ETV Bharat / state

ಆಹಾರದಲ್ಲಿ ಸಿರಿಧಾನ್ಯಗಳ ಉಪಯೋಗ.. ಪ್ಲಾಸ್ಟಿಕ್​ ಬದಲು ಪೇಪರ್​ ಬಳಕೆ ಬಗ್ಗೆ ಸಿಎಫ್​ಟಿಆರ್​ಐ ನಿರ್ದೇಶಕರ ಮಾತು

ಸಿರಿಧಾನ್ಯಗಳ ಬಳಕೆಯಿಂದ ಉಂಟಾಗುವ ಲಾಭಗಳ ಬಗ್ಗೆ ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾಹಿತಿ ನೀಡಿದ್ದಾರೆ.

author img

By

Published : Aug 2, 2023, 7:32 PM IST

Updated : Aug 3, 2023, 6:34 AM IST

ಸಿಎಫ್​ಟಿಆರ್​ಐ ನಿರ್ದೇಶಕಿ ಶ್ರೀ ದೇವಿ ಅನ್ನಪೂರ್ಣ ಸಿಂಗ್

ಸಿಎಫ್​ಟಿಆರ್​ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಸಂದರ್ಶನ

ಮೈಸೂರು : ಆಗಸ್ಟ್ 3 ಮತ್ತು 4ರಂದು ಪ್ಲಾಸ್ಟಿಕ್ ಬದಲಿಗೆ ಪೇಪರ್​​ನಿಂದ ಉತ್ಪಾದಿಸಿದ ಫುಡ್ ಪ್ಯಾಕೆಟ್​​ ಬಳಕೆ ಬಗ್ಗೆ ಸಿಎಫ್​ಟಿಆರ್​ಐನಲ್ಲಿ ಎರಡು ದಿನಗಳ ಸೆಮಿನಾರ್​ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಈ ವರ್ಷ ಸಿರಿ ಧಾನ್ಯಗಳ ವರ್ಷವಾಗಿ ಆಚರಣೆ ಮಾಡಲಾಗುತ್ತಿದ್ದು, ಸಿರಿಧಾನ್ಯಗಳ ಮಹತ್ವ ಹಾಗು ಸಂಸ್ಕರಣೆ ಬಗ್ಗೆ ಸಿಎಫ್​ಟಿಆರ್​ಐ ಕೈಗೊಂಡಿರುವ ಸಂಶೋಧನೆ ಕುರಿತು ಸಿಎಫ್​ಟಿಆರ್​ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಸಿರಿಧಾನ್ಯಗಳ ಬಳಕೆಯಲ್ಲಿ ಪಾಸ್ಪರಸ್, ಝಿಂಕ್, ಐರನ್, ಕ್ಯಾಲ್ಸಿಯಂ ನಂತಹ ಅಂಶಗಳು ಹೆಚ್ಚಾಗಿರುವುದರಿಂದ ಡಯಾಬಿಟಿಸ್, ಕ್ಯಾನ್ಸರ್​​ನಂತಹ ಕಾಯಿಲೆಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣ ಮಾಡಲು ಸಹಕಾರಿಯಾಗಿದೆ. ಸಿರಿಧಾನ್ಯಗಳಲ್ಲಿ ಶುಗರ್ ಅಂಶ ಕಡಿಮೆ ಇದ್ದು, ಗ್ಲೂಕೋಸ್ ಇದೆ. ಅದರಿಂದ ಈ ಪದಾರ್ಥಗಳು ಬೇಗ ಜೀರ್ಣವಾಗುವುದಿಲ್ಲ. ಬ್ಲಡ್ ಗ್ಲೂಕೋಸ್ ಲೆವೆಲ್ ಮೆಂಟೇನ್ ಆಗುತ್ತದೆ. ಡಯಾಬಿಟಿಸ್ ಇರುವವರಿಗೆ ಸಿರಿಧಾನ್ಯಗಳು ಒಳ್ಳೆಯ ಆಹಾರ ಎಂದು ಸಿಎಫ್​ಟಿಆರ್​ಐನಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಲಾಗುತ್ತಿದೆ ಎಂದು ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ತಿಳಿಸಿದರು.

ಇದನ್ನೂ ಓದಿ : ಕರ್ನಾಟಕದಲ್ಲಿ ಶ್ವಾಸಕೋಶ ಕ್ಯಾನ್ಸರ್​ನಿಂದ ಅಧಿಕ ಸಾವು: ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಗೊತ್ತಾ?

ಸಿರಿಧಾನ್ಯಗಳ ಮಹತ್ವ ಏನು? : ಈ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿದೆ. ಭಾರತದಲ್ಲಿ ಪ್ರಪಂಚದ ಶೇಕಡ 90ರಷ್ಟು ಸಿರಿಧಾನ್ಯಗಳ ಉತ್ಪಾದನೆ ಆಗುತ್ತಿದೆ. ಆದರೆ ಇದು ಸ್ಥಳೀಯವಾಗಿ ಮಾತ್ರ ಉಪಯೋಗವಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪುತ್ತಿಲ್ಲ. ಏಕೆಂದರೆ ಸಿರಿಧಾನ್ಯಗಳ ಸಂಸ್ಕರಣೆಗೆ ನಮ್ಮಲ್ಲಿ ತಂತ್ರಜ್ಞಾನ ಅಭಿವೃದ್ಧಿ ಆಗಿಲ್ಲ. ಈ ತಂತ್ರಜ್ಞಾನದ ಅಭಿವೃದ್ಧಿಯ ಕಡೆ ಸಿಎಫ್​ಟಿಆರ್​ಐ ಕೆಲಸ ಮಾಡುತ್ತಿದೆ. ಈಗಾಗಲೇ ಹಲವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ಸಿರಿಧಾನ್ಯಗಳ ಉತ್ಪಾದನೆಗೆ ಪ್ರೋತ್ಸಾಹ ಸಹ ಮಾಡಬೇಕಿದ್ದು, ಅದರ ಕಡೆಗೆ ಸಿಎಫ್​ಟಿಆರ್​ಐ ಕೆಲಸ ಮಾಡುತ್ತಿದೆ ಎಂದರು.

ಪೇಪರ್ ಪ್ಯಾಕೇಜ್ ತಂತ್ರಜ್ಞಾನ ಬಳಕೆ : ವಿಶ್ವದಲ್ಲಿ ಪ್ರತಿವರ್ಷ 450 ಮಿಲಿಯನ್ ಟನ್ ಪ್ಲಾಸ್ಟಿಕ್​ ಬಳಕೆ ಮಾಡುತ್ತಿದ್ದೇವೆ. ಬಳಸಿ ಬಿಸಾಡುವ ಪ್ಲಾಸ್ಟಿಕ್ ಎಂದೂ ಬ್ರೇಕ್ ಡೌನ್ ಆಗುವುದಿಲ್ಲ. ಬ್ರೇಕ್ ಅಪ್ ಆಗುತ್ತದೆ. ಪ್ಲಾಸ್ಟಿಕ್ ಶೇಕಡಾ 80ರಷ್ಟು ಪುನರ್​​ಬಳಕೆ ಆಗುವುದಿಲ್ಲ. ಇದರಿಂದ ಹಲವು ಸಮಸ್ಯೆಗಳು ಉಲ್ಬಣಿಸುತ್ತವೆ. ಇದಕ್ಕೆ ಬದಲಾಗಿ ಪೇಪರ್​ನಿಂದ ಫುಡ್ ಪ್ಯಾಕೇಜ್ ಮಾಡುವುದು ಹೇಗೆ ಎಂಬ ಬಗ್ಗೆ ಎರಡು ದಿನದ ಕಾರ್ಯಾಗಾರ ಆಗಸ್ಟ್ 3 ಮತ್ತು 4ರಂದು ಸಿಎಫ್​ಟಿಆರ್​ಐನಲ್ಲಿ ನಡೆಯಲಿದೆ ಎಂದು ಸಿಎಫ್​ಟಿಆರ್​ಐ ನಿರ್ದೇಶಕರು ಹೇಳಿದರು.

ಇದನ್ನೂ ಓದಿ : ಮೈಸೂರಿನಲ್ಲಿ ಆಹಾರ ಸಂಶೋಧನೆ ಸಂಭ್ರಮೋತ್ಸವ: ಮುಕ್ತ ಪ್ರವೇಶ ಅವಕಾಶ ಕಲ್ಪಿಸಿರುವ ಸಿಎಫ್​ಟಿಆರ್​ಐ

Last Updated : Aug 3, 2023, 6:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.