ETV Bharat / state

ಆಕ್ಸಿಜನ್ ಕಿಟ್ ಧರಿಸಿಕೊಂಡೇ ಮತಗಟ್ಟೆಗೆ ಬಂದು ಮತ ಹಾಕಿದ ಗ್ರಾ.ಪಂ. ಸದಸ್ಯ!

author img

By

Published : Dec 10, 2021, 4:38 PM IST

Updated : Dec 10, 2021, 5:14 PM IST

ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.4ರಿಂದ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯ ಅನ್ಸರ್ ಅಹ್ಮದ್ 3 ತಿಂಗಳ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರು. ಕೋವಿಡ್ ನಿಂದ ಗುಣಮುಖರಾದರೂ ಅನಾರೋಗ್ಯ ಇವರನ್ನು ಕಾಡುತ್ತಿತ್ತು.

ಆಕ್ಸಿಜನ್ ಕಿಟ್ ಧರಿಸಿ ಮತಗಟ್ಟೆಗೆ ಬಂದು ಮತಚಲಾಯಿಸಿದ ಗ್ರಾ.ಪಂ. ಸದಸ್ಯ
ಆಕ್ಸಿಜನ್ ಕಿಟ್ ಧರಿಸಿ ಮತಗಟ್ಟೆಗೆ ಬಂದು ಮತಚಲಾಯಿಸಿದ ಗ್ರಾ.ಪಂ. ಸದಸ್ಯ

ಮೈಸೂರು : ಆಕ್ಸಿಜನ್ ಕಿಟ್ ಧರಿಸಿ ಮತಗಟ್ಟೆಗೆ ಬಂದ ಗ್ರಾಪಂ ಸದಸ್ಯರೊಬ್ಬರು ಕುಸಿದು ಬಿದ್ದರೂ ಧೃತಿಗೆಡದೇ ತಮ್ಮ ಹಕ್ಕು ಚಲಾಯಿಸಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ಮತಗಟ್ಟೆಯಲ್ಲಿ ನಡೆದಿದೆ.

ಆಕ್ಸಿಜನ್ ಕಿಟ್ ಧರಿಸಿ ಮತ ಹಾಕಿದ ಗ್ರಾ.ಪಂ. ಸದಸ್ಯ

ವಿಧಾನ ಪರಿಷತ್ ಚುನಾವಣೆ ಮತದಾನ ಬಿರುಸಿನಿಂದ ಸಾಗಿದ್ದು, ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದಾರೆ. ಅನಾರೋಗ್ಯದಿಂದ ನರಳುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯ ಅನ್ಸರ್ ಅಹ್ಮದ್ ಆಕ್ಸಿಜನ್ ಕಿಟ್ ಧರಿಸಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ.

ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.4ರಿಂದ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯ ಅನ್ಸರ್ ಅಹ್ಮದ್ 3 ತಿಂಗಳ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರು. ಕೋವಿಡ್​​​ನಿಂದ ಗುಣಮುಖರಾದರೂ ಅನಾರೋಗ್ಯ ಇವರನ್ನು ಕಾಡುತ್ತಿತ್ತು.

ಆಕ್ಸಿಜನ್ ನೆರವಿನಿಂದ ಚೇತರಿಸಿಕೊಳ್ಳುತ್ತಿರುವ ಅನ್ಸರ್ ಅಹ್ಮದ್ ಮತದಾನದಿಂದ ದೂರ ಉಳಿಯದೇ,‌ ಮೈಸೂರಿನಲ್ಲಿರುವ ತಮ್ಮ ಮನೆಯಿಂದ ಸಹಾಯಕರ ಜೊತೆ ಆಕ್ಸಿಜನ್ ಸಮೇತ ಮತಗಟ್ಟೆಗೆ ಆಗಮಿಸಿ, ಮತಗಟ್ಟೆ ಪ್ರವೇಶಿಸುವ ವೇಳೆ ಆಯತಪ್ಪಿದ ಅನ್ಸರ್ ಅಹ್ಮದ್ ಕುಸಿದು ಬಿದ್ದಿದ್ದಾರೆ.

ಹೀಗಿದ್ದರೂ ಧೃತಿಗೆಡದೇ ಮತಗಟ್ಟೆಗೆ ಪ್ರವೇಶಿಸಿ ತಮ್ಮ ಹಕ್ಕು ಚಲಾಯಿಸಿ, ಮತದ ಮಹತ್ವವನ್ನ ಸಾರಿದ್ದಾರೆ. ತಮ್ಮ ಮತದಿಂದ ಯಾವುದೇ ಅಭ್ಯರ್ಥಿ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮತ ಚಲಾಯಿಸಿರುವುದಾಗಿ ಅನ್ಸರ್ ಅಹ್ಮದ್ ಹೇಳಿದ್ದಾರೆ.

ಇದನ್ನೂ ಓದಿ : ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ವರುಣ್ ಸಿಂಗ್​​ಗೆ ತಜ್ಞ ವೈದ್ಯರಿಂದ ಚಿಕಿತ್ಸೆ: ಸಿಎಂ ಬೊಮ್ಮಾಯಿ

Last Updated : Dec 10, 2021, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.