ETV Bharat / state

ರಾಜ್ಯದಲ್ಲೇ ಮೊದಲ ಪ್ರಯೋಗ.. ಮೈಸೂರು ಮೃಗಾಲಯದಲ್ಲಿ ಗಜ ಪಡೆಗೆ ನಿರ್ಮಾಣವಾಯ್ತು ಈಜುಕೊಳ

author img

By

Published : Aug 3, 2021, 7:37 PM IST

Updated : Aug 3, 2021, 7:50 PM IST

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಮೃಗಾಲಯದಲ್ಲಿ ಗಜ ಪಡೆಗೆಂದೇ ಈಜುಕೊಳ ನಿರ್ಮಾಣ ಮಾಡಲಾಗಿದೆ.

swimming pool for elephants in mysore zoo
ಆನೆಗಳಿಗೆ ಈಜುಕೊಳ

ಮೈಸೂರು: ಆನೆಗಳ ಆರೋಗ್ಯದ ದೃಷ್ಟಿಯಿಂದ ಗಜಪಡೆಗಾಗಿ ಈಜುಕೊಳ ನಿರ್ಮಾಣ ಮಾಡುವ ಮೂಲಕ, ಮೈಸೂರು ಮೃಗಾಲಯ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈವರೆಗೆ ಕಾಡಿನಲ್ಲಿ ಕೆರೆ, ನದಿಗಳಲ್ಲಿ ನೀರಾಟದಲ್ಲಿ ತೊಡಗುತ್ತಿದ್ದ ಆನೆಗಳನ್ನು ನೋಡುತ್ತಿದ್ದ ಪ್ರವಾಸಿಗರು ಇನ್ಮುಂದೆ ಮೃಗಾಲಯದಲ್ಲೂ ಅವುಗಳ ತುಂಟಾಟ ವೀಕ್ಷಿಸಬಹುದಾಗಿದೆ.

ಆನೆಗಳಿಗೆ ಈಜುಕೊಳ

ಮೈಸೂರು ಮೃಗಾಲಯದ ವ್ಯಾಪ್ತಿಯ ಕೂರ್ಗಳ್ಳಿ ಚಾಮುಂಡಿ ಪುನರ್ವಸತಿ ಕೇಂದ್ರದಲ್ಲಿ, ವಯಸ್ಸಾದ ಆನೆಗಳಿಗೆ ಸಾಮಾನ್ಯವಾಗಿ ಕಂಡು ಬರುವ ಸಂಧಿವಾತ ನೋವಿನ ನಿವಾರಣೆ ಚಿಕಿತ್ಸೆಗಾಗಿ ಈ ಈಜುಕೊಳ ನಿರ್ಮಾಣ ಮಾಡಲಾಗಿದೆ.

ರಾಜ್ಯದಲ್ಲೇ ಮೊದಲ ಬಾರಿಗೆ ಮೃಗಾಲಯಗಳಲ್ಲಿ ಆನೆಗಳಿಗಾಗಿಯೇ ಈಜುಕೊಳ ನಿರ್ಮಾಣ ಮಾಡಿರುವ ಹೆಗ್ಗಳಿಕೆ ಮೈಸೂರು ಮೃಗಾಲಯಕ್ಕೆ ಸಲ್ಲುತ್ತದೆ‌. ಸದ್ಯ ಪ್ರಾಯೋಗಿಕ ಕಾರ್ಯನಿರ್ವಹಣೆ ಯಶಸ್ವಿಯಾಗುತ್ತಿದೆ.

ಇದನ್ನೂ ಓದಿ:ಕೇರಳದಲ್ಲಿ COVID ಉಲ್ಬಣ: ದ.ಕ ಗಡಿಯಲ್ಲಿ ಮದ್ಯದಂಗಡಿಗಳಿಗೆ ಬೀಗ

Last Updated : Aug 3, 2021, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.