ETV Bharat / state

'ಕನ್ನಡಕ್ಕೆ ಮಾನ್ಯತೆ ಸಿಗಲಿ, ದೇವರಾಜ ಅರಸು ಅವರನ್ನು ನೆನಪಿಸಿಕೊಳ್ಳಲಿ': ಹಿರಿಯ ಸಾಹಿತಿಗಳ ಸಂದರ್ಶನ

author img

By ETV Bharat Karnataka Team

Published : Oct 31, 2023, 10:20 PM IST

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಾಡಿನ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಹಾಗೂ ಕರ್ನಾಟಕ ಅರಸು ಮಹಾಮಂಡಲದ ಅಧ್ಯಕ್ಷರಾದ ಶ್ರೀಧರ್ ರಾಜೇ ಅರಸ್ ಅವರ ಸಂದರ್ಶನ ಇಲ್ಲಿದೆ.

ಸಿ ಪಿ ಕೃಷ್ಣಕುಮಾರ್ ಹಾಗೂ ಕರ್ನಾಟಕ ಅರಸು ಮಹಾಮಂಡಲದ ಅಧ್ಯಕ್ಷರಾದ ಶ್ರೀಧರ್ ರಾಜೇ ಅರಸ್
ಸಿ ಪಿ ಕೃಷ್ಣಕುಮಾರ್ ಹಾಗೂ ಕರ್ನಾಟಕ ಅರಸು ಮಹಾಮಂಡಲದ ಅಧ್ಯಕ್ಷರಾದ ಶ್ರೀಧರ್ ರಾಜೇ ಅರಸ್

ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಸಂದರ್ಶನ

ಮೈಸೂರು: ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷವಾಗಿದೆ. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಆಚರಣೆಯ ಕುರಿತು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಹಾಗೂ ಕರ್ನಾಟಕ ಅರಸು ಮಹಾಮಂಡಲದ ಅಧ್ಯಕ್ಷರಾದ ಶ್ರೀಧರ್ ರಾಜೇ ಅರಸ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಹೇಳಿದ್ದೇನು?: ಕರ್ನಾಟಕ ಎಂಬ ಹೆಸರು ಬಂದ ನಂತರ ಸುವರ್ಣ ಸಂಭ್ರಮ ಆಚರಣೆ ಮಾಡುತ್ತಿದ್ದೇವೆ. ಇದು ಒಳ್ಳೆಯದೇ. ಆದರೆ ಕನ್ನಡ ಭಾಷೆ ಅಪಾಯದಲ್ಲಿದೆ. ಹಿಂದಿ ಮತ್ತು ಇಂಗ್ಲಿಷ್ ಹೇರಿಕೆ ಆಗುತ್ತಿದೆ. ಇದರ ಬಗ್ಗೆ ಕನ್ನಡಿಗರು ಜಾಗೃತರಾಗಬೇಕು. ಮೈಸೂರು ರಾಜ್ಯಕ್ಕೆ ಅಖಂಡ ಕರ್ನಾಟಕ ರಾಜ್ಯ ಎಂದು ಹೆಸರು ಬಂದಿದೆ. ಇದನ್ನು ಕುವೆಂಪು ಸೇರಿದಂತೆ ಹಿರಿಯ ಸಾಹಿತಿಗಳು ಸ್ವಾಗತಿಸಿದ್ದರು. ಅದರ ನೆನಪು ನಮಗೆ ಮಾತ್ರ ಇದೆ.

ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಆಚರಣೆಗೆ ಮಾತ್ರ ಸೀಮಿತವಾಗುತ್ತಿದೆ. ಕನ್ನಡ ಹಾಗೂ ರಾಜ್ಯಕ್ಕೆ ಅಪಾಯ ಎದುರಾಗುತ್ತಿದೆ. ಬೆಳಗಾವಿಯಲ್ಲಿ ಕರ್ನಾಟಕದ ಏಕೀಕರಣಕ್ಕೆ ಸವಾಲುಗಳು ಎದುರಾಗುತ್ತಿವೆ. ಈ ಬಗ್ಗೆ ರಾಜ್ಯ ಸರ್ಕಾರ ಯೋಚಿಸಬೇಕು. ಸುವರ್ಣ ಸಂಭ್ರಮದ ನೆನಪಿನಲ್ಲಿ ಕನ್ನಡ ಭಾಷೆಯ ಹಾಗೂ ಕರ್ನಾಟಕ ನೆಲದ ಉಳಿವಿಗಾಗಿ ಸರ್ಕಾರ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ತಮ್ಮ ಸುದೀರ್ಘ ಸಂದರ್ಶನದಲ್ಲಿ ಕನ್ನಡ ಭಾಷೆ, ಕನ್ನಡ ನೆಲ ಹಾಗೂ ಜಲ ಉಳಿವಿಗಾಗಿ ಸರ್ಕಾರ ಕಠಿಬದ್ದವಾಗಬೇಕು ಎಂದರು.

ಕರ್ನಾಟಕ ಅರಸು ಮಹಾಮಂಡಲದ ಅಧ್ಯಕ್ಷರಾದ ಶ್ರೀಧರ್ ರಾಜೇ ಅರಸ್

ಶ್ರೀಧರ್ ರಾಜೇ ಅರಸ್ ಹೇಳಿದ್ದೇನು?: ಕರ್ನಾಟಕ ಅರಸು ಮಹಾಮಂಡಳಿಯ ಅಧ್ಯಕ್ಷ ಬಿ.ಎಸ್.ಶ್ರೀಧರ್ ರಾಜೇ ಅರಸ್ ಮಾತನಾಡಿ, ಮೈಸೂರು ರಾಜ್ಯ ಅಖಂಡ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡುವ ಸಂದರ್ಭದಲ್ಲಿ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜ ಅರಸು ಅವರಿಗೆ ಮೈಸೂರಿನ ಮೇಲೆ ಪ್ರೀತಿಗಾಗಿ ಹೆಸರು ಬದಲಾವಣೆ ಮಾಡಲು ಇಷ್ಟವಿರಲಿಲ್ಲ. ಆ ಸಂದರ್ಭದಲ್ಲಿ ಸಾಹಿತಿಗಳಾದ ಕುವೆಂಪು, ತಾರಾಸು ಮುಂತಾದವರು ಅಖಂಡ ಕರ್ನಾಟಕ ಎಂದು ಹೆಸರಿಟ್ಟರೆ ಮೈಸೂರಿಗೆ ತನ್ನದೇ ಆದ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಆದ್ದರಿಂದ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಎಂದು ಅರಸು ಅವರನ್ನು ಮನವೊಲಿಸಿದರು. ಆಗ ಕರ್ನಾಟಕ ರಾಜ್ಯ ಉದಯಿಸಿತು. ಆ ಸಂದರ್ಭದಲ್ಲಿ ದೇವರಾಜ ಅರಸು ವಿಧಾನಸಭೆಯಲ್ಲಿ ಮಾಡಿದ ಭಾಷಣ ಮುಖ್ಯವಾಗಿದೆ. ಈಗ ಸುವರ್ಣ ಸಂಭ್ರಮ ಆಚರಣೆ ಮಾಡುತ್ತಿದ್ದೇವೆ. ಇದಕ್ಕೆ ಕಾರಣೀಭೂತರಾದ ದೇವರಾಜ ಅರಸು ಅವರನ್ನು ನೆನಪಿಸಿಕೊಳ್ಳಿ ಎಂದು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಇತರ ಸಚಿವರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಕರ್ನಾಟಕದ ಹೆಸರು ಹೇಗೆ ಬಂತು, ಸೂಚಿಸಿದ್ದು ಯಾರು? ಇದಕ್ಕಿದೆ ಸುದೀರ್ಘ ಇತಿಹಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.