ETV Bharat / state

ಮಂಡ್ಯದಲ್ಲಿ ಯಾರ ಮೇಲೂ ಮಾರಣಾಂತಿಕ ಹಲ್ಲೆ ಆಗಿಲ್ಲ: ಕುಮಾರಸ್ವಾಮಿ

author img

By

Published : Apr 26, 2020, 4:16 PM IST

ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳು ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಎಂಎಲ್​ಸಿ ಮತ್ತು ಅವರ ಪುತ್ರ ಹಲ್ಲೆಗೆ ಮುಂದಾದ ಘಟನೆ ಹಿಂದೆ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

dwdd
ಮಂಡ್ಯದಲ್ಲಿ ಯಾರ ಮೇಲೂ ಮಾರಣಾಂತಿಕ ಹಲ್ಲೆ ಆಗಿಲ್ಲ: ಹೆಚ್​ ಡಿ ಕುಮಾರಸ್ವಾಮಿ

ಮೈಸೂರು: ಮಂಡ್ಯದಲ್ಲಿ ಯಾರ ಮೇಲೂ ಮಾರಣಾಂತಿಕ ಹಲ್ಲೆ ಆಗಿಲ್ಲ. ಈ ಬಗ್ಗೆ ತನಿಖೆ ನಡೆಸಿ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಯಾರ ಮೇಲೂ ಮಾರಣಾಂತಿಕ ಹಲ್ಲೆ ಆಗಿಲ್ಲ: ಕುಮಾರಸ್ವಾಮಿ

ಬಡವರಿಗೆ ದಿನಸಿ ಕಿಟ್ ವಿತರಿಸಲು ಆಗಮಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ನಿನ್ನೆ ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಇನ್ನು ಕೊರೊನಾ ಟೆಸ್ಟಿಂಗ್ ಮಾಡಬೇಕು ಎಂದು ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. ಅದರಲ್ಲಿ ಜಿಲ್ಲಾಧಿಕಾರಿಗಳು ಪ್ರತಿ ಜಿಲ್ಲೆಯ ಡಿಹೆಚ್​ಒಗಳು, ಆರೋಗ್ಯ ತನಿಖಾ ವೈದ್ಯರು ಎಲ್ಲರನ್ನು ಒಳಗೊಂಡಂತೆ ನೀವು ತಪಾಸಣೆ ಮಾಡುವ ಸ್ಥಳ ಜಿಲ್ಲಾಸ್ಪತ್ರೆ ಎಂದು ಕ್ಲೀಯರ್ ಆಗಿ ಹೇಳಿದೆ. ಆದರೆ ಇವರು ಮಂಡ್ಯದಲ್ಲಿ ದೊಡ್ಡ ಜಿಲ್ಲಾಸ್ಪತ್ರೆ ಇಟ್ಟುಕೊಂಡು ಆಸ್ಪತ್ರೆಗೆ ರೋಗಿಗಳು ಬರುತ್ತಿಲ್ಲ ಎನ್ನುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಬೇಕೆಂದು ಸರ್ಕಾರ ಹೇಳಿದೆ. ಆದರೆ ಅಲ್ಲೆಲ್ಲೋ ಅಂಬೇಡ್ಕರ್ ಭವನದಲ್ಲಿ ತಪಾಸಣೆ ಮಾಡುವ ಅವಶ್ಯಕತೆ ಏನಿತ್ತು ಎಂದರು.

ಈ ಕೊರೊನಾ ಸೋಂಕು ಹರಡುವ ವಿಚಾರದಲ್ಲಿ ಮಾಹಿತಿ ಕೊಡುವ ಪತ್ರಕರ್ತರು, ಆಶಾ ಕಾರ್ಯಕರ್ತೆರು, ವೈದ್ಯಕೀಯ ಸಿಬ್ಬಂದಿಗೆ ಯಾರೂ ಅಗೌರವ ತೋರುವ ರೀತಿ ವರ್ತಿಸಬಾರದು ಎಂದು ಮನವಿ ಮಾಡಿದ ಮಾಜಿ ಸಿಎಂ, ಎಂಎಲ್​ಸಿ ವಿಚಾರದ ಬಗ್ಗೆ ನಾನು ಮಾಹಿತಿ ತೆಗೆದುಕೊಂಡಿದ್ದೇನೆ ಎಂದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.