ETV Bharat / state

ರಾಜಕೀಯ ಪ್ರಹಸನಕ್ಕೆ ಬೇಸರ... ಜನಪ್ರತಿನಿಧಿಗಳ ವಿರುದ್ಧ ಪ್ರಭುಗಳ ಆಕ್ರೋಶ​

author img

By

Published : Jul 11, 2019, 12:32 PM IST

Updated : Jul 11, 2019, 12:49 PM IST

ಕಳೆದ ವಾರದಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈ ಡ್ರಾಮಾಗಳನ್ನು ಕಂಡು ಜನರು ಬೇಸತ್ತಿದ್ದಾರೆ. ರಾಜ್ಯದ ಇದೆಲ್ಲವನ್ನು ವೀಕ್ಷಿಸುತ್ತಿದ್ದು, ಜನಪ್ರತಿನಿಧಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು 'ಈಟಿವಿ ಭಾರತ್' ನೊಂದಿಗೆ ತಮ್ಮ ಅಭಿಪ್ರಾಯ ಈ ರೀತಿ ಹಂಚಿಕೊಂಡಿದ್ದಾರೆ.

ಸಾರ್ವಜನಿಕರು

ಮೈಸೂರು: ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದ ನಾಯಕರು ಹಾಗೂ ಬಿಜೆಪಿ ಮುಖಂಡರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳು ನಮ್ಮ ರಾಜ್ಯ ಆಳುತ್ತಿದ್ದಾರಾ ಅಥವಾ ಗೂಂಡಾ ರಾಜ್ಯ ನಿರ್ಮಾಣ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಪ್ರಜಾಪ್ರಭುತ್ವದ ಪ್ರಭುಗಳಿಂದ ಕೇಳಿಬರುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಆಡಳಿತ ನಡೆಸುತ್ತಿದ್ದಾರೆ‌‌. ಅವರದ್ದೇ ಸರ್ಕಾರದ ವಿರುದ್ಧ ತಿರುಗಿ ಬೀಳುವ ಸಚಿವರು, ಶಾಸಕರು. ಮತ್ತೊಂದೆಡೆ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ಪ್ರಯತ್ನದಿಂದ ರಾಜ್ಯದ ಜನರೇ ಸುಸ್ತಾಗಿದ್ದಾರೆ.

ಪ್ರಸ್ತುತ ರಾಜ್ಯ ರಾಜಕೀಯದ ಕುರಿತು ಸಾರ್ವಜನಿಕರ ಪ್ರತಿಕ್ರಿಯೆ

ಸರಿಯಾಗಿ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದ್ರೆ ಉಡಾಫೆ ಉತ್ತರ. ಜನಪ್ರತಿನಿಧಿಗಳನ್ನು ಕೇಳಿದ್ರೆ ಸರ್ಕಾರ ಇದ್ಯೋ ಇಲ್ವೋ ಅನ್ನುವುದು ಅವರಿಗೆ ಅನುಮಾನವಂತೆ. ಇನ್ನು ಚಿಕ್ಕಬಳ್ಳಾಪುರ ಶಾಸಕ ಡಾ‌. ಕೆ.ಸುಧಾಕರ್ ಬುಧವಾರ ರಾಜೀನಾಮೆ ನೀಡಲು ವಿಧಾನಸೌಧಕ್ಕೆ ಹೋದಾಗ ಅಲ್ಲಿ ನಡೆದ ಪ್ರಹಸನ ಹಾಗೂ ಬಿಜೆಪಿ ಶಾಸಕ ರೇಣುಕಾಚಾರ್ಯ ಮತ್ತು ಸಚಿವ​ ಯು.ಟಿ. ಖಾದರ್ ಮಧ್ಯೆದ ಕಿತ್ತಾಟ ಮತ್ತು ಅತೃಪ್ತ ಶಾಸಕರ ರೆಸಾಟ್೯ ರಾಜಕಾರಣ ಇದೆಲ್ಲವನ್ನು ಗಮನಿಸುತ್ತಿರುವ ಜನರ ಆಕ್ರೋಶದ ಕಟ್ಟೆಯೊಡೆದಿದೆ. ಇನ್ನಾದರು ನಮ್ಮ ಜನಪ್ರತಿನಿಧಿಗಳು ಬುದ್ಧಿ ಕಲಿತು, ರಾಜ್ಯದ ಗೌರವ ಕಾಪಾಡಲಿ ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.

Intro:ವಾಕ್ಸ್ ಪಾಪ್


Body:ವಾಕ್ಸ್ ಪಾಪ್


Conclusion:ರಾಜ್ಯ ರಾಜಕೀಯಕ್ಕೆ ಸಾರ್ವಜನಿಕರಿಂದ ಛೀ‌..ಥೂ..ಇವರೇನಾ ಜನಪ್ರತಿನಿಧಿಗಳು
ಮೈಸೂರು: ವರ್ಷದ ಹಿಂದೆ ಅಧಿಕಾರಕ್ಕೆ ಬಂದ ರಾಜ್ಯ ಸಮ್ಮಿಶ್ರ ಸರ್ಕಾರದ ನಾಯಕರ ಹಾಗೂ ಬಿಜೆಪಿ ನಾಯಕರ ನಡೆಗೆ ಸಾರ್ವಜನಿಕರು ಛೀ..ಥೂ...ಇವರೇನಾ ಜನಪ್ರತಿನಿಧಿಗಳು.ನಮ್ಮ ರಾಜ್ಯ ಆಳುತ್ತಿದ್ದರಾ ಅಥವಾ ಗೂಂಡಾರಾಜ್ಯ ನಿರ್ಮಾಣ ಮಾಡುತ್ತಿದ್ದಾರಾ ಎಂಬ ಅಸಾಮಾಧಾನ ರಾಜ್ಯದಾದ್ಯಂತ ಭುಗಿಲೆದ್ದಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಆಡಳಿತ ನಡೆಸುತ್ತಿದ್ದಾರೆ‌‌.ಅವರದೇ ಸರ್ಕಾರದ ವಿರುದ್ಧ ತಿರುಗಿ ಬೀಳುವ ಸಚಿವರು ,ಶಾಸಕರು.ಮತ್ತೊಂದೆಡೆ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ನೇತೃತ್ವದ ಟೀಂ‌ ಮಾಡುತ್ತಿರುವ ಪ್ರಯತ್ನದಿಂದ ಸರ್ಕಾರವಲ್ಲ ರಾಜ್ಯದ ಜನರೇ ಸುಸ್ತಾಗಿದ್ದಾರೆ.
ಯಾಕೆಂದರೆ ಸರಿಯಾಗಿ ಅಭಿವೃದ್ಧಿ ಕೆಲಸ ವಾಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ.ಜನಪ್ರತಿನಿಧಿಗಳನ್ನು ಕೇಳಿದರೆ ಸರ್ಕಾರ ಇದ್ಯೋ ಇಲ್ವೋ ಅನ್ನುವುದು ಅವರಿಗೆ ಅನುಮಾನವಂತೆ.
ಚಿಕ್ಕಬಳ್ಳಾಪುರ ಶಾಸಕ ಡಾ‌.ಕೆ.ಸುಧಾಕರ್ ಬುಧವಾರ ರಾಜೀನಾಮೆ ವಿಧಾನಸೌಧಕ್ಕೆ ಹೋದಾಗ ಆದ ಘಟನೆ ಹಾಗೂ ರೇಣುಕಚಾರ್ಯ ಹಾಗೂ ಯು.ಟಿ.ಖಾದರ್ ನಡುವೆ ಕಿತ್ತಾಟ ಮತ್ತು ಅತೃಪ್ತ ಶಾಸಕರ ರೆಸಾಟ್೯ ರಾಜಕಾರಣಕ್ಕೆ ಜನರ ಆಕ್ರೋಶ ಕಟ್ಟೆ ಹೊಡೆದಿದೆ.
ಈ ಸಂಬಂಧ 'ಈಟಿವಿ ಭಾರತ್' ನೊಂದಿಗೆ ಮಾತನಾಡಿದ ಬಂಗಾರು(ಆಟೋ ಡ್ರೈವರ್), ಶಿವಾನಂದ್( ಸ್ವೀಟ್ ಮುಂದೆ ಕುಳಿತಿರುವವರು), ನಾಲಾಬೀದಿ ರವಿ( ಹಸಿರು ಬಟ್ಟೆ), ಗುರು( ವಯಸ್ಸಾದವರು) ರಾಜಕೀಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
Last Updated : Jul 11, 2019, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.