ETV Bharat / state

ಚಾಮುಂಡಿ ಬೆಟ್ಟದಲ್ಲಿ ಮತ್ತೊಂದು ಕಡೆ ಗುಡ್ಡ ಕುಸಿತ.. ಬೆಚ್ಚಿಬಿದ್ದ ಜನ

author img

By

Published : Nov 18, 2021, 4:07 PM IST

ಚಾಮುಂಡಿ ಬೆಟ್ಟದಲ್ಲಿ(Chamundi hills) ನಂದಿ ವಿಗ್ರಹ ಸಂಪರ್ಕ ಮಾಡುವ ರಸ್ತೆಯಲ್ಲಿ ಮತ್ತೊಂದು ಕಡೆ ಗುಡ್ಡ ಕುಸಿತವಾಗಿದೆ(Hill collapsed).

Another Hill collapse on the Chamundi Hills
ಗುಡ್ಡ ಕುಸಿತ

ಮೈಸೂರು: ಈಗಾಗಲೇ ಮೂರು ಕಡೆ ಕುಸಿತ ಉಂಟಾಗಿ ಆತಂಕ ಸೃಷ್ಟಿಸಿದ್ದ ಚಾಮುಂಡಿ ಬೆಟ್ಟದಲ್ಲಿ(Chamundi hills) ಮತ್ತೊಂದು ಕಡೆ ಗುಡ್ಡ ಕುಸಿತ ಉಂಟಾಗಿರುವುದು ನಗರದ ಜನರನ್ನು ಬೆಚ್ಚಿಬೀಳಿಸಿದೆ.

ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

ಭಾರಿ ಮಳೆ ಹಿನ್ನೆಲೆ ರಸ್ತೆ ನವೀಕರಣಗೊಂಡ ಕೆಲವೇ ದಿನಗಳಲ್ಲಿ ಗುಡ್ಡ ಕುಸಿತವಾಗಿದೆ (Hill collapsed). ಹೀಗಾಗಿ ಮೇಲೆ ತಳುಕು ಒಳಗೆ ಮಾತ್ರ ಹುಳುಕು ಎಂಬಂತೆ ರಸ್ತೆ ಕಾಮಗಾರಿ ನಡೆದಿದೆ ಎಂದು ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ನಂದಿ ವಿಗ್ರಹ ಸಂಪರ್ಕ ಮಾಡುವ ರಸ್ತೆಯಲ್ಲಿ ಕುಸಿತವಾಗಿದೆ. ಪದೇ ಪದೆ ಈ ಮಾರ್ಗ ಕುಸಿತವಾಗುತ್ತಿರುವುದರಿಂದ ಭಕ್ತಾದಿಗಳಿಗೆ ಆತಂಕ ಎದುರಾಗಿದೆ. ಗುಡ್ಡ ಕುಸಿತದ ಜೊತೆಗೆ ಮರಗಳು ರಸ್ತೆಗೆ ಉರುಳಿವೆ. ನಂದಿ ಮಾರ್ಗದಲ್ಲಿ ಈಗಾಗಲೇ ಮೂರು ಬಾರಿ ರಸ್ತೆಯಲ್ಲಿ ಕುಸಿತವಾಗಿದೆ. ಅದರ ಜೊತೆ ಅದೇ ಮಾರ್ಗದಲ್ಲಿ ಸಂಪರ್ಕ ಬೆಸೆಯುವ ರಸ್ತೆ ಕುಸಿತವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ದೊಡ್ಡ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆಯೇನೋ ಎಂಬ ಆತಂಕ ಎದುರಾಗಿದೆ.

ಇದನ್ನೂ ಓದಿ:ಬೃಹತ್​ ಕಾಮಗಾರಿಗಳೇ ಚಾಮುಂಡಿ ಬೆಟ್ಟದ ರಸ್ತೆ ಭೂ ಕುಸಿತಕ್ಕೆ ಕಾರಣ: ಎಂ. ಲಕ್ಷ್ಮಣ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.