂದ ಭರ್ಜರಿ ಜಯಗಳಿಸುವ ಮೂಲಕ ಪಾರುಪತ್ಯ ಮೆರೆದಿದೆ.

ರಾಯಚೂರು ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಕಾಂಗ್ರೆಸ್ ಪ್ರಭಾವ ಹೊಂದಿರುವ ಯಾವುದೇ ಅಭ್ಯರ್ಥಿ ಸ್ಪರ್ಧೆ ಮಾಡಿದ್ರೂ ಸುಲಭವಾಗಿ ಜಯ ಸಾಧಿಸಬಹುದು ಎಂಬ ಮಾತು ಕ್ಷೇತ್ರದಲ್ಲಿದೆ. ಆದ್ರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾವವಿದ್ರೂ ಬಿಜೆಪಿ ಬಹುಮತದಿಂದ ವಿಜಯ ಪಾತಕೆ ಹಾರಿಸಿದೆ.ಈ ಮೂಲಕ ರಾಜಾ ಅಮರೇಶ್ವರ ನಾಯಕ ರಾಯಚೂರು ಲೋಕಸಭೆಯಿಂದ ಸಂಸದನಾಗಿ ಆಯ್ಕೆಯಾದ ಎರಡನೇ ಬಿಜೆಪಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಕಾಂಗ್ರೆಸ್ ಭದ್ರ ಕೋಟೆಗೆ ಕಾಲಿಟ್ಟ ಬಿಜೆಪಿ

2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಿತ್ತು. ಈ ಅಲೆಯಲ್ಲಿಯೂ ಆಯ್ಕೆಯಾದ ಕಾಂಗ್ರೆಸ್ ಶಾಸಕರಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಬಿ.ವಿ.ನಾಯಕ ಒಬ್ಬರು. ಈ ಮೂಲಕ ಕ್ಷೇತ್ರದಲ್ಲಿ ಪ್ರಭಾವಿ ವ್ಯಕ್ತಿಯ ಅಲೆ ನಡೆಯುವುದಿಲ್ಲ ಎನ್ನುವ ಸಂದೇಶವನ್ನು ಅಂದು ಮತದಾರರು ಬರೆದಿದ್ದರು. ಆದ್ರೆ ಈ ಬಾರಿ ಚುನಾವಣೆಯಲ್ಲಿ ಮೋದಿ ಅಲೆ ವರ್ಕ್‌ಔಟ್ ಆಗಿದ್ದು, ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದುವರೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕೈ ಪಕ್ಷದ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ರು. 2009ರಲ್ಲಿ ನಡೆದಂಥ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಬಳ್ಳಾರಿ ಸಣ್ಣ ಫಕೀರಪ್ಪ ಬಿಜೆಪಿ ಸಂಸದರಾಗಿ ಆಯ್ಕೆಯಾಗಿ, ಕ್ಷೇತ್ರ ಕಾಂಗ್ರೆಸ್ ಕೈ ತಪ್ಪುವಂತೆ ಮಾಡಿದ್ರು. 2014ರಲ್ಲಿ ನಡೆದ ಲೋಕ ಸಮರದಲ್ಲಿ ಮೋದಿಯ ಅಲೆಯಲ್ಲಿ ಸ್ಪರ್ಧಿಸಿ ಬಿ.ವಿ.ನಾಯಕ 1,499 ಮತ ಅಂತರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಜಯಗಳಿಸುವ ಮೂಲಕ ರಾಯಚೂರು ಜಿಲ್ಲೆ ಮತ್ತೆ ಕೈ ಪಕ್ಷದ ತೆಕ್ಕೆಗೆ ಜಾರಿತ್ತು.

ಆದ್ರೆ ಕಳೆದ ಬಾರಿ ನಡೆಯದ ಮೋದಿ ಅಲೆ ಪ್ರಸಕ್ತ ವರ್ಷದಲ್ಲಿ ಮೋಡಿ ಮಾಡಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆದ್ದು ಬರುವ ಮೂಲಕ ಗೆಲುವು ಸಾಧಿಸಿದ ಎರಡನೇ ಬಿಜೆಪಿ ಅಭ್ಯರ್ಥಿ ಎಂಬ ಹೆಗ್ಗಳಿಕೆ ಪಡೆದು ಹೊಸ ದಾಖಲೆ ಬರೆದಿದ್ದಾರೆ.

Intro:ಸ್ಲಗ್: ಎರಡನೇ ಬಾರಿ ಆಯ್ಕೆ ಬಿಜೆಪಿ ಅಭ್ಯರ್ಥಿ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 26-೦5-2019
ಸ್ಥಳ: ರಾಯಚೂರು
ಆಂಕರ್: ಬಿಸಿಲೂರು ರಾಯಚೂರು ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ. ಇದುವರೆಗೆ ನಡೆದಂತಹ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನ ಮೇಲುಗೈ ಸಾಧಿಸುತ್ತ ಬಂದಿದ್ದಾರೆ. ಆದ್ರೆ ಮೊನ್ನೆ ನಡೆದ ಲೋಕಾ ಸಮರದಲ್ಲಿ ಕೈ ಅಭ್ಯರ್ಥಿಯನ್ನಾ ಪರಾಭವಗೊಳಿಸಿ, ಬಿಜೆಪಿ ಬಾವುಟ ಹರಿಸಿ, ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ರಾಯಚೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಕಾಂಗ್ರೆಸ್ ನಿಂದ ಪ್ರಭಾವಹೊಂದಿರುವ ಅಭ್ಯರ್ಥಿ ಸ್ಪರ್ಧೆ ಮಾಡಿದ್ರೆ ಸುಲಭವಾಗಿ ಜಯ ಸಾಧಿಸಬಹುದು ಎಂಬ ಮಾತು ಕ್ಷೇತ್ರದಲ್ಲಿಯಿದೆ. ಆದ್ರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾವವಿದ್ರೂ ಬಿಜೆಪಿ ತನ್ನ ಬಲಾಢ್ಯ ಸಾಧಿಸುವ ಮೂಲಕ ಬಾರಿ ಬಹುಮತದಿಂದ ವಿಜಯ ಪಾತಕೆ ಹರಿಸಿದ್ದಾರೆ. ಈ ಮೂಲಕ ರಾಜಾ ಅಮರೇಶ್ವರ ನಾಯಕ ರಾಯಚೂರು ಲೋಕಸಭೆಯಿಂದ ಸಂಸದನಾಗಿ ಆಯ್ಕೆಯಾದರ ಎರಡನೇ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ವಾಯ್ಸ್ ಓವರ್.2: ಇನ್ನು 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಿತ್ತು. ಇಂತಹ ಅಲೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ ಶಾಸಕರಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಬಿ.ವಿ.ನಾಯಕ ಒಬ್ಬರು. ಈ ಮೂಲಕ ಕ್ಷೇತ್ರದಲ್ಲಿ ಎಂತಹ ಪ್ರಭಾವಿ ವ್ಯಕ್ತಿಯ ಅಲೆ ನಡೆಯುವುದಿಲ್ಲ ಎನ್ನುವ ಸಂದೇಶವನ್ನ ಅಂದು ಬರೆದ್ರು. ಆದ್ರೆ ಈ ಬಾರಿ ಚುನಾವಣೆಯಲ್ಲಿ ಮೋದಿ ಅಲೆಗೆ ವರ್ಕ್ ಔಟ್ ಆಗಿದ್ದು, ಒಂದು ಲಕ್ಷಕ್ಕೂ ಅಧಿಕ ಮತ ಅಂತರದಿಂದ ಗೆಲುವು ಸಾಧಿಸಿದ್ದಾರೆ.
Conclusion:ವಾಯ್ಸ್ ಓವರ್.3: ಇನ್ನೂ ಇದುವರೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕೈ ಪಕ್ಷದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ರು. 2009ರಲ್ಲಿ ನಡೆದಂತಹ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಬಳ್ಳಾರಿ ಸಣ್ಣ ಫಕೀರಪ್ಪ ಬಿಜೆಪಿ ಸಂಸದರಾಗಿ ಆಯ್ಕೆಯಾಗಿ, ಕಾಂಗ್ರೆಸ್ ನಿಂದ ಲೋಕಸಭೆ ಕ್ಷೇತ್ರ ಕೈತಪ್ಪುವಂತೆ ಮಾಡಿತ್ತು. 2014ರಲ್ಲಿ ನಡೆದ ಲೋಕಾ ಸಮರದಲ್ಲಿ ಮೋದಿಯ ಅಲೆಯಲ್ಲಿ ಸ್ಪರ್ಧಿಸಿ ಬಿ.ವಿ.ನಾಯಕ 1499 ಮತ ಅತಂರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ, ಜಯಗಳಿಸುವ ಮೂಲಕ ರಾಯಚೂರು ಜಿಲ್ಲೆ ಕೈ ಪಕ್ಷದ ತೆಕ್ಕೆ ಹರಿತ್ತು. ಆದ್ರೆ ಕಳೆದ ಬಾರಿ ನಡೆಯದ ಮೋದಿ ಅಲೆ ಪ್ರಸಕ್ತವಾಗಿ ನಡೆಯದೆ ಈ ಚುನಾವಣೆಯಲ್ಲಿ ಮೋದಿ ಅಲೆಯಿಂದಾಗಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆದ್ದು ಬರುವ ಮೂಲಕ ಇದುವರೆ ನಡೆದಂತಹ ಲೋಕಸಭೆ ಚುನಾವಣೆಯಲ್ಲಿ ಬಾರಿ ಅಂತರದಿಂದ ಗೆಲುವು ಸಾಧಿಸಿದ ಎರಡನೇ ಬಿಜೆಪಿ ಅಭ್ಯರ್ಥಿ ಎಂಬ ಹೆಗ್ಗಳಿಕೆ ಪಡೆದು ಹೊಸ ದಾಖಲೆ ಬರೆದಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.