ETV Bharat / state

"ಮದುವೆಯಾಗಿ 2 ಮಕ್ಕಳಿರುವ ವ್ಯಕ್ತಿಯನ್ನು ಕಟ್ಟಿಕೊಂಡಿದ್ದೇ ತಪ್ಪು"- ಡೆತ್​ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ

author img

By

Published : Oct 5, 2021, 5:26 PM IST

ಹನ್ನೊಂದು ತಿಂಗಳ‌ ಹಿಂದೆಯಷ್ಟೇ ಮೈಸೂರಿನ ಚಾಮುಂಡಿ ಬೆಟ್ಟದ ನಿವಾಸಿ ಸೋಮು ಎಂಬಾತನನ್ನು ವಿಜಯಲಕ್ಷ್ಮಿ ಮದುವೆಯಾಗಿದ್ದರು. ಆದರೆ ದಾಂಪತ್ಯ ಜೀವನಕ್ಕೆ ವರ್ಷ ತುಂಬುವ ಮುನ್ನವೇ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ತಾವರೆ ಕಟ್ಟೆ ಗ್ರಾಮದಲ್ಲಿ ನಡೆದಿದೆ.

Newly married suicide in Mysore
ಮೈಸೂರಿನಲ್ಲಿ ಡೆತ್​ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ

ಮೈಸೂರು: ಮದುವೆಯಾಗಿ 2ಮಕ್ಕಳಿರುವ ವ್ಯಕ್ತಿಯನ್ನು ಮದುವೆಯಾಗಿದ್ದ ಮಹಿಳೆ, ದಾಂಪತ್ಯ ಜೀವನಕ್ಕೆ ವರ್ಷ ತುಂಬುವ ಮುನ್ನವೇ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ತಾವರೆ ಕಟ್ಟೆ ಗ್ರಾಮದಲ್ಲಿ ನಡೆದಿದೆ.

ವಿಜಯಲಕ್ಷ್ಮಿ (25) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಎಂದು ತಿಳಿದು ಬಂದಿದೆ. "ನನ್ನ ಸಾವಿಗೆ ನನ್ನ ಪತಿಯ ಮೊದಲನೇ ಪತ್ನಿ ಹಾಗೂ ಆಕೆಯ ತಂಗಿಯೇ ಕಾರಣ" ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹನ್ನೊಂದು ತಿಂಗಳ‌ ಹಿಂದಷ್ಟೇ ಮೈಸೂರಿನ ಚಾಮುಂಡಿ ಬೆಟ್ಟದ ನಿವಾಸಿ ಸೋಮು ಎಂಬಾತನನ್ನು ವಿಜಯಲಕ್ಷ್ಮಿ ಮದುವೆಯಾಗಿದ್ದರು. ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿರುವ ಸೋಮುವನ್ನು ನಾನು ಮದುವೆಯಾಗಿದ್ದು ದೊಡ್ಡ ತಪ್ಪು ಎಂದು ಡೆತ್​ನೋಟ್​ನಲ್ಲಿ ಆರೋಪಿಸಿದ್ದಾರೆ.

ಓದಿ: ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್: ಬೆಂಗಳೂರಿನ ಖತರ್ನಾಕ್​ ದಂಪತಿ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.