ETV Bharat / state

Mysore crime: ಯುವ ಬ್ರಿಗೇಡ್ ಸದಸ್ಯನ ಕೊಲೆ ಪ್ರಕರಣ.. ಎಸ್​ಪಿ ಹೇಳಿದ್ದೇನು?

author img

By

Published : Jul 10, 2023, 6:13 PM IST

Updated : Jul 10, 2023, 6:26 PM IST

ಮೈಸೂರು ಯುವ ಬ್ರಿಗೇಡ್ ಸದಸ್ಯನ ಕೊಲೆ ಪ್ರಕರಣ-ಘಟನೆಗೆ ಯಾವುದೇ ಕೋಮು ಸಂಬಂಧ ಇಲ್ಲ- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸ್ಪಷ್ಟನೆ.

Mysore SP
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್

ಯುವ ಬ್ರಿಗೇಡ್ ಸದಸ್ಯನ ಕೊಲೆ ಪ್ರಕರಣ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಪ್ರತಿಕ್ರಿಯೆ..

ಮೈಸೂರು: ಟಿ ನರಸೀಪುರ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣದ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಪ್ರತಿಕ್ರಿಯಿಸಿದ್ದಾರೆ. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಶ್ರೀರಾಂಪುರ ಕಾಲೋನಿಯ ವೇಣುಗೋಪಾಲ್ (32) ಎಂಬಾತ ನಿನ್ನೆ(ಭಾನುವಾರ) ಹತ್ಯೆಯಾಗಿದ್ದರು. ಇವರು ಯುವ ಬ್ರಿಗೇಡ್​​ನ ಸದಸ್ಯ.

ಘಟನೆಗೆ ಕೋಮು ಸಂಬಂಧ ಇಲ್ಲ: ಪುನೀತ್ ರಾಜ್‍ ಕುಮಾರ್ ಫೋಟೋ ಅಳವಡಿಕೆ ವಿಚಾರಕ್ಕೆ ಹಾಗೂ ಬೈಕ್ ನಿಲ್ಲಿಸುವ ವಿಚಾರದಲ್ಲಿ ಜಗಳ ನಡೆದಿದೆ. ಈ ಜಗಳದಲ್ಲಿ ಯುವಕ ವೇಣುಗೋಪಾಲ್ (32) ಎಂಬಾತ ಕೊಲೆಗೀಡಾಗಿದ್ದಾರೆ. ಪರಿಚಯಸ್ಥರ ನಡುವೆ ಈ ಘಟನೆ ಆಗಿದೆ. ಇದಕ್ಕೆ ಯಾವುದೇ ಕೋಮು ಸಂಬಂಧ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸ್ಪಷ್ಟಪಡಿಸಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಸೆರೆಗಾಗಿ ಒಂದು ತಂಡವನ್ನು ರಚಿಸಲಾಗಿದೆ ಎಂದು ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ನಿನ್ನೆ ಹನುಮ ಜಯಂತಿ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ಥಳದಲ್ಲಿದ್ದ ಕೆಲವರು ಉಭಯ ಬಣಗಳನ್ನೂ ಸಮಾಧಾನಪಡಿಸಿದ್ದರು. ಇದಾದ ನಂತರ ಮತ್ತೆ ಗಲಾಟೆ ನಡೆದು ಓರ್ವನ ಕೊಲೆ ನಡೆದಿತ್ತು. ಸ್ಥಳಕ್ಕೆ ಡಿವೈಎಸ್ ಪಿ. ಗೋವಿಂದರಾಜು, ನರಸೀಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದರು. ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಮೃತದೇಹವನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು.

ಆಸ್ಪತ್ರೆಗೆ ಚಕ್ರವರ್ತಿ ಸೂಲಿಬೆಲೆ ಭೇಟಿ : ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಚಿಂತಕ, ಯುವ ಬ್ರಿಗೇಡ್​ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿದ್ದರು. ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಒತ್ತಾಯಿಸಿದ್ದರು. ಘಟನೆ ಸಂಬಂಧ ಟಿ ನರಸೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆರವಣಿಗೆ ವೇಳೆ ಫೋಟೋ ವಿಚಾರವಾಗಿ ಗಲಾಟೆಯಾಗಿತ್ತು. ಆಗ ನನ್ನ ಗಂಡ ಫೋಟೋ ತೆಗೆಯಿಸಿದ್ದರಿಂದ ಕೆಲವರು ಸಿಟ್ಟಾಗಿದ್ದರು. ಬಳಿಕ ಭಾನುವಾರ ಮಧ್ಯಾಹ್ನ ನನ್ನ ಗಂಡನನ್ನು ಕರೆದುಕೊಂಡು ಹೋಗಿ ಜಗಳವಾಡಿದ್ದರು. ನಂತರ ಸಂಜೆ ವೇಳೆ ರಾಜಿ ಸಂಧಾನದ ನೆಪದಲ್ಲಿ ಕರೆದೊಯ್ದು ಕೊಲೆ ಮಾಡಿದ್ದಾರೆ ಎಂದು ವೇಣುಗೋಪಾಲ್ ಪತ್ನಿ ಪೂರ್ಣಿಮಾ ಆರೋಪಿಸಿದ್ದರು.

ಇದನ್ನೂ ಓದಿ: ಎರಡು ಗುಂಪುಗಳ ನಡುವೆ ಗಲಾಟೆ: ಯುವಕನ ಹತ್ಯೆ

Last Updated : Jul 10, 2023, 6:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.