ETV Bharat / state

ಪತ್ನಿ ಮೇಲೆ ಕಣ್ಹಾಕಿದ್ದನೆಂದು ಸ್ನೇಹಿತನನ್ನೇ ಮುಗಿಸಿದ.. ಅಡ್ಡ ಬಂದ ಇನ್ನೊಬ್ಬ ಗೆಳೆಯನೂ ಹತನಾದ..

author img

By

Published : Dec 12, 2021, 10:02 PM IST

ಶನಿವಾರ ರಾತ್ರಿ ಎಲ್ಲರೂ ಸೇರಿ ಮದ್ಯ ಸೇವನೆ ಮಾಡುತ್ತಿದ್ದಾಗ, ಈ ವೇಳೆ ಮಹೇಶ್, ಕೃಷ್ಣನ ಜೊತೆ ಜಗಳಕ್ಕಿಳಿದಿದ್ದ. ಮೊದಲೇ ಹಳೆ ದ್ವೇಷದಿಂದ ಕೆಂಡ ಕಾರುತ್ತಿದ್ದ ಮಹೇಶ್, ಕೃಷ್ಣನ ಮೇಲೆ ಕಲ್ಲು, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಈ ನಡುವೆ ತಡೆಯಲು ಬಂದ ರವಿಗೂ ಹಾರೆಯಿಂದ ಚುಚ್ಚಿ ಕೊಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ..

ಸ್ನೇಹಿತರನ್ನ ಕೊಲೆ ಮಾಡಿದ್ದ ಆರೋಪಿಗಳು
ಸ್ನೇಹಿತರನ್ನ ಕೊಲೆ ಮಾಡಿದ್ದ ಆರೋಪಿಗಳು

ಮೈಸೂರು : ಹಳೇ ದ್ವೇಷ ಇಟ್ಕೊಂಡು ಕುಡಿದ ಮತ್ತಿನಲ್ಲಿದ್ದಾಗ ಇಬ್ಬರು ಸ್ನೇಹಿತರನ್ನೇ ಕಲ್ಲು, ದೊಣ್ಣೆ ಹಾಗೂ ಹಾರೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮೈಸೂರಿನ ಬೋಗಾದಿ-ಗದ್ದಿಗೆ ಮುಖ್ಯ ರಸ್ತೆಯ ಅಮೃತಾನಂದಮಯಿ ಮಠದ ಬಳಿ ನಡೆದಿದೆ.

ಹೆಚ್‌ ಡಿ ಕೋಟೆ ತಾಲೂಕಿನ ಕೊತ್ತೆಗಾಲದ ಗ್ರಾಮದ ರವಿ ಮತ್ತು ಕೃಷ್ಣ ಎಂಬುವರು ಕೊಲೆಯಾದ ದುರ್ದೈವಿಗಳು. ಅದೇ ಊರಿನ ಮೃತರ ಸ್ನೇಹಿತ ಮಹೇಶ್‌ ಎಂಬಾತ ಕೊಲೆ ಆರೋಪಿಯಾಗಿದ್ದಾನೆ. ನಿನ್ನೆ (ಶನಿವಾರ) ರಾತ್ರಿ 9ರ ವೇಳೆಗೆ ಮೈಸೂರಿನ ಬೋಗಾದಿ-ಗದ್ದಿಗೆ ಮುಖ್ಯ ರಸ್ತೆಯ ಅಮೃತಾನಂದಮಯಿ ಮಠದ ಬಳಿ ಮೂವರು ಸ್ನೇಹಿತರಲ್ಲದೇ ಹಲವರು ಮದ್ಯ ಸೇವನೆ ಮಾಡುತ್ತಿದ್ದರು.

ಈ ವೇಳೆ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ರವಿ ಹಾಗೂ ಕೃಷ್ಣನ ಮೇಲೆ ಆರೋಪಿ ಮಹೇಶ್ ಕಲ್ಲು, ದೊಣ್ಣೆ, ಹಾರೆಯಿಂದ ಹೊಡೆದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಒಂದೇ ಊರಿನವರಾದ ಈ ಯುವಕರು ಗಾರೆ ಕೆಲಸಕ್ಕೆಂದು ಮೈಸೂರಿಗೆ ಬಂದಿದ್ದರು. ಜತೆಗೆ ಒಟ್ಟೊಟ್ಟಿಗೆ ವಾಸಿಸುತ್ತಿದ್ದರು.

ಕೊಲೆಯಾದ ಕೃಷ್ಣ ಮತ್ತು ರವಿ
ಕೊಲೆಯಾದ ಕೃಷ್ಣ ಮತ್ತು ರವಿ

ಕೊಲೆ ಆರೋಪಿ ಮಹೇಶ್​ನಿಗೆ ಮದುವೆಯಾಗಿ ಮಗು ಇತ್ತು. ಈ ಮಹೇಶನ ಹೆಂಡತಿಯನ್ನ ಕೊಲೆಯಾದ ಕೃಷ್ಣ ಆಗಾಗ ಚುಡಾಯಿಸುತ್ತಿದ್ದನಂತೆ. ಈ ವಿಚಾರ ತಿಳಿದಿದ್ದ ಮಹೇಶ್​​, ಕೃಷ್ಣನ ಮೇಲೆ ದ್ವೇಷ ಇಟ್ಟುಕೊಂಡಿದ್ದ. ಇದಷ್ಟೇ ಅಲ್ಲ, ಊರಲ್ಲಿ ಹಬ್ಬದಲ್ಲಿ ಮಟನ್ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತಂತೆ. ಈ ಎರಡನ್ನೂ ದ್ವೇಷ ಇಟ್ಕೊಂಡಿದ್ದ ಮಹೇಶ್ ತನ್ನ ಸ್ನೇಹಿತನ ಮೇಲೆ ಕೆಂಡಕಾರುತ್ತಿದ್ದ.

ಇದನ್ನೂ ಓದಿ : ಪತ್ನಿಯನ್ನ ಚುಡಾಯಿಸಿದ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ: ಮೈಸೂರಲ್ಲಿ ಡಬಲ್​ ಮರ್ಡರ್​

ಶನಿವಾರ ರಾತ್ರಿ ಎಲ್ಲರೂ ಸೇರಿ ಮದ್ಯ ಸೇವನೆ ಮಾಡುತ್ತಿದ್ದಾಗ, ಈ ವೇಳೆ ಮಹೇಶ್, ಕೃಷ್ಣನ ಜೊತೆ ಜಗಳಕ್ಕಿಳಿದಿದ್ದ. ಮೊದಲೇ ಹಳೆ ದ್ವೇಷದಿಂದ ಕೆಂಡ ಕಾರುತ್ತಿದ್ದ ಮಹೇಶ್, ಕೃಷ್ಣನ ಮೇಲೆ ಕಲ್ಲು, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಈ ನಡುವೆ ತಡೆಯಲು ಬಂದ ರವಿಗೂ ಹಾರೆಯಿಂದ ಚುಚ್ಚಿ ಕೊಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಸರಸ್ವತಿಪುರಂ ಠಾಣಾ ಪೊಲೀಸರು, ಮೃತದೇಹಗಳನ್ನ ಶವಾಗಾರಕ್ಕೆ ಸಾಗಿಸಿದ್ದಾರೆ. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮಹೇಶ ಹಾಗೂ ಆತನಿಗೆ ಕೊಲೆ ಮಾಡಲು ಸಹಕಾರ ನೀಡಿದ ಆರೋಪಿಯನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.