ETV Bharat / state

ಮೈಸೂರು: ಯುವಕನ ಕತ್ತು ಕೊಯ್ದು ದುಷ್ಕರ್ಮಿಗಳು ಪರಾರಿ

author img

By

Published : Jun 12, 2022, 12:28 PM IST

Updated : Jun 12, 2022, 1:12 PM IST

ನಂಜನಗೂಡು ತಾಲೂಕಿನ ಹೆಡಿಯಾಲ ಬಳಿಯ ಈರೇಗೌಡನಹುಂಡಿ ಗ್ರಾಮದಲ್ಲಿ ಯುವಕನ ಕೊಲೆಗೆ ಯತ್ನಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

some were attempt murder a man in Mysore
ಮೈಸೂರು ಕೊಲೆ ಯತ್ನ ಕೇಸ್

ಮೈಸೂರು: ಯುವಕನ ಕತ್ತು ಕೊಯ್ದು ಕೊಲೆಗೆ ಯತ್ನಿಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಬಳಿಯ ಈರೇಗೌಡನಹುಂಡಿ ಗ್ರಾಮದ ಸಮೀಪ ನಡೆದಿದೆ. ಗಾಯಗೊಂಡ ಯುವಕನನ್ನು ಗುಂಡ್ಲುಪೇಟೆ ನಿವಾಸಿ ಎಂದು ಗುರುತಿಸಲಾಗಿದೆ.

ಮೈಸೂರು ಕೊಲೆ ಯತ್ನ ಕೇಸ್

ನಿರ್ಜನ ಪ್ರದೇಶದಲ್ಲಿಇಬ್ಬರು ದುಷ್ಕರ್ಮಿಗಳು ಯುವಕನ ಕತ್ತು ಹಾಗೂ ಹಿಮ್ಮಡಿಗಳನ್ನು ಕೊಯ್ದು ಪರಾರಿ ಆಗಿದ್ದಾರೆ. ತೀವ್ರವಾಗಿ ಗಾಯಗೊಂಡ ಯುವಕ ತೆವಳಿಕೊಂಡು ನಾಗಣಾಪುರ ಮುಖ್ಯರಸ್ತೆಗೆ ಬಂದಿದ್ದಾನೆ. ಜಮೀನಿಗೆ ತೆರಳುತ್ತಿದ್ದ ಸ್ಥಳೀಯರು ಯುವಕನ ನೆರವಿಗೆ ಬಂದು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನೆಲಮಂಗಲ: ಕಾರಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್​; ಮೂವರು ಗಂಭೀರ

ಪಿಎಸ್ಐ ಮಹೇಶ್ ಕುಮಾರ್ ಸ್ಥಳಕ್ಕಾಗಮಿಸಿ ಗಾಯಗೊಂಡು ನರಳುತ್ತಿದ್ದ ಯುವಕನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ. ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Last Updated :Jun 12, 2022, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.