ETV Bharat / state

ಕುರಿಗಾಹಿ ಮಹಿಳೆ ಮೇಲೆ ಸಾಮೂಹಿಕ‌ ಅತ್ಯಾಚಾರ: ನಂಜನಗೂಡಲ್ಲಿ ನಾಚಿಕೆಗೇಡಿನ ಕೃತ್ಯ

author img

By

Published : Apr 15, 2022, 8:18 PM IST

ಏಪ್ರಿಲ್‌ 11ರಂದು ಸಂತ್ರಸ್ಥೆಯು ಆರೋಪಿ ರಾಜು ಎಂಬಾತನ ಜಮೀನಿನ ಬಳಿ ಕುರಿ ಮೇಯಿಸುತ್ತಿದ್ದರು. ಈ ವೇಳೆ ಪ್ರತ್ಯಕ್ಷನಾದ ಆತ, ಆಕೆಯನ್ನು ದೈಹಿಕ ಸಂಪರ್ಕಕ್ಕಾಗಿ ಪುಸಲಾಯಿಸಿದ್ದಾನೆ. ತಕ್ಷಣ ನಿರಾಕರಿಸಿದ ಮಹಿಳೆಯನ್ನು ಬಲವಂತವಾಗಿ ಎಳೆದಾಡಿದ್ದಾನೆ.

ಕುರಿಗಾಹಿ ಮಹಿಳೆ ಮೇಲೆ ಸಾಮೂಹಿಕ‌ ಅತ್ಯಾಚಾರ: ನಂಜನಗೂಡಲ್ಲಿ ನಾಚಿಗೆಗೇಡಿನ ಕೃತ್ಯ
ಕುರಿಗಾಹಿ ಮಹಿಳೆ ಮೇಲೆ ಸಾಮೂಹಿಕ‌ ಅತ್ಯಾಚಾರ: ನಂಜನಗೂಡಲ್ಲಿ ನಾಚಿಗೆಗೇಡಿನ ಕೃತ್ಯ

ಮೈಸೂರು: ನಂಜನಗೂಡಿನ ತಗಡೂರು ಗ್ರಾಮದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಮಹಿಳೆಯ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ತಗಡೂರು ಗ್ರಾಮದ ರಾಜು ಬಂಧಿತನಾಗಿದ್ದು, ಉಳಿದಿಬ್ಬರು ಆರೋಪಿಗಳಾದ ಪುಟ್ಟಣ್ಣ ಹಾಗೂ ರವಿ ಪರಾರಿಯಾಗಿದ್ದಾರೆ.

ಏಪ್ರಿಲ್‌ 11ರಂದು ಸಂತ್ರಸ್ಥೆಯು ಆರೋಪಿ ರಾಜು ಎಂಬಾತನ ಜಮೀನಿನ ಬಳಿ ಕುರಿ ಮೇಯಿಸುತ್ತಿದ್ದರು. ಈ ವೇಳೆ ಪ್ರತ್ಯಕ್ಷನಾದ ಆತ, ಆಕೆಯನ್ನು ದೈಹಿಕ ಸಂಪರ್ಕಕ್ಕಾಗಿ ಪುಸಲಾಯಿಸಿದ್ದಾನೆ. ತಕ್ಷಣ ನಿರಾಕರಿಸಿದ ಮಹಿಳೆಯನ್ನು ಬಲವಂತವಾಗಿ ಎಳೆದಾಡಿದ್ದಾನೆ. ಆರೋಪಿಯ ಕೃತ್ಯಕ್ಕೆ ಮಹಿಳೆ ತೀವ್ರವಾಗಿ ಪ್ರತಿರೋಧಿಸಿದ್ದರು. ಇದೇ ಸಂದರ್ಭದಲ್ಲಿ ಪುಟ್ಟಣ್ಣ ಹಾಗೂ ರವಿ ಎಂಬಿಬ್ಬರನ್ನು ಆತ ಸ್ಥಳಕ್ಕೆ ಕರೆಸಿಕೊಂಡ. ನಂತರ ಮೂವರೂ ಸೇರಿ ಮಹಿಳೆಯನ್ನು ಬಲವಂತವಾಗಿ ಪೊದೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಹಿಳೆ ಸ್ಥಳದಲ್ಲೇ ಕುಸಿದುಬಿದ್ದಿದ್ದಳು.

ಇದನ್ನೂ ಓದಿ: ಮೆಟ್ರೋ ಫೇಸ್-2: ಸುರಂಗ ಕೊರೆದು ಹೊರಬಂದ 'ಲಾವಿ'

ತನ್ನ ಪತ್ನಿ ಹಿಂದಿರುಗದ ಹಿನ್ನೆಲೆಯಲ್ಲಿ ಪತಿ ಆಕೆಯನ್ನು ಹುಡುಕಿಕೊಂಡು ಬಂದಾಗ ಅಸ್ವಸ್ಥಳಾಗಿ ಬಿದ್ದಿದ್ದು ಕಂಡುಬಂದಿದೆ. ಕೂಡಲೇ ಆಕೆಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ಯಾಚಾರ ನಡೆದ ಬಗ್ಗೆ ಸಮಾಹಿತಿ ನೀಡಲು ನಿರಾಕರಿಸಿದ ಮಹಿಳೆ, ಎರಡು ದಿನಗಳ ನಂತರ ವಿಚಾರ ತಿಳಿಸಿದ್ದಾಳೆ. ದೊಡ್ಡಕವಲಂದೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.