ETV Bharat / state

ಸಂಶಯಪಟ್ಟ ಪತ್ನಿ ಮೇಲೆ ಮಚ್ಚು ಬೀಸಿದ ಪತಿರಾಯ

author img

By

Published : Oct 18, 2021, 5:44 PM IST

ಹೆಂಡತಿ ಮೇಲೆ ಸಂಶಯ ಪಟ್ಟು ಪಾಪಿ ಪತಿ, ಮಚ್ಚಿನಿಂದ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಮೈಸೂರಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಸ್ಥಿತಿ ಗಂಭೀರವಾಗಿ ಗಾಯಗೊಂಡಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Husband assaulted his wife
ಪತ್ನಿ ಮೇಲೆ ಹಲ್ಲೆ ನಡೆಸಿದ ಪತಿ

ಮೈಸೂರು: ಸಂಶಯ ಪಟ್ಟು ಪತ್ನಿ ಮೇಲೆ ಪತಿಯೇ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ‌ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ. ಕೆ.ಜಿ.ಕೊಪ್ಪಲು ನಿವಾಸಿ ನಾಗರತ್ನ ಹಲ್ಲೆಗೊಳಗಾದ ಮಹಿಳೆ.

15 ವರ್ಷಗಳ ಹಿಂದೆ ಚಾಮರಾಜನಗರದ ಸರಗೂರು ಮೊಳೆ ಗ್ರಾಮದ ಬಂಗಾರನಾಯಕನಿಗೆ ನಾಗರತ್ನರನ್ನು ಮದುವೆ ಮಾಡಿಕೊಡಲಾಗಿತ್ತು. ಇಬ್ಬರು ಮೈಸೂರಿನಲ್ಲಿಯೇ ವಾಸವಾಗಿದ್ದರು. ಮಹಿಳೆ ಪತಿ ಬಾಳೆಹಣ್ಣಿನ ವ್ಯಾಪಾರಿಯಾಗಿದ್ದು, ನಾಗರತ್ನ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.

ಪತ್ನಿ ನಡವಳಿಕೆ ಮೇಲೆ ಸಂಶಯ:

ಕಳೆದ ಕೆಲ ದಿನಗಳಿಂದ ಪತ್ನಿ ನಡವಳಿಕೆ ವಿಚಾರದಲ್ಲಿ ಪತಿ ಬಂಗಾರ ನಾಯಕ ಆಗಾಗ ಗಲಾಟೆ ಮಾಡುತ್ತಿದ್ದನಂತೆ. ಇದರಿಂದ ಬೇಸತ್ತ ನಾಗರತ್ನ ಕಳೆದೊಂದು ವರ್ಷದಿಂದ ತವರಿಗೆ ತೆರಳಿದ್ದು, ಅಲ್ಲಿಂದಲೇ ಮನೆಗೆಲಸ ಮಾಡಿಕೊಂಡಿದ್ದರು.

ಆದರೆ, ಇಂದು ನಾಗರತ್ನ ಮನೆಗೆಲಸಕ್ಕೆ ತೆರಳುತ್ತಿದ್ದ ಸಮಯದಲ್ಲಿ ಪತಿ ಬಂಗಾರನಾಯಕ ಆಕೆಯ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಸರಸ್ವತಿಪುರಂ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲ್ಲೆಗೊಳಗಾದ ನಾಗರತ್ನರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಇದನ್ನೂ ಓದಿ: ಘೋರ ದುರಂತ.. ಗೆಳೆಯನ ಹುಟ್ಟುಹಬ್ಬದಂದೇ ಮಸಣ ಸೇರಿದ ಇಬ್ಬರು ಸ್ನೇಹಿತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.