ETV Bharat / state

ಲಸಿಕೆ ಹಾಕಿಸಿಕೊಳ್ಳಲು ಗ್ರಾಮಸ್ಥರ ಹಿಂದೇಟು: ಬೀದಿ, ಬೀದಿ ಸುತ್ತುತ್ತಿರುವ ಸಿಬ್ಬಂದಿ

author img

By

Published : Sep 30, 2021, 1:49 PM IST

ಕೊರೊನಾ ಲಸಿಕೆ ಪಡೆಯಲು ಗ್ರಾಮಸ್ಥರು ಹಿಂಜರಿಯುತ್ತಿರುವ ಹಿನ್ನೆಲೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಗ್ರಾಮಗಳಲ್ಲಿ ಲಸಿಕೆ ಕಿಟ್ ಗಳನ್ನ ಹಿಡಿದು ವೈದ್ಯಕೀಯ ಸಿಬ್ಬಂದಿ ಬೀದಿಗಳಲ್ಲಿ ಕೂಗುತ್ತಾ ಸಾಗುತ್ತಿದ್ದಾರೆ.

Villagers not agree to take vaccine in mysure
ಲಸಿಕೆ ಕಿಟ್ ಹಿಡಿದು ಬೀದಿ, ಬೀದಿ ಸುತ್ತುತ್ತಿರುವ ವೈದ್ಯಕೀಯ ಸಿಬ್ಬಂದಿ

ಮೈಸೂರು: ಹಳ್ಳಿಗಳಲ್ಲಿ ಅನೇಕರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಬೆನ್ನಲ್ಲೇ ಇದೀಗ ಮೈಸೂರಿನಲ್ಲಿ ವೈದ್ಯಕೀಯ ಸಿಬ್ಬಂದಿ ಬೀದಿ ಬೀದಿ ಸುತ್ತಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.

ಜಿಲ್ಲೆಯ ಸರಗೂರು ತಾಲೂಕಿನ ಯಶವಂತಪುರ ಗ್ರಾಮ ಸೇರಿದಂತೆ ಹಲವು ಗ್ರಾಮಗಳನ್ನು ಆರೋಗ್ಯ ಸಿಬ್ಬಂದಿ ಸುತ್ತಾಡಿ, ಕೊರೊನಾ ಲಸಿಕೆ ಪಡೆಯುವಂತೆ ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದಾರೆ. ಲಸಿಕೆ ಕಿಟ್ ಹಿಡಿದು ಪ್ರತಿಯೊಬ್ಬರ ಮನೆಗೂ ತೆರಳಿ ಕೋವಿಡ್​ ವ್ಯಾಕ್ಸಿನ್​ ತೆಗೆದುಕೊಳ್ಳಿ ಎಂದು ತಿಳಿಸುತ್ತಿದ್ದಾರೆ.

ಲಸಿಕೆ ಕಿಟ್ ಹಿಡಿದು ಬೀದಿ, ಬೀದಿ ಸುತ್ತುತ್ತಿರುವ ವೈದ್ಯಕೀಯ ಸಿಬ್ಬಂದಿ

ಬಡಗಲಪುರ ಗ್ರಾಮದ ವೈದ್ಯಾಧಿಕಾರಿ ಡಾ. ಅಲೀಂ ಪಾಷಾ ಮತ್ತು ಸಿಬ್ಬಂದಿ ಈ ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.