ETV Bharat / state

ಅನಾರೋಗ್ಯದಿಂದ ಸಾವನ್ನಪ್ಪಿದ 'ಸ್ವೀಟಿ', ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

author img

By

Published : Sep 17, 2019, 9:26 PM IST

ಮೈಸೂರು ಜಿಲ್ಲಾ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 'ಸ್ವೀಟಿ' ಎಂಬ ಹೆಸರಿನ ಹೆಣ್ಣು ಶ್ವಾನವು ಅನಾರೋಗ್ಯದಿಂದ ಮೃತಪಟ್ಟಿದ್ದು, ಜಿಲ್ಲಾ ಪೊಲೀಸ್ ಘಟಕದಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಅನಾರೋಗ್ಯದಿಂದ ಮೃತಪಟ್ಟ "ಸ್ವೀಟಿ" ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಮೈಸೂರು: ಜಿಲ್ಲಾ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ‘ಸ್ವೀಟಿ’ ಎಂಬ ಹೆಣ್ಣು ಶ್ವಾನ ಅನಾರೋಗ್ಯದಿಂದ ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ ನಡೆಸಲಾಯಿತು.

Honest police dog
ಅನಾರೋಗ್ಯದಿಂದ ಮೃತಪಟ್ಟ 'ಸ್ವೀಟಿ' ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮತ್ತು ಸಿಬ್ಬಂದಿ ಗೌರವ ರಕ್ಷೆ ನೀಡಿ, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.

ಅಪರಾಧ ಪ್ರಕರಣ ಪತ್ತೆ ಕಾರ್ಯದಲ್ಲಿ ಮೂರು ವರ್ಷ ನಿರಂತರವಾಗಿ ಚಿನ್ನದ ಪದಕ ಗಳಿಸಿದ್ದ 5 ವರ್ಷದ ಸ್ವೀಟಿ, ಮೂರು ತಿಂಗಳಿನಿಂದ ಜ್ವರದಿಂದ ಬಳಲುತ್ತಿತ್ತು. ಇದು ಸೋಮವಾರ ಸಂಜೆ ಮೃತಪಟ್ಟಿತ್ತು. ಲಲಿತ ಮಹಲ್ ರಸ್ತೆಯಲ್ಲಿರುವ ಶ್ವಾನದಳದ ಕಚೇರಿ ಆವರಣದ ಮೈದಾನದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.

2014ರ ಮೇ 22ರಂದು ಪೊಲೀಸ್ ಇಲಾಖೆ ತಂದಿದ್ದ ಸ್ವೀಟಿ ಅಪರಾಧ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ 2016-2018ರ ಸಾಲಿನಲ್ಲಿ ಸತತವಾಗಿ ವಲಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿತ್ತು. ಜಿಲ್ಲಾ ಪೊಲೀಸ್ ಶ್ವಾನ ದಳದಲ್ಲಿ ಒಟ್ಟು 6 ಶ್ವಾನಗಳಿದ್ದು, ಅದರಲ್ಲಿ ಸ್ಫೋಟಕ ವಸ್ತು ಪತ್ತೆ ವಿಭಾಗದಲ್ಲಿ 3, ಅಪರಾಧ ಪತ್ತೆ ವಿಭಾಗದಲ್ಲಿ 2 ಶ್ವಾನಗಳಿವೆ. ಸ್ವೀಟಿ ನಿಧನದಿಂದ ಶ್ವಾನಗಳ ಸಂಖ್ಯೆ 5ಕ್ಕೆ ಇಳಿದಿದೆ.

Intro:ಶ್ವಾನBody:ಮೈಸೂರು: ಅನಾರೋಗ್ಯದಿಂದ ಮೃತಪಟ್ಟ ‘ಸ್ವೀಟಿ’ ಎಂಬ ಹೆಣ್ಣು ಶ್ವಾನಕ್ಕೆ ಸಕಾಲ ಸರ್ಕಾರಿ ಗೌರವದೊಂದಿಗೆ ಮಂಗಳವಾರ ಅಂತ್ಯಕ್ರಿಯೆ ನಡೆಸಲಾಯಿತು.
ಮೈಸೂರು ಜಿಲ್ಲಾ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ "ಸ್ವೀಟಿ" ಎಂಬ ಹೆಸರಿನ ಹೆಣ್ಣು ಶ್ವಾನವು ಅನಾರೋಗ್ಯದಿಂದ ಸೋಮವಾರ  ಮೃತಪಟ್ಟಿದ್ದು ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಗೌರವ ರಕ್ಷೆ ನೀಡಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು.
ಅಪರಾಧ ಪ್ರಕರಣ ಪತ್ತೆ ಕಾರ್ಯದಲ್ಲಿ ಮೂರು ವರ್ಷ ನಿರಂತರವಾಗಿ ಚಿನ್ನದ ಪದಕ ಗಳಿಸಿದ್ದ ೫ ವರ್ಷದ ಸ್ವೀಟಿ, ಮೂರು ತಿಂಗಳಿನಿಂದ ಜ್ವರದಿಂದ ಬಳಲುತ್ತಿದ್ದು, ಸೋಮವಾರ ಸಂಜೆ ಮೃತಪಟ್ಟಿತು. ಲಲಿತ ಮಹಲ್ ರಸ್ತೆಯಲ್ಲಿರುವ ಶ್ವಾನದಳದ ಕಚೇರಿ ಆವರಣದ ಮೈದಾನದಲ್ಲಿ ಮಂಗಳವಾರ ಅಂತ್ಯಕ್ರಿಯೆ ನೆರವೇರಿತು.೨೦೧೪ರ ಮೇ ೨೨ರಂದು ಪೊಲೀಸ್ ಇಲಾಖೆ ಕರೆ ತಂದಿದ್ದ ಸ್ವೀಟಿ ಅಪರಾಧ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ೨೦೧೬,೨೦೧೭,೨೦೧೮ರ ಸಾಲಿನಲ್ಲಿ ಸತತವಾಗಿ ನಿರಂತರವಾಗಿ ವಲಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಳು.ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಒಟ್ಟು ೬ ಶ್ವಾನಗಳಿದ್ದು, ಅದರಲ್ಲಿ ಸ್ಪೋಟಕ ವಸ್ತು ಪತ್ತೆ ವಿಭಾಗದಲ್ಲಿ ೩, ಅಪರಾಧ ಪ್ತೆ ವಿಭಾಗದಲ್ಲಿ ೩ ಶ್ವಾನಗಳಿವೆ. ಸ್ವೀಟಿ ನಿಧನದಿಂದ ಶ್ವಾನಗಳ ಸಂಖ್ಯೆ ೫ಕ್ಕೆ ಇಳಿದಿದೆ. Conclusion:ಶ್ವಾನ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.