ETV Bharat / state

ಸಾಂಸ್ಕೃತಿಕ ನಗರಿಯಲ್ಲಿ 3 ದಿನಗಳ ಕಿಸಾನ್ ಸ್ವರಾಜ್ ಸಮ್ಮೇಳನ

author img

By

Published : Nov 11, 2022, 6:10 PM IST

Updated : Nov 11, 2022, 7:07 PM IST

3 ದಿನಗಳ ಕಾಲ ನಡೆಯಲಿರುವ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಸಾವಯವ ಕೃಷಿ, ನೈಸರ್ಗಿಕ ಕೃಷಿ ಹಾಗೂ ಸರಳ ಕೃಷಿ ವಿಧಾನಗಳ ಬಗ್ಗೆ ಚರ್ಚೆ, ಗೋಷ್ಠಿ ಮತ್ತು ಸಾಕ್ಷ್ಯ ಚಿತ್ರಗಳ ಪ್ರದರ್ಶನ ಗಮನ ಸೆಳೆಯಿತು.

kishan swaraj conference
ಕಿಸಾನ್ ಸ್ವರಾಜ್ ಸಮ್ಮೇಳನ

ಮೈಸೂರು : 3 ದಿನಗಳ ಕಾಲ ನಡೆಯಲಿರುವ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಸಾವಯವ ಕೃಷಿ, ನೈಸರ್ಗಿಕ ಕೃಷಿ ಹಾಗೂ ಸರಳ ಕೃಷಿ ವಿಧಾನಗಳ ಬಗ್ಗೆ ಚರ್ಚೆ, ಗೋಷ್ಠಿ ಮತ್ತು ಸಾಕ್ಷ್ಯ ಚಿತ್ರಗಳ ಪ್ರದರ್ಶನ ಗಮನ ಸೆಳೆಯಿತು.

ಕಿಸಾನ್ ಸ್ವರಾಜ್ ಸಮ್ಮೇಳನ

ಕಾರ್ಯಕ್ರಮದ ಮೊದಲ ದಿನವಾದ ಇಂದು ವೇದಿಕೆಯಲ್ಲಿ ಕೃಷಿ ದಿಗ್ಗಜರು ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಬಗ್ಗೆ ಸರಳ ವಿಧಾನದಲ್ಲಿ ಮಾಹಿತಿ ನೀಡಿದರು. ಮೇಳದಲ್ಲಿ 19 ರಾಜ್ಯದ 65 ಮಳಿಗೆಗಳಿದ್ದವು. ಅದರಲ್ಲಿ ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದ ಗೆಡ್ಡೆ, ಗೆಣಸು ಮೇಳ, ಕೇರಳದ 100 ವಿಧದ ಬಾಳೆ ಹಣ್ಣಿನ ಪ್ರದರ್ಶನ, 9 ರಾಜ್ಯದ ವಿವಿಧ ಬಗೆಯ ಸಾವಯವ ಅಡುಗೆಗಳು ಗಮನ ಸೆಳೆದಿದ್ದವು. ಈ ಸಮ್ಮೇಳನದಲ್ಲಿ 2200 ಜನ ಭಾಗಿಯಾಗಿದ್ದರು.

ಕೃಷಿ ಮೇಳದ ಉದ್ದೇಶ, ಅನುಕೂಲ, ಹಿನ್ನೆಲೆ, ಬೆಳವಣಿಗೆಗಳ ಬಗ್ಗೆ ಕಪಿಲ್ ಶಾ ವಿವರಿಸಿದರು. 70-80 ರ ದಶಕದ ಕೃಷಿ, ಇಂದಿನ ಕೃಷಿ, ಅಲ್ಲದೇ ಅನ್ನದಾನದ ಮಹತ್ವ, ಸಾವಯವ ಕೃಷಿಯ ಮನ್ನಣೆ, ಅವುಗಳ ಉಪಯೋಗದ ಬಗ್ಗೆ ಕೃಷಿ ತಜ್ಞರಾದ ವಾಸವಿ ಮತ್ತು ಕೇರಳ ಕೃಷಿ ಸಚಿವರಾದ ಪಿ ಪ್ರಸಾದ್ ಮಾತನಾಡಿದರು.

ಇದನ್ನೂ ಓದಿ: ಪ್ರತಿಯೊಬ್ಬ ನಾಗರೀಕನು ರೈತನಾಗಬೇಕು: ಯದುವೀರ್ ಒಡೆಯರ್

Last Updated : Nov 11, 2022, 7:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.