ETV Bharat / state

ಸೇತುವೆಗಳಿಗೆ ತಡೆಗೋಡೆ ನಿರ್ಮಿಸಿ, ಪ್ರವಾಹ ತಗ್ಗಿಸಿ: ಶಾಸಕ ಹರ್ಷವರ್ಧನ್

author img

By

Published : Aug 14, 2020, 1:40 PM IST

ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ, ನುಗು ಹಾಗೂ ತಾರಕ ಜಲಾಶಯಗಳು ತುಂಬಿ ಹರಿದರೆ, ಜಲಾಶಯಗಳು ಹಾಗೂ ನಾಲೆಗಳ ಸಮೀಪದಲ್ಲಿ ವಾಸಿಸುವ ಜನರಿಗೆ ಭಾರೀ ಅಪಾಯ ಎದುರಾಗುತ್ತದೆ ಎಂದು ಶಾಸಕ ಹರ್ಷವರ್ಧನ್ ಆತಂಕ ವ್ಯಕ್ತಪಡಿಸಿದರು.

Build a barrier to bridges
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆ

ಮೈಸೂರು: ಜಲಾಶಯಗಳು ತುಂಬಿ ಹರಿದರೆ ಅವುಗಳ ಸಮೀಪದಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ಸೇತುವೆಗಳಿಗೆ ತಡೆಗೋಡೆ ನಿರ್ಮಿಸಿ ಉಂಟಾಗುವ ಪ್ರವಾಹವನ್ನು ತಡೆಯಬೇಕು ಎಂದು ಶಾಸಕ ಹರ್ಷವರ್ಧನ್ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಬಳಿ ಮನವಿ ಮಾಡಿದರು.

ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹರ್ಷವರ್ಧನ್ ಮಾತನಾಡಿ, ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ, ನುಗು ಹಾಗೂ ತಾರಕ ಜಲಾಶಯಗಳು ತುಂಬಿ ಹರಿದರೆ, ಜಲಾಶಯಗಳು ಹಾಗೂ ನಾಲೆಗಳ ಸಮೀಪದಲ್ಲಿ ವಾಸಿಸುವ ಜನರಿಗೆ ಭಾರೀ ಅಪಾಯ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ಹರ್ಷವರ್ಧನ್

ಮೂರು ಜಲಾಶಯಗಳು ತುಂಬಿ ಹರಿದಾಗ ನಂಜನಗೂಡಿಗೆ ಹೆಚ್ಚಿನ ಅಪಾಯ ಹಾಗೂ ಸೇತುವೆಗಳು ಮುಳುಗಿ ಹೋಗುವುದರಿಂದ ಅಲ್ಲಿ ವಾಸಿಸುವ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಹೀಗಾಗಿ, ಸೇತುವೆ ಬಳಿ ತಡೆಗೋಡೆ ನಿರ್ಮಿಸಿ ಪ್ರವಾಹದ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದಂತಾಗುತ್ತದೆ. ಜನರಿಗೆ ತೊಂದರೆಯೂ ಕಡಿಮೆಯಾಗಲಿದೆ. ಅದರ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿ ಎಂದು ವಿನಂತಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.