ETV Bharat / state

ಹುಲಿ ಸಂಖ್ಯೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ: ನಾಗರಹೊಳೆಯಲ್ಲಿ ಹುಲಿಗಳ‌ ಸಂಖ್ಯೆ ಏರಲು ಕಾರಣವೇನು ಗೊತ್ತಾ?

author img

By

Published : Aug 2, 2021, 7:55 PM IST

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಹುಲಿಗಳ ಸಂಖ್ಯೆ 135ಕ್ಕೆ ಏರಿಕೆಯಾಗಿದೆ.

tigers population increases in Nagarhole tiger reserve
ನಾಗರಹೊಳೆಯಲ್ಲಿ ಹುಲಿಗಳ‌ ಸಂಖ್ಯೆ ಏರಿಕೆ

ಮೈಸೂರು: ನಾಗರಹೊಳೆ‌ ರಾಷ್ಟ್ರೀಯ ಉದ್ಯಾನದಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ‌‌ ಸಂಖ್ಯೆ ಏರಿಕೆಯಾಗುತ್ತಿದ್ದು, ಹುಲಿ ಗಣತಿಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ.

ನಾಗರಹೊಳೆಯಲ್ಲಿ ಹುಲಿಗಳ‌ ಸಂಖ್ಯೆ ಏರಿಕೆ

2018ರ ಹುಲಿ ಗಣತಿ ವರದಿ ಪ್ರಕಾರ ಮಧ್ಯಪ್ರದೇಶ 526 ಹುಲಿಗಳನ್ನು ಹೊಂದಿದ್ದರೆ, ಕರ್ನಾಟಕ 524 ಹುಲಿಗಳ ಮೂಲಕ ಎರಡನೇ ಸ್ಥಾನಕ್ಕೆ ಜಿಗಿದಿತ್ತು. ಹುಲಿಗಳ‌ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಲು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಏರಿಕೆಯಾಗಬೇಕು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಹುಲಿಗಳ ಸಂಖ್ಯೆ 135ಕ್ಕೆ ಏರಿಕೆಯಾಗಿದೆ. ಸಸ್ಯಹಾರಿ ಹಾಗೂ ಮಾಂಸಹಾರಿಗಳ ಸಮತೋಲನವಾಗುತ್ತಿದೆ.

ಸಫಾರಿಗರ ಲಗ್ಗೆ:

ಲಾಕ್​​ಡೌನ್ ತೆರವುಗೊಳಿಸಿದ್ದರಿಂದ ಸಫಾರಿಗೆ ಬರಲು ಪ್ರವಾಸಿಗರು ಉತ್ಸುಕರಾಗಿದ್ದಾರೆ. ಇದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಆದಾಯವೂ ಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.