ETV Bharat / state

ಅಕ್ರಮ ಗೋ ಮಾರಾಟ, ಸಾಗಣೆ ಮಟ್ಟ ಹಾಕಿ: ಪೊಲೀಸರಿಗೆ ಗೃಹ ಸಚಿವರ ತಾಕೀತು

author img

By

Published : Feb 2, 2022, 5:36 PM IST

ಕೆಲವು ಭಾಗಗಳಲ್ಲಿ ಅಕ್ರಮ ಗೋವುಗಳ ಮಾರಾಟ ಹಾಗೂ ಸಾಗಣೆ ನಡೆಯುವ ಬಗ್ಗೆ ಮಾಹಿತಿಯಿದೆ. ಅದನ್ನು ತಕ್ಷಣವೇ ನಿಲ್ಲಿಸಬೇಕು. ಗ್ಯಾಂಬ್ಲಿಂಗ್ ಮತ್ತು ಮಟ್ಕಾದಂತಹ ಅವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಸೂಚಿಸಿದ್ದಾರೆ.

ಗೃಹ ಸಚಿವ ಅರಗ ಜ್ಞಾನೇಂದ್ರ
ಗೃಹ ಸಚಿವ ಅರಗ ಜ್ಞಾನೇಂದ್ರ

ಮೈಸೂರು: ಅಕ್ರಮ ಗೋವುಗಳ ಸಾಗಣೆ ಹಾಗೂ ಮಾರಾಟ ಚಟುವಟಿಕೆಗಳನ್ನು ಮಟ್ಟ ಹಾಕಬೇಕು. ಗ್ಯಾಂಬ್ಲಿಂಗ್ ಮತ್ತು ಮಟ್ಕಾದಂತಹ ಅವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ಸಿಬ್ಬಂದಿಗೆ ನಿರ್ದೇಶಿಸಿದ್ದಾರೆ.

ಇಂದು ಮೈಸೂರು ಪೊಲೀಸ್ ಜಿಲ್ಲಾ ಘಟಕದ ಪರಾಮರ್ಶನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇತ್ತೀಚೆಗೆ ಆನ್​​ಲೈನ್​​​ ಗ್ಯಾಂಬ್ಲಿಂಗ್ ನಿಷೇಧಿಸಿ ಕಾನೂನನ್ನು ತಂದಿದೆ. ಅದನ್ನು ನಿರ್ದಾಕ್ಷಿಣ್ಯವಾಗಿ ಜಾರಿಗೆ ತರಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: ಅಪರೂಪದ ಕಾಯಿಲೆಗೆ ತುತ್ತಾದ ಪುಟ್ಟ ಕಂದಮ್ಮ: ಆರ್ಥಿಕ ಸಹಾಯಕ್ಕಾಗಿ ಅಂಗಲಾಚಿದ ಬಡ ದಂಪತಿ

ಜಿಲ್ಲೆಯ ಕೆಲವು ಭಾಗಗಳಲ್ಲಿ ಅಕ್ರಮ ಗೋವುಗಳ ಮಾರಾಟ ಹಾಗೂ ಸಾಗಾಟ ನಡೆಯುವ ಬಗ್ಗೆ ಮಾಹಿತಿಯಿದೆ. ಅದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ನೆರೆಯ ರಾಜ್ಯ ಕೇರಳ ಗಡಿ ಭಾಗದಲ್ಲಿ ಚೆಕ್ ಪೋಸ್ಟ್​​ನನ್ನು ಬಿಗಿಗೊಳಿಸಿ ಕ್ರಮ ತೆಗೆದುಕೊಳ್ಳಿ ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳಿದ್ದು, ತಕ್ಷಣವೇ ಅಂಥವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ವಿಫಲವಾದ್ರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಜಿಲ್ಲೆಯಲ್ಲಿ ಮಟ್ಕಾ ದಂಧೆ ನಿಲ್ಲಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಗ್ಯಾಂಬ್ಲಿಂಗ್, ಕ್ರಿಕೆಟ್ ಬೆಟ್ಟಿಂಗ್, ಆನ್​​ಲೈನ್​​​ ಗೇಮ್ಸ್ ಗಳು ಬಂದ್ ಆಗಿವೆ. ಕ್ಲಬ್​ಗಳ ನಿಯಂತ್ರಣ ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.