ETV Bharat / state

ಎಣ್ಣೆ ಪಾರ್ಟಿ ಮಾಡುವಾಗ ಬಾಯ್ಬಿಟ್ಟ ಪ್ರೀತಿ ವಿಷ್ಯ... ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ

author img

By

Published : May 5, 2020, 9:18 AM IST

ಎಣ್ಣೆ ಪಾರ್ಟಿ ಮಾಡುವಾಗ ಪ್ರೀತಿ ವಿಚಾರ ಬಂದಿದೆ. ಇದರಿಂದ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Killed young man By his friend after drunk in mysore
ಗಲಾಟೆಯಲ್ಲಿ ಸ್ನೇಹಿತನ ಕೊಲೆ

ಮೈಸೂರು: ಕೊರೊನಾಗಿಂತ ಈಗ ಹೆಚ್ಚು ಎಣ್ಣೆಯದೇ ಜಾಸ್ತಿ ಸುದ್ದಿಯಾಗುತ್ತಿದೆ. ನಿನ್ನೆಯಷ್ಟೇ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದ್ದು,ಈ ಹಿನ್ನೆಲೆ ಎಣ್ಣೆ ಪಾರ್ಟಿ ಮಾಡಿದ ಯುವಕರ ನಡುವೆ ಗಲಾಟೆ ನಡೆದು ಓರ್ವನನ್ನು ಕೊಲೆ ಮಾಡಲಾಗಿದೆ.

ಎಣ್ಣೆ ಪಾರ್ಟಿ ಮಾಡುವಾಗ ಪ್ರೀತಿ ವಿಚಾರ ಬಂದಿದೆ. ಇದರಿಂದ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ . ಈ ಘಟನೆ ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.

ಸತೀಶ್ (22) ಕೊಲೆಯಾದ ಯುವಕ. ಈತ ತನ್ನ ಸ್ನೇಹಿತರಾದ ಮಧು ಮತ್ತು ಕಿರಣ್ ಜೊತೆ ಎಣ್ಣೆ ಪಾರ್ಟಿ ಮಾಡುವಾಗ ಈ ದುರಂತ ಸಂಭವಿಸಿದೆ. ಇನ್ನು ಹಲ್ಲೆಗೊಳಗಾದ ಸತೀಶ್​​ನನ್ನು ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಘಟನೆ ಸಂಬಂಧ ಉದಯಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.