ETV Bharat / state

ಲಾರಿ ಚಕ್ರಕ್ಕೆ ಸಿಲುಕಿ ಬಾಲಕ ಸಾವು, ಇಬ್ಬರಿಗೆ ಗಂಭಿರ ಗಾಯ

author img

By

Published : Jan 21, 2021, 1:43 AM IST

ಮೃತ ಬಾಲಕ (12) ತೆಲಂಗಾಣದ ನಾರಾಯಣಪೇಟ ಮೂಲದವನೆಂದು ತಿಳಿದು ಬಂದಿದೆ.

Accident
Accident

ಗುರುಮಠಕಲ್: ತಾಲ್ಲೂಕಿನ ಪಸಪುಲ ಗೇಟ್ ಹತ್ತಿರ ಬುಧವಾರ ಸಂಜೆ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಾಗ ಬೈಕ್​ನಲ್ಲಿದ್ದ ಬಾಲಕ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಜರುಗಿದೆ.

Accident
ಲಾರಿ ಚಕ್ರದಲ್ಲಿ ಸಿಲುಕಿಕೊಂಡ ಬೈಕ್​

ಪಸಪುಲ ಗೇಟ್ ಹತ್ತಿರ ಈ ಘಟನೆ ನಡೆದಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೃತ ಬಾಲಕ (12) ತೆಲಂಗಾಣದ ನಾರಾಯಣಪೇಟ ಮೂಲದವನೆಂದು ತಿಳಿದು ಬಂದಿದೆ. ಬೈಕ್​ನಲ್ಲಿದ್ದ ಇನ್ನಿಬ್ಬರಿಗೆ ಗಂಭಿರ ಗಾಯಗಳಾಗಿದ್ದು, ಇವರನ್ನ ಹೈವೇ ಪಾಟ್ರೋಲ್ ವಾಹನ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳುಹಿಸಲಾಗಿದೆ ಎಂದು ಗುರುಮಠಕಲ್ ಸಿಪಿಐ ದೇವೀಂದ್ರಪ್ಪ ದೂಳಖೇಡ್ ತಿಳಿಸಿದರು.

ಓದಿ:ಎತ್ತಿನ ಬಂಡಿಗೆ ಟ್ರ್ಯಾಕ್ಟರ್​ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು

ಸ್ಥಳಕ್ಕೆ ಗುರುಮಠಕಲ್ ಸಿಪಿಐ ದೇವೀಂದ್ರಪ್ಪ ದೂಳಖೇಡ್ ಮತ್ತು ಪಿ.ಎಸ್.ಐ ಹನಮಂತ ಬಂಕಳಿಗಿ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.