ETV Bharat / state

ವರುಣಾಗೆ ವಿಜಯೇಂದ್ರ ಬಂದರೆ ಸ್ವಾಗತ: ಬಿಜೆಪಿ ಟಿಕೆಟ್ ಅಕಾಂಕ್ಷಿ ಸದಾನಂದ

author img

By

Published : Mar 30, 2023, 4:33 PM IST

Updated : Mar 30, 2023, 5:18 PM IST

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ವ್ಯಕ್ತಿಯನ್ನೇ ನಿಲ್ಲಿಸಲು ಬಿಜಪಿ ಹೈಕಮಾಂಡ್​ ನಿರ್ಧರಿಸಿದೆ.

BJP ticket aspirant Sadananda
ಬಿಜೆಪಿ ಟಿಕೆಟ್ ಅಕಾಂಕ್ಷಿ ಸದಾನಂದ

ಬಿಜೆಪಿ ಟಿಕೆಟ್ ಅಕಾಂಕ್ಷಿ ಸದಾನಂದ

ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದಿಂದ, ಕಾಂಗ್ರೆಸ್​​ನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭ್ಯರ್ಥಿಯಾಗಿರುವುದರಲ್ಲಿ ವಿಶೇಷತೆ ಏನಿಲ್ಲ, ವರುಣಾಗೆ ವಿಜಯೇಂದ್ರ ಅವರು ಬಿಜೆಪಿ ಅಭ್ಯರ್ಥಿಯಾಗಿ ಬಂದರೆ ಅವರಿಗೆ ನಮ್ಮ ಸ್ವಾಗತ ಇದೆ ಎಂದು ವರುಣಾ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಅಕಾಂಕ್ಷಿ ಸದಾನಂದ ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅಕಾಂಕ್ಷಿಯಾಗಿರುವ ಸದಾನಂದ ಅವರು ಮೈಸೂರಿನ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿದರು. ನಂತರ ಈಟಿವಿ ಭಾರತ ಪ್ರತಿನಿಧಿಗೆ ವಿಶೇಷ ಸಂದರ್ಶನ ನೀಡಿ. ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಆಗಿರುವ ಸಿದ್ದರಾಮಯ್ಯ ಆಯ್ಕೆ ವಿಚಾರದಲ್ಲಿ ಯಾವುದೇ ವಿಶೇಷತೆ ಇಲ್ಲ. ಆದರೆ ಕೆಲವೇ ದಿನಗಳಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದು, ಹೈಕಮಾಂಡ್​ ಯಾರೇ ಅಭ್ಯರ್ಥಿಯನ್ನು ಘೋಷಣೆ ಮಾಡಿದರೂ ನಾವೆಲ್ಲರೂ ಒಟ್ಟಿಗೆ ಸೇರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕೆಲಸ ಮಾಡುತ್ತೇವೆ ಎನ್ನುವ ಆಶಾಭಾವನೆ ನಮಿಗಿದೆ ಎಂದರು.

ಯಾರನ್ನು ವರುಣಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತಾರೆ ಎನ್ನುವುದು ನಮಗೆ ತಿಳಿದಿಲ್ಲ. ಅದು ಹೈಕಮಾಂಡ್​ ಕೈಯಲ್ಲೇ ಇದೆ ಎಂದ ಸದಾನಂದ, ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಸೋಲಿಸುವ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲಿದೆ ಎಂದು ತಿಳಿಸಿದರು.

ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಸಹಕಾರ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಉತ್ತಮವಾದ ಕೆಲಸಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಜನರ ಜೊತೆ ಪ್ರತಿನಿತ್ಯ ಒಡನಾಟ ಇಟ್ಟುಕೊಂಡಿದ್ದೇನೆ, ಜನರೊಂದಿಗೆ ಸಂಪರ್ಕ ಇದೆ. ಸಹಕಾರ ಕ್ಷೇತ್ರದ ಅಥವಾ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವಂತಹ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದರಿಂದ ಜನ ನನಗೆ ಸಹಕಾರ ಕೊಡುತ್ತಾರೆ ಎನ್ನುವ ವಿಶ್ವಾಸ ಕೂಡ ನನಗಿದೆ. ಜನರ ಸಹಕಾರದಿಂದ ನಾನು ಕೂಡ ಗೆಲುವಿನ ದಡ ಸೇರಬಹುದು. ಸಮಾಜಸೇವೆ ಮತ್ತು ಪಕ್ಷದ ಪ್ರಾಮಾಣಿಕ ವ್ಯಕ್ತಿಯಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಬಹುದು ಎನ್ನುವ ಆಶಾಭಾವನೆ ನನ್ನಲ್ಲಿದೆ. ಭಾರತೀಯ ಜನತಾ ಪಕ್ಷ ಜಾತಿಗೆ ಮೀಸಲಾಗಿ ಯಾವತ್ತೂ ಚುನಾವಣೆಯನ್ನು ನಡೆಸಿಲ್ಲ. ಎಲ್ಲಾ ಜಾತಿ, ಎಲ್ಲಾ ಧರ್ಮದವರನ್ನು ಒಗ್ಗೂಡಿಸಿಕೊಂಡು ಚುನಾವಣೆಯನ್ನು ನಡೆಸುತ್ತಿರುವುದರಿಂದ ಎಲ್ಲರ ಸಹಕಾರ ಇದೆ. ಹೈಕಮಾಂಡ್ ಟಿಕೆಟ್ ನೀಡಿದರೆ ನಾನು ಸಹ ಸ್ಪರ್ಧೆ ಮಾಡುತ್ತೇನೆ ಎಂದು ಸದಾನಂದ ಹೇಳಿದರು.

ವರುಣಾ ಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅಭ್ಯರ್ಥಿಯಾಗಿ ಬಂದರೆ ನಮ್ಮ ಸ್ವಾಗತ ಇದೆ. ಅವರು ನಮ್ಮ ಕ್ಷೇತ್ರಕ್ಕೆ ಬಂದರೆ ಎಲ್ಲರ ಬೆಂಬಲವೂ ಸಿಗಲಿದ್ದು, ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಜೊತೆಗೆ ವರುಣಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ, ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ವರಿಷ್ಠರು ಈ ಭಾಗದ ಬಿಜೆಪಿ ಮುಖಂಡರಿಗೆ ಸಂದೇಶ ನೀಡಿದ್ದಾರೆ. ಅದರಂತೆ ಯಾರಿಗೆ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸದಾನಂದ ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಟಿಕೆಟ್​ ಹಂಚಿಕೆ ಅಸಮಾಧಾನ: ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ

Last Updated : Mar 30, 2023, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.