ETV Bharat / state

ಜೋಡಿ ಕೊಲೆ ಪ್ರಕರಣ: ಪೊಲೀಸರಿಗೆ ಶರಣಾದ ಪ್ರಮುಖ ಆರೋಪಿ

author img

By

Published : Feb 10, 2021, 12:12 PM IST

ಕೆಲ ದಿನಗಳ ಹಿಂದೆ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಜೋಡಿ ಕೊಲೆ ನಡೆದಿತ್ತು. ಇದರಿಂದ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದರು. ಇದೀಗ ಕೊಲೆಯ ಪ್ರಮುಖ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ಪೊಲೀಸರಿಗೆ ಶರಣಾದ ಪ್ರಮುಖ ಆರೋಪಿ
Accused surrendered to police

ಮೈಸೂರು: ನಿವೇಶನ ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ಜೋಡಿ ಕೊಲೆ ಮಾಡಿದ್ದ ಪ್ರಮುಖ ಆರೋಪಿ ಸೋಮೇಶ್ ಅಲಿಯಾಸ್ ಮೀಸೆ ಸ್ವಾಮಿ‌ ನಿನ್ನೆ ರಾತ್ರಿ ಪೊಲೀಸರಿಗೆ ಶರಣಾಗಿದ್ದಾನೆ.

ದಿಲೀಪ್ ಹಾಗೂ ಮಧು ಪೊಲೀಸರಿಗೆ ಶರಣಾದ ಆರೋಪಿಗಳು. ಕೊಲೆ ಮಾಡಿದ್ದ ಮಾರನೇ ದಿನವೆ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಮತ್ತೊಬ್ಬ ಆರೋಪಿ ರಘು ತಲೆಮರಿಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಓದಿ: ಬಾಡೂಟದ ಬಳಿಕ ಬರ್ಬರ ಹತ್ಯೆ : ಜೋಡಿ ಕೊಲೆ ಪ್ರಕರಣದಿಂದ ಬೆಚ್ಚಿಬಿದ್ದ ಮೈಸೂರು!

ಘಟನೆ ಹಿನ್ನೆಲೆ:

ಭಾನುವಾರ ತಡರಾತ್ರಿ ಮೈಸೂರಿನ ಬಂಡಿಪಾಳ್ಯದ ಬಳಿ ಇರುವ ಎಲೆತೋಟದ ರಸ್ತೆಯಲ್ಲಿ ಕಿರಣ್ ಹಾಗೂ ದೀಪಕ್ ಕಿಶನ್​​ ಎಂಬುವವರನ್ನು ಕೊಲೆ ಮಾಡಿದ್ದರು. ಅಷ್ಟೇ ಅಲ್ಲದೆ ಮಧುಕುಮಾರ್ ಎಂಬುವವನ ಮೇಲೆ ಹಲ್ಲೆ ಮಾಡಿ ಸೋಮೇಶ್(ಮೀಸೆ ಸ್ವಾಮಿ), ದಿಲೀಪ್, ಮಧು,‌ ರಘು ಪರಾರಿಯಾಗಿದ್ದರು. ಘಟನೆಯಿಂದ ಮೂವರು ಪೊಲೀಸರಿಗೆ ಶರಣಾಗಿದ್ದರೆ, ಮತ್ತೊಬ್ಬನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಓದಿ: ಡಬಲ್​ ಮರ್ಡರ್​ ಸ್ಟೋರಿ: ಮಣ್ಣಿಗಾಗಿ ಕಿತ್ತಾಡಿ ಇಬ್ಬರು ಸ್ಮಶಾನಕ್ಕೆ, ಮತ್ತಿಬ್ಬರು ಜೈಲಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.