ETV Bharat / state

ಸಾಂಸ್ಕೃತಿಕ ನಗರಿಯಲ್ಲಿ ದೀಪಾವಳಿ ಸಂಭ್ರಮ: ಪಟಾಕಿ ಖರೀದಿ ಜೋರು

author img

By

Published : Oct 25, 2022, 3:20 PM IST

ಮೈಸೂರಿನಲ್ಲಿ ದೀಪಾವಳಿ ಸಂಭ್ರಮ ಹೆಚ್ಚಿಸಲು ಜನರು ಪಟಾಕಿ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು.

deepavali-celebrations-at-mysore
ಸಾಂಸ್ಕೃತಿಕ ನಗರಿಯಲ್ಲಿ ದೀಪಾವಳಿ ಸಂಭ್ರಮ : ಪಟಾಕಿ ಖರೀದಿ ಜೋರು

ಮೈಸೂರು: ಕೋವಿಡ್​ನಿಂದಾಗಿ ಕಳೆದೆರಡು ವರ್ಷದಿಂದ ಸರಳವಾಗಿ ಆಚರಿಸಲ್ಪಟ್ಟಿದ್ದ ದೀಪಾವಳಿ ಈ ಬಾರಿ ಸಾಂಸ್ಕೃತಿಕ ನಗರಿಯಲ್ಲಿ ಅದ್ದೂರಿಯಾಗಿ ಆಚರಣೆಯಾಗುತ್ತಿದೆ. ಮೂರು ದಿನದ ಹಬ್ಬದಲ್ಲಿ ಎರಡನೇ ದಿನವಾದ ಇಂದು ಸೂರ್ಯಗ್ರಹಣವೂ ಇದೆ. ಆದರೂ ಮಕ್ಕಳು ತಮ್ಮ ತಂದೆ, ತಾಯಿ ಜೊತೆ ಪಟಾಕಿ ಅಂಗಡಿಗಳಿಗೆ ಬಂದು ಖರೀದಿಯಲ್ಲಿ ತೊಡಗಿದ್ದಾರೆ.

ಜಿಲ್ಲೆಯ 60 ಕಡೆಗಳಲ್ಲಿ ತಾತ್ಕಾಲಿಕ ಪಟಾಕಿ ಕೇಂದ್ರಗಳನ್ನು ತೆರೆಯಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಪರಿಸರಕ್ಕೆ ಹಾನಿಯಾಗದ ಹಾಗೂ ಕಡಿಮೆ ಶಬ್ದವುಳ್ಳ ಗ್ರೀನ್ ಪಟಾಕಿ ಮಾರಾಟಕ್ಕೆ ಅನುಮತಿ ದೊರೆತಿದೆ. ಎಲ್ಲಾ ಪಟಾಕಿ ಬಾಕ್ಸ್‌ಗಳ ಮೇಲೆ ಗ್ರೀನ್ ಫೈರ್ ವರ್ಕ್ಸ್ ಎಂಬ ಲೇಬಲ್ ಇದೆ.

ಈಟಿವಿ ಭಾರತ ವರದಿಗಾರರಿಂದ ಪ್ರತ್ಯಕ್ಷ ವರದಿ

ಇತ್ತೀಚೆಗೆ ಜನರಲ್ಲಿ ಹಸಿರು ಪಟಾಕಿ ಬಗ್ಗೆ ಜಾಗೃತಿ ಉಂಟಾಗಿದ್ದು, ಅವುಗಳನ್ನೇ ಕೇಳಿ ಪಡೆಯುತ್ತಿದ್ದಾರೆ. ಅದರಲ್ಲಿ ಆಕಾಶ ಬುಟ್ಟಿ, ಕಲರ್ ಫುಲ್ ಸೌಂಡ್ ಲೆಸ್ ಪಟಾಕಿಗಳಿಗೆ ಬೇಡಿಕೆ ಹೆಚ್ಚು. ಫ್ಲವರ್ ಪ್ಲಾಟ್, ಕೃಷ್ಣ ಚಕ್ರ, ಸುರ್-ಸುರ್ ಬತ್ತಿಯಂತಹ ಪಟಾಕಿಗಳು ವಿಶೇಷ ಗಿಫ್ಟ್ ಪ್ಯಾಕ್ ರೂಪದಲ್ಲಿ ಮಾರುಕಟ್ಟೆಗೆ ಬಂದಿವೆ. ಪಟಾಕಿಗಳ ಕಚ್ಚಾ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಿದ್ದು, ಇದರಿಂದ ದರ ಹೆಚ್ಚಳವಾಗಿದೆ.

ಬಹು ಮುಖ್ಯವಾಗಿ ಗ್ರೀನ್ ಪಟಾಕಿ ಯಾವುದು ಎಂಬ ಗೊಂದಲ ಮಾರಾಟಗಾರರು ಹಾಗೂ ಕೊಂಡುಕೊಳ್ಳುವವರ ನಡುವೆಯಿದ್ದು ಆದರೂ ಗ್ರಾಹಕರ ಪಟಾಕಿ ಖರೀದಿ ಭರದಿಂದಲೇ ಸಾಗಿದೆ.

ಇದನ್ನೂ ಓದಿ :ಸೂರ್ಯಗ್ರಹಣ: ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಆತ್ಮಲಿಂಗ ದರ್ಶನಕ್ಕೆ ಅವಕಾಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.